40 ದಿನಗಳ ಮೊದಲೇ ಕೆಜಿಎಫ್ ಚಾಪ್ಟರ್2ಗೆ ಬುಕ್ ಆಗುತ್ತಿವೆ ಕೇರಳದ ದೊಡ್ಡ ದೊಡ್ಡ ಚಿತ್ರ ಮಂದಿರಗಳು 

ಕನ್ನಡದ ಕೆಜಿಎಫ್ ಚಾಪ್ಟರ್2 ಚಿತ್ರಕ್ಕೆ ಟಕ್ಕರ್ ಕೊಡಲು ಹಿಂದಿ ಚಿತ್ರದ ಜೊತೆಗೆ ಸೌತ್ ತಮಿಳು ಸಿನಿಮಾ ಕೂಡ ಸಿದ್ದವಾಗಿದೆ. ಇದರ ಹಿನ್ನೆಲೆಯಲ್ಲಿ ಕೇರಳದಲ್ಲಿ ಕೆಜಿಎಫ್2 ಚಿತ್ರಕ್ಕೆ ಪೆಟ್ಟು ನೀಡಲು ತಮಿಳಿನ ಈ ಸ್ಟಾರ್ ನಟನ ಸಿನಿಮಾ ತಂಡ ಪಕ್ಕಾ ಪ್ಲಾನ್ ಮಾಡ್ಕೊಂಡಿದೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ. ಹಾಗಾದರೆ ಅದ್ಯಾವ ಪ್ಲಾನ್ ಏನು ಎತ್ತ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಕೆಜಿಎಫ್ ಚಾಪ್ಟರ್2 ಸಿನಿಮಾ ಇದೇ ಏಪ್ರಿಲ್ ತಿಂಗಳ 14ರಂದು ವರ್ಲ್ಡ್ ವೈಸ್ ಗ್ರ್ಯಾಂಡ್ ರಿಲೀಸ್ ಆಗಲಿದೆ. ಈ ಚಿತ್ರ ಕಣ್ತುಂಬಿಕೊಳ್ಳಲು ವಿಶ್ವಾದ್ಯಂತ ಸಿನಿ ಪ್ರೇಕ್ಷಕರು ಕಾತುರದಲ್ಲಿದ್ದಾರೆ. ಈಗಾಗಲೇ ಹೊಂಬಾಳೆ ಫಿಲಂಸ್ ಕೂಡ ಚಿತ್ರದ ಬಿಡುಗಡೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕೆಜಿಎಫ್2 ಚಿತ್ರ ಭಾರತದ ಬಹುತೇಕ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಆದರೆ ಇದೀಗ ಬಿಗ್ ಬಜೆಟ್ ಕೆಜಿಎಫ್2 ಚಿತ್ರಕ್ಕೆ ಪರೋಕ್ಷವಾಗಿ ಒಂದೆರಡು ಸಿನಿಮಾಗಳು ಹೊಡೆತ ನೀಡಲು ಕಾರಣವಾಗುತ್ತಿದೆ. ಆದರೆ ಕೆಜಿಎಫ್2 ಚಿತ್ರ ತಂಡ ಕಂಟೆಂಟ್ ಮತ್ತು ಮೇಕಿಂಗ್ ಮೇಲಿಟ್ಟಿರುವ ಆತ್ಮವಿಶ್ವಾಸ ನಂಬಿಕೆ ಯಿಂದ ಹಿಂದೆ ಸರಿಯದೇ ಏಪ್ರಿಲ್ 14ರಂದು ರಿಲೀಸ್ ಡೇಟ್ ಫಿಕ್ಸ್ ಮಾಡಿದೆ. ಇದರ ಜೊತೆಗೆ ಕೆಜಿಎಫ್2 ಚಿತ್ರಕ್ಕೆ ಟಕ್ಕರ್ ಕೊಡಲು ತಮಿಳು ಚಿತ್ರರಂಗದ ಇಳಯ ದಳಪತಿ ಖ್ಯಾತಿಯ ಸ್ಟಾರ್ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 14 ರಂದೇ ರಿಲೀಸ್ ಆಗುತ್ತಿದೆ. ಉತ್ತರ ಭಾರತದಲ್ಲಿ ಖಾನ್ ಗಳ ಕಾಟ ಆದ್ರೆ ಇತ್ತ ಸೌತ್ ನಲ್ಲಿ ಸ್ಟಾರ್ ನಟ ವಿಜಯ್ ಅವರ ಬೀಸ್ಟ್ ಸಿನಿಮಾ ಕೆಜಿಎಫ್2 ಚಿತ್ರಕ್ಕೆ ಪೈಪೋಟಿ ನೀಡುತ್ತಿದೆ.

ಕಾಲಿವುಡ್ ಸೂಪರ್ ಸ್ಟಾರ್ ನಟ ವಿಜಯ್ ಅವರಿಗೆ ಸೌತ್ ನಲ್ಲಿ ಅಪಾರ ಅಭಿಮಾನಿ ವಲಯವಿದೆ. ಈಗ ಹೊಸ ಸುದ್ದಿ ಏನೆಂದರೆ, ಕೆಜಿಎಫ್ ಚಿತ್ರತಂಡವು ಈಗಾಗಲೇ ಕೇರಳದಲ್ಲಿ ಚಿತ್ರಮಂದಿರಗಳನ್ನು ರೆಸೆರ್ವ್ ಮಾಡಲು ಶುರು ಮಾಡಿದೆಯಂತೆ. ಪ್ರಿಥ್ವಿರಾಜ್ ಸುಕುಮಾರನ್ ಅವರು ಕೆಜಿಎಫ್ ಎರಡನೇ ಚಾಪ್ಟರ್ಗೆ ಕೇರಳದ ದೊಡ್ಡ ದೊಡ್ಡ ಚಿತ್ರಮಂದಿರಗಳನ್ನು ಒಂದು ತಿಂಗಳ ಮೊದಲೇ ಬುಕ್ ಮಾಡಲು ಶುರು ಮಾಡಿದ್ದಾರೆ. ಕೆಜಿಎಫ್ ಎರಡನೇ ಚಾಪ್ಟರ್ ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿ ಸಡ್ಡು ಮಾಡಲಿದೆ ಎಂಬುದು ಈ ಮೂಲಕ ಗೊತ್ತಾಗುತ್ತಿದೆ. ಇದೆಲ್ಲದರ ಲೆಕ್ಕಾಚಾರ ನೋಡಿದರೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್2 ಚಿತ್ರಕ್ಕೆ ಟಕ್ಕರ್ ಕೊಡಲು ಈ ಎರಡೂ ಚಿತ್ರದ ಸಿದ್ಧವಾಗಿದೆ ಎಂದು ತಿಳಿಯುತ್ತದೆ.

%d bloggers like this: