ರಾಕಿಂಗ್ ಸ್ಟಾರ್ ಯಶ್ ಅವರ ಸಮಾಜಮುಖಿ ಚಿಂತನೆಗೆ ಇಡೀ ಭಾರತ ಚಿತ್ರರಂಗವೇ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಹೌದು ಕೆಜಿಎಫ್ ಚಿತ್ರದ ನಂತರ ಯಶ್ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಏಪ್ರಿಲ್ ತಿಂಗಳಲ್ಲಿ ತೆರೆಕಂಡ ಕೆಜಿಎಫ್2 ಚಿತ್ರದ ನಂತರ ಯಶ್ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಅಪಾಯ ಜನಪ್ರಿಯತೆ ಪಡೆದುಕೊಂಡು ಹೊರ ದೇಶಗಳಲ್ಲೂ ಸಹ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಂದು ರಾಕಿ ಬಾಯ್ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಅಂದರೆ ದೇಶದ ಯಾವ ಮೂಲೆಗೆ ಹೋದ್ರು ಕೂಡ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಯಶ್ ಅವರನ್ನ ರಾಕಿ ಬಾಯ್ ರಾಕಿ ಬಾಯ್ ಎಂದು ಕೂಗುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಜನಪ್ರಿಯತೆಯನ್ನ ಬಳಸಿಕೊಳ್ಳಲು ಅನೇಕ ಕಂಪನಿಗಳು ಮುಗಿ ಬಿದ್ದಿದ್ದಾರೆ.

ಅದರಂತೆ ಪಾನ್ ಮಸಾಲ ಕಂಪನಿಯೊಂದು ಯಶ್ ಅವರನ್ನ ಭೇಟಿ ಮಾಡಿ ತಮ್ಮ ಪ್ರಾಡಕ್ಟ್ ಪ್ರಚಾರದ ರಾಯಭಾರಿಯಾಗಿ ನಟಿಸಲು ಬರೋಬ್ಬರಿ ಐವತ್ತು ಕೋಟಿಗೂ ಹೆಚ್ಚು ಆಫರ್ ಮಾಡಿದ್ದಾರೆ. ಈ ಪಾನ್ ಮಸಾಲ ಕಂಪನಿಯ ಆಫರ್ ಅನ್ನ ಯಶ್ ಯಾವುದೇ ಮುಲಾಜಿಲ್ಲದೆ ತಿರಸ್ಕಾರ ಮಾಡಿದ್ದಾರೆ. ನಟ ಯಶ್ ಅವರು ಕೆಜಿಎಫ್2 ಚಿತ್ರಕ್ಕೆ ಕನಿಷ್ಟ ಅಂದ್ರು 20 ಕೋಟಿ ಸಂಭಾವನೆ ತೆಗೆದುಕೊಂಡಿರುತ್ತಾರೆ. ಇದಕ್ಕೆ ವರ್ಷಾನುಗಟ್ಟಲೆ ಅವರು ಶ್ರಮ ಪಡಬೇಕು. ಆದ್ರೆ ಕೇವಲ ಐದಾರು ನಿಮಿಷದಲ್ಲಿ ಬಂದೋಗುವ ಈ ಪಾನ್ ಮಸಾಲ ಜಾಹೀರಾತಿಗೆ ಯಶ್ ಒಪ್ಪಿಕೊಂಡಿದ್ರೆ ಬರೋಬ್ಬರಿ ಐವತ್ತು ಕೋಟಿ ರೂ ಅವರಿಗೆ ಸಿಗುತ್ತಿತ್ತು. ಆದರೆ ಯಶ್ ಅವರು ಆ ಕೆಲಸ ಮಾಡಲಿಲ್ಲ.



ತನ್ನನ್ನ ಇದೀಗ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಅನುಸರಿಸುತ್ತಿದ್ದಾರೆ. ಅವರು ನನ್ನ ಸಿನಿಮಾ ನೋಡಿ ಯಾವ ರೀತಿ ಇಷ್ಟ ಪಡುತ್ತಾರೋ ಅದೇ ರೀತಿಯಾಗಿ ನನ್ನ ವೈಯಕ್ತಿಕ ಜೀವನವನ್ನ ಕೂಡ ಗಮನ ಹರಿಸುತ್ತಾರೆ. ನಾನು ಈ ರೀತಿಯ ಸಮಾಜಕ್ಕೆ ಮಾರಕ ಅಂತಿರುವ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಉಂಟು ಮಾಡುವ ಪಾನ್ ಮಸಾಲ ಅಂತಹ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅದು ನಾನು ಸಮಾಜಕ್ಕೆ ನೀಡುವ ಕೆಟ್ಟ ಸಂದೇಶ ಆಗುತ್ತದೆ ಎಂಬುದನ್ನು ತಿಳಿದು ಈ ಪಾನ್ ಮಸಾಲ ಕಂಪನಿ ಆಫರ್ ಅನ್ನ ತಿರಸ್ಕಾರ ಮಾಡಿದ್ದಾರೆ. ಯಶ್ ಅವರ ಈ ನಿಲುವಿಗೆ ಇದೀಗ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.



ಈಗಾಗ್ಲೇ ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಅಂತಹ ದಿಗ್ಗಜ ನಟರು ಈ ಗುಟ್ಕಾ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಯಾವಾಗ ಸಾರ್ವಜನಿಕ ವಲಯದಲ್ಲಿ ಮತ್ತು ಅವರ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ಅಸಮಾಧಾನ ಹೊರ ಹಾಕಿದ್ರೋ ಅದಾದ ಬಳಿಕ ಈ ಜಾಹೀರಾತಿನಿಂದ ಅಮಿತಾಬ್, ಅಕ್ಷಯ್ ಕುಮಾರ್ ಅವರು ಹೊರ ಬಂದರು. ಇದೀಗ ನಟ ಯಶ್ ಅವರು ತನಗೆ ಕೋಟ್ಯಾಂತರ ಆಫರ್ ನೀಡಿ ಗುಟ್ಕಾ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಕೇಳಿದಾಗ ಖಡಕ್ ಆಗಿ ತಿರಸ್ಕಾರ ಮಾಡಿದ್ದಾರೆ. ಯಶ್ ಅವರ ಈ ಸಮಾಜಮುಖಿ ನಿಲುವು ನಿಜಕ್ಕೂ ಕೂಡ ಶ್ಲಾಘನೀಯವಾದುದ್ದಾಗಿದೆ.