ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಆರ್ಸಿಬಿ ತಂಡದ ಆಟಗಾರರಲ್ಲಿ ಭಾರಿ ಬದಲಾವಣೆ! ಹೌದು ಕ್ರಿಕೆಟ್ ಕ್ರೇಜ಼್ ಹುಟ್ಟಿಸುವ ಪಂದ್ಯಗಳು ಎಂದರೆ ಅದು ಐಪಿಲ್ ಪಂದ್ಯಗಳು, ಆದರೆ ಕಳೆದ ದಶಕಗಳಿಂದ ನಡೆಯುತ್ತಿರುವ ಐಪಿಎಲ್ ನಲ್ಲಿ ಒಂದು ಪಂದ್ಯವನ್ನು ಕೂಡ ಗೆಲ್ಲದ ಆರ್ಸಿಬಿ, ಸತತ ಸೋಲುಗಳಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಕಳೆದ 2020ರ ಐಪಿಎಲ್ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದರೂ ಕೂಡ ಪ್ಲೇಆಫ್ ಗೆ ಪ್ರವೇಶ ಮಾಡುವುದರಲ್ಲಿ ತೃಪ್ತಿ ಪಡೆದುಕೊಂಡಿತ್ತು. ತದ ನಂತರ ಆರ್ಸಿಬಿ ತಂಡದಲ್ಲಿ ಕ್ಯಾಪ್ಟನ್ಶಿಪ್ ಬದಲಾವಣೆ ಆಗಬೇಕು, ಒಂದಷ್ಟು ಆಟಗಾರರನ್ನು ಆರ್ಸಿಬಿ ತಂಡದಿಂದ ಕೈ ಬಿಡಬೇಕು ಎಂಬ ಕೂಗು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿತ್ತು.

ಐಪಿಎಲ್ ಪಂದ್ಯ ನಡೆದು ಕೆಲವೇ ತಿಂಗಳು ಆಗಿದೆ ಅಷ್ಟರಲ್ಲೇ, ಇದೀಗ ಆರ್ಸಿಬಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆಟಗಾರರನನ್ನು ಬದಲಾಯಿಸುವ ಕ್ರಮಕ್ಕೆ ಮುಂದಾಗಿದೆ. ಹಾಗಾದರೆ ಆರ್ಸಿಬಿ ತಂಡದ ಆಯ್ಕೆಯ ಸಮಿತಿಯ ಅಂತಿಮ ಪಟ್ಟಿಯಲ್ಲಿ ಯಾವ ಆಟಗಾರರು ಇದ್ದಾರೆ ಎಂಬುದನ್ನು ನೋಡುವುದಾದರೆ, ಪ್ರತಿ ವರ್ಷದಂತೆ ಈ ವರ್ಷದ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಲಿದ್ದಾರೆ, ಆದರೆ ಇದಕ್ಕೂ ಮುನ್ನ ನಾಯಕ ಸ್ದಾನವನ್ನು ಬದಲಾವಣೆಯ ಯೋಚನೆ ಮಾಡಿದ್ದರು ಎನ್ನಲಾಗಿದೆ.

ಇನ್ನುಆರ್ಸಿಬಿ ತಂಡದಲ್ಲಿ ಎಲ್ಲರ ಅಚ್ಚುಮೆಚ್ಚಿನ ಆಟಗಾರ ಆಗಿರುವ ಎಬಿ ಡಿವಿಲಿಯರ್ಸ್ ತಂಡದಲ್ಲಿ ಸ್ದಾನ ಉಳಿಸಿಕೊಂಡಿದ್ದಾರೆ. ಕಳೆದ ಐಪಿಎಲ್ ನಲ್ಲಿ ಆರ್ಸಿಬಿ ತಂಡಕ್ಕೆ ಆಪತ್ಬಾಂಧವ ರೀತಿಯಲ್ಲಿ ನೆರವಾಗಿದ್ದರು. ಇವರ 360 ಡಿಗ್ರಿಯ ಬ್ಯಾಟಿಂಗ್ ವೈಖರಿಯಿಂದ ಎಂತಹ ಬೌಲರ್ ಗಳಿಗೂ ಗಾಬರಿ ಹುಟ್ಟಿಸುತ್ತಾರೆ. ಸ್ಪಿನ್ನರ್ ಆದ ಯಜುವೆಂದರ್ ಚಹಲ್, ಮೊನ್ನೆ ಮುಗಿದ ಟೆಸ್ಟ್ ಕ್ರಿಕೆಟ್ ನಲ್ಲಿ ಅಭೂತ ಪೂರ್ವ ಆಟವಾಡಿ ದೇಶದ ಗಮನ ಸೆಳೆದಿರುವ ಆಟಗಾರರಾದ ವಾಷಿಂಗ್ ಟನ್ ಸುಂದರ್, ಮೊಹಮ್ಮದ್ ಸಿರಾಜ್ ಕೂಡ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರುಗಳ ಜೊತೆಗೆ ನವದೀಪ್ ಸೈನಿ, ಅಡಮ್ ಜಾಂಪ್, ಶಾಬಾಜ್ ಅಹ್ಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡ್ ಸನ್ ಆರ್ಸಿಬಿ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಇನ್ನು ಇವರ ಜೊತೆಯಾಗಿ ಹುಡುಗಿಯರ ಫೆವರೇಟ್ ಫೇವರೇಟ್ ಪ್ಲೇಯರ್ ಆಗಿರುವ ಕನ್ನಡಿಗ ದೇವದತ್ ಪಡಾಕ್ಕಲ್ ಮತ್ತೆ ಮಿಂಚಲು ಸಿದ್ದರಾಗಿದ್ದಾರೆ. ಪವನ್ ದೇಶಪಾಂಡೆ ಒಳಗೊಂಡಂತೆ ಬಹತೇಕರು ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು ಕೂಡ ಐಪಿಎಲ್ ಪಂದ್ಯಾವಳಿಗಳಲ್ಲಿ ಎಲ್ಲರ ಮನಗೆದ್ದಿದ್ದ ಆರ್ಸಿಬಿ ತಃಡದ ಕ್ರಿಸ್ ಮೋರಿಸ್ ಮತ್ತು ಆರನ್ ಫಿಂಚ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಹೀಗೆ ಮೊಯೀನ್ ಅಲಿ ಇಸುರು, ಉದಾನಾ, ಡೇಲ್ ಸ್ಟೇನ್, ಉಮೆಶ್ ಯಾದವ್, ಶಿವಮ್ ದುಬೆ, ಪವನ್ ನೇಗಿ ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಅವರನ್ನು ಆರ್ಸಿಬಿ ತಂಡದ ಪಟ್ಟಿಯಲ್ಲಿ ಹೊರಗುಳಿದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಇನ್ನೊಂದಷ್ಟು ಬದಲಾವಣೆ ಆಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.