4, 13, 22, 31, 7, 16, 25, 2, 11, 29 ಈ ದಿನಾಂಕದಲ್ಲಿ ಹುಟ್ಟಿದವರ ಭವಿಷ್ಯ ಹೀಗೆ ಇರುತ್ತದೆ

ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರವರ ಜನ್ಮ ನಕ್ಷತ್ರ, ಜನ್ಮಜಾತಕಗಳ ಲಗ್ನದ ಆಧಾರದ ಮೇಲೆ ಅವರ ಭವಿಷ್ಯ ನಿರ್ಧರಿತವಾಗಿರುತ್ತದೆ. ರಾಹು ಕೇತು ಗ್ರಹಗಳು ನಿಮ್ಮಲಗ್ನಕ್ಕೆ ಪ್ರವೇಶ ಪಡೆದಿದ್ದರೆ ಅಂತಹ ವ್ಯಕ್ತಿಗಳ ಕೈಯಲ್ಲಿ ಎಷ್ಟೇ ಹಣ ಇದ್ದರೂ ಸಹ ಯಾವುದಾದರೊಂದು ರೂಪದಲ್ಲಿ ಹಣ ಖರ್ಚಾಗುತ್ತದೆ. ಇನ್ನು ಈ ಕೆಳಕಂಡ ದಿನಾಂಕಗಳಲ್ಲಿ ಜನಿಸಿರುವ ವ್ಯಕ್ತಿಗಳು ಎಷ್ಟೇ ಉಳಿತಾಯ ಮಾಡಿದರೂ ಸಹ ಹಣ ಸ್ಥಿರವಾಗಿ ನಿಲ್ಲುವುದಿಲ್ಲ ಆ ದಿನಾಂಕಗಳನ್ನು ನೋಡುವುದಾದರೆ
4,13, 22, 31, 7 16 25 2 11, 29 ದಿನಾಂಕಗಳಲ್ಲಿ ಜನಿಸಿದ ವ್ಯಕ್ತಿಗಳು ಹಣ ಉಳಿತಾಯ ಮಾಡಲು ಎಷ್ಟೇ ಪ್ರಯತ್ನಿಸಿದರು ಸಹ ಇವರ ಬಳಿ ಹಣ ಸ್ಥಿರವಾಗಿ ನಿಲ್ಲುವುದಿಲ್ಲ.

ರಾಹು ಕೇತುಗಳ ಪ್ರಭಾವ ಇವರಿಗೆ ಹಣ ಒದಗಿ ಬರುವುದಿಲ್ಲ, ಬಂದರೂ ಸಹ ಉಳಿಯುವುದಿಲ್ಲ. ಇಂತಹ ಆರ್ಥಿಕ ಸಮಸ್ಯೆಗಳ ಪರಿಹಾರವಾಗಿ ಹಿಂದೆ ನಮ್ಮ ಗುರು ಹಿರಿಯರು ಕೆಲವೊಂದು ತಂತ್ರ ಪ್ರಯೋಗಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕತೆಯಲ್ಲಿ ಇವೆಲ್ಲವೂ ಮೂಢನಂಬಿಕೆ ಎಂಬಂತೆ ನಮಗೆ ಕಂಡರೂ ಸಹ ಕೆಲವೊಮ್ಮೆ ಇಂತಹ ಯಂತ್ರ ಪ್ರಯೋಗ ಸಮಸ್ಯೆಗಳನ್ನು ಪರಿಹಾರಿಸುತ್ತವೆ. ನಾವು ದೇವರಿಗೆ ಕಾಣಿಕೆ ಇಡಬೇಕಾದರೆ ವೀಳ್ಯದೆಲೆಯ ಮುಖಾಂತರವೇ ಕಾಣಿಕೆ ಇಟ್ಟು ಪ್ರಾರ್ಥಿಸುತ್ತೇವೆ.

ಅಂದರೆ ಅಷ್ಟರ ಮಟ್ಟಿಗೆ ಮಹತ್ವ ಈ ವೀಳ್ಯಾದೆಲೆಗೆ ಕೊಟ್ಟಿದ್ದೇವೆ. ವೀಳ್ಯಾದೆಲೆಯು ಧನ ವಶೀಕರಣ, ಜನ ವಶೀಕರಣ ಅಂತಹ ಯಂತ್ರಮಂತ್ರದಲ್ಲಿ ಮಹತ್ವ ಪಡೆದುಕೊಂಡಿದೆ. ಈ ಯಂತ್ರ ಪ್ರಯೋಗ ಮಾಡುವ ಪ್ರಕ್ರಿಯೆ ಅಂದರೆ ವೀಳ್ಯದೆಲೆಯೊಂದನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಚ್ಚಿ ಮಧ್ಯಭಾಗದಲ್ಲಿ ನಾಲ್ಕು ಬಟ್ಟಲಡಿಕೆಯನ್ನು ಇಟ್ಟು, ಅದರಜೊತೆಗೆ ನಾಲ್ಕು ಲವಂಗವನ್ನು ವೀಳ್ಯಾದೆಲೆಯ ಮಧ್ಯಭಾಗದಲ್ಲಿ ಇಟ್ಟು, ನೂರು ಸೇರಿಸಿ ಹಳದಿ ದಾರದಲ್ಲಿ ಆ ವೀಳ್ಯಾದೆಲೆಯನ್ನು ಕಟ್ಟಬೇಕು.

ಇದರಿಂದಾಗಿ ನಿಮಗೆ ಧನಾತ್ಮಕ ಶಕ್ತಿಯು ನಿಮ್ಮಲ್ಲಿ ವೃದ್ದಿಯಾಗುತ್ತದೆ. ನಂತರ ಈ ವೀಳ್ಯಾದೆಲೆಯ ಕಟ್ಟನ್ನು ನಿಮ್ಮ ಮೇಲ್ಭಾಗದ ಜೇಬಿನಲ್ಲಿ ಇರಿಸಿಕೊಳ್ಳಬೇಕು. ಕೆಳಜೇಬಿನಲ್ಲಿ ಇಡಕೂಡದು ಇದು ಲಕ್ಷ್ಮಿಯನ್ನು ನಿರ್ಲಕ್ಷ ಮಾಡಿದಂತಾಗುತ್ತದೆ. ಈ ವೀಳ್ಯದೆಲೆಯ ಯಂತ್ರ ಪ್ರಯೋಗವನ್ನು ಶುಕ್ರವಾರ ದಂದೇ ಪ್ರಾರಂಭಿಸಬೇಕು. ಶುಕ್ರವಾರದ ಬೆಳಿಗ್ಗೆಯ ಸಮಯ ಸೂರ್ಯೋದಯ ವಾಗುವಂತಹ ಸಮಯ 6 ರಿಂದ 7 ಸಮಯದಲ್ಲಿ ಇದನ್ನು ಮಾಡಬೇಕು.

ಇದನ್ನು ಪ್ರತಿನಿತ್ಯ ಬದಲಾಯಿಸುತ್ತಿರಬೇಕು, ಇದರ ಜೊತೆಗೆ ಹತ್ತರ್ ಸೆಂಟ್ ಅನ್ನು ಅಂದರೆ ಮಲ್ಲಿಗೆ ಹೂವಿನ ಸುವಾಸನೆ ಬರುವಂತಹ ಸುಗಂಧ ದ್ರವ್ಯವನ್ನು ನಿಮ್ಮ ಚರ್ಮದ ಮೇಲೆ ನೀವು ಅಂದು ಧರಿಸುವ ನಿಮ್ಮ ವಸ್ತ್ರದ ಮೇಲೆ ಸಿಂಪಡಿಸಿಕೊಂಡರೆ ನಿಮಗೆ ಜನಾಕರ್ಷಣೆ, ಧನಾಕರ್ಷಣೆ ಆಗುತ್ತದೆ ಇಂತಹ ವೀಳ್ಯ ದೆಲೆಯ ಯಂತ್ರ ಪ್ರಯೋಗಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಶಾಶ್ವತವಾಗಿ ಮುಕ್ತಿಗೊಂಡು ನಿಮ್ಮಜೀವನದಲ್ಲಿ ಧನಲಕ್ಷ್ಮಿಯು ಸ್ಥಿರವಾಗಿ ನೆಲೆಸುತ್ತಾಳೆ ಎಂದು ತಿಳಿಸುತ್ತಾರೆ.

%d bloggers like this: