ಆಕ್ಷನ್ ಪ್ರಿನ್ಸ್ ದೃವಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ಸಿದ್ದತೆ! ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ಪೊಗರು ಚಿತ್ರದ ಬಗ್ಗೆ ನಟ ದೃವಸರ್ಜಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯುಸ್ ನೀಡಿದ್ದಾರೆ. ಹೌದು ನಿನ್ನೆ ದೃವಸರ್ಜಾ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಲೈವ್ ಬಂದು, ಕೊರೋನ ದಾರಿದ್ರ್ಯಕಾಲ ಮುಗಿದಿದೆ. ಇನ್ನು ನೀವು ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಪೊಗರು ಸಿನಿಮಾವನ್ನು ಫೆಬ್ರವರಿ 19ರಂದು ಬಿಡುಗಡೆ ಮಾಡಲು ನಾವು ನಿರ್ಧಾರ ಮಾಡಿದ್ದೇವೆ.ನನಗೆ ಪೊಗರು ಚಿತ್ರದ ಬಗ್ಗೆ ಅಪಾರ ಭರವಸೆಯಿದೆ. ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ, ಸುಮಾರು ಮೂರುವರೆ ವರ್ಷದಿಂದ ಈ ಸಿನಿಮಾದ ತಂತ್ರಜ್ಞರು, ಪ್ರತಿಯೊಬ್ಬ ಕಲಾವಿದರು ಕೂಡ ಸಿನಿಮಾ ಚೆನ್ನಾಗಿ ಮೂಡಿಬರಲು ಸಹಕರಿಸಿದ್ದಾರೆ.

ದಯವಿಟ್ಟು ನೀವು ಎಲ್ಲರು ಚಿತ್ರಮಂದಿರಕ್ಕೆ ಬಂದು ಪೊಗರು ಸಿನಿಮಾವನ್ನು ನೋಡಿ ಆಶಿರ್ವದಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಈ ಪೊಗರು ಚಿತ್ರ ಕೇವಲ ಮಾಸ್ ಸಿನಿಮಾವಲ್ಲ, ಅಜ್ಜಿ ಮತ್ತು ಮೊಮ್ಮಗನ ಭಾವಾನಾತ್ಮಕ ಅಂಶವುಳ್ಳ ಸಿನಿಮಾ ಇದಾಗಿದೆ. ಇನ್ನು ಈ ಸಿನಿಮಾದಲ್ಲಿ ಡಾಲಿ ಧನಂಜಯ್, ಚಿಕ್ಕಣ್ಣ, ತಬಲಾ ನಾಣಿ, ಕುರಿ ಪ್ರತಾಪ್, ಗಿರಿಜಾ ಲೋಕೇಶ್, ಸುಮಿತ್ರಮ್ಮ ಹೀಗೆ ಹಲವಾರು ಕಲಾವಿದರ ದಂಡೇ ಇದೆ. ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಕೃಷ್ಣಲೀಲಾ ಮಯೂರಿ ಅವರು ಕೂಡ ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಈ ಪೊಗರು ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು, ಪೂಗರು ಸಿನಿಮಾದ ಕರಾಬು ಸಾಂಗ್ ಈಗಾಗಲೇ ನೂರು ಮಿಲಿಯನ್ ಗಡಿ ದಾಟದೆ. ಚಂದನ್ ಶೆಟ್ಟಿ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದು, ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಧೃವಸರ್ಜಾ ಪೊಗರು ಸಿನಿಮಾದಲ್ಲಿ ಡಬಲ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಿಗೆ ರಸದೌತಣ ನೀಡಲು ಇದೇ ಫೆಬ್ರವರಿ 19ರಂದು ಚಿತ್ರ ಬಿಡುಗಡೆ ಗೊಳ್ಳುತ್ತಿದೆ.