500 ಸಂಚಿಕೆಗಳ ಸಂಭ್ರಮದಲ್ಲಿ ಕನ್ನಡದ ಖ್ಯಾತ ಧಾರಾವಾಹಿ

ಇತ್ತೀಚೆಗೆ ಕನ್ನಡದ ಕಿರುತೆರೆ ಧಾರಾವಾಹಿಗಳು ಯಾವ ಸಿನಿಮಾಗೂ ಕೂಡ ಕಡಿಮೆ ಇಲ್ಲ ಎಂಬಷ್ಟು ರಿಚ್ ಆಗಿ ಮೂಡಿ ಬರುತ್ತಿವೆ. ಅದು ಕಥೆ ಆಗಿರಬಹುದು ಅಥವಾ ಮೇಕಿಂಗ್ ಆಗಿರಬಹುದು, ಅದ್ದೂರಿಯಾಗಿ ಮೂಡಿ ಬರುತ್ತಿವೆ. ದಶಕಗಳ ಹಿಂದೆ ಧಾರಾವಾಹಿಗಳು ಅಂದರೆ ಕೌಟುಂಬಿಕ ಕಲಹಗಳು ಅತ್ತೆ ಸೊಸೆ ನಡೆಯುವ ಜಗಳ ಕುತಂತ್ರ ಹುನ್ನಾರಗಳ ಕಥಾ ಹಂದರವೇ ತುಂಬಿ ತುಳುಕುತ್ತಿದ್ದ ಕನ್ನಡ ಕಿರುತೆರೆಯಲ್ಲಿ ಇದೀಗ ಯಂಗ್ ಸ್ಟರ್ ಗಳಿಗೂ ಇಷ್ಟವಾಗುವಂತಹ, ಯುವ ಮನಸ್ಸುಗಳಿಗೆ ಹತ್ತಿರ ಆಗುವಂತಹ ಪ್ರೇಮ ಕಥಾ ಹಂದರ ಹೊಂದಿರುವ ಧಾರಾವಾಹಿಗಳು ಕೂಡ ಪ್ರಸಾರವಾಗುತ್ತಿವೆ. ಅವುಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಮೊದಲ ಸಾಲಿನಲ್ಲಿ ನಿಲುತ್ತದೆ.

ಏಕೆಂದರೆ ಈ ಕನ್ನಡತಿ ಧಾರಾವಾಹಿಯಲ್ಲಿ ಯುವ ಪ್ರೇಮಿಗಳ ಮನದಲ್ಲಿ ಮರೆಯಲ್ಲಿರುವ ಪ್ರೇಮದ ತೊಳಲಾಟಗಳು ವೀಕ್ಷಕರಿಗೆ ಬಹಳ ಇಷ್ಟವಾಗಿವೆ. ಜೊತೆಗೆ ಹರ್ಷ ಮತ್ತು ಭುವಿ ಪಾತ್ರದಲ್ಲಿ ನಟಿಸುತ್ತಿರುವ ನಟ ಕಿರಣ್ ರಾಜ್ ಮತ್ತು ನಟಿ ರಂಜಿನಿ ರಾಘವನ್ ಈ ಇಬ್ಬರ ಜೋಡಿ ವೀಕ್ಷಕರಿಗೆ ಸಖತ್ ಮೋಡಿ ಮಾಡಿದೆ. ಈ ಕನ್ನಡತಿ ಧಾರಾವಾಹಿಗೆ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ತುಂಬಾ ಅಚ್ಚು ಮೆಚ್ಚಾಗಿದೆ. ಕನ್ನಡ ಕಿರುತೆರೆಯ ಬಹು ಧೀರ್ಘ ವರ್ಷಗಳ ಅನುಭವ ಇರುವ ಜೈ ಮಾತಾ ಕಂಬೈನ್ಸ್ ಸಂಸ್ದೆಯು ಕನ್ನಡತಿ ಧಾರಾವಾಹಿಯ ನಿರ್ಮಾಣದ ಜವಬ್ದಾರಿಯನ್ನು ಹೊಂದಿದ್ದು, ಕನ್ನಡದ ಮಿಲನ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಕಾಶ್ ಅವರು ಈ ಕನ್ನಡತಿ ಧಾರಾವಾಹಿಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಯಶ್ ವಂತ್ ಅವರ ನವಿರಾದ ನಿರ್ದೇಶನ ಕನ್ನಡತಿ ಧಾರಾವಾಹಿಗಿದೆ. ಇನ್ನು ಕಲರ್ಸ್ ಕನ್ನಡದ ಬ್ಯೂಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಈ ಕನ್ನಡತಿ ಧಾರಾವಾಹಿಗೆ ಮೊದಲು ಲಕ್ಷ್ಮಿ ಟೀಚರ್ ಎಂಬ ಶೀರ್ಷಿಕೆ ಇಡುವ ಆಲೋಚನೆ ಇಟ್ಟುಕೊಂಡಿದ್ದರಂತೆ. ಆದರೆ ಸೋಶಿಯಲ್ ಮೀಡಿಯಾ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬಹುತೇಕ ಹುಡುಗಿಯರು ಹೆಮ್ಮೆಯ ಕನ್ನಡತಿ ಎಂಬ ಅಡಿ ಬರಹ ಬರೆದುಕೊಂಡಿರುವುದನ್ನ ಗಮನಿಸಿದ ಪರಮೇಶ್ವರ್ ಅವರು ಕನ್ನಡತಿ ಎಂಬ ಶೀರ್ಷಿಕೆಯನ್ನ ಅಂತಿಮವಾಗಿ ಈ ಧಾರಾವಾಹಿಗೆ ಇಟ್ಟರಂತೆ.
ಇನ್ನು ಈ ಕನ್ನಡತಿ ಧಾರಾವಾಹಿಯು ಕಳೆದ ವರ್ಷ 2020ರ ಜನವರಿ 27ರಿಂದ ಆರಂಭವಾಯಿತು.

ಕಥಾ ನಾಯಕನಾಗಿ ಕಿರಣ್ ರಾಜ್, ನಾಯಕಿಯಾಗಿ ರಂಜಿನಿ ರಾಘವನ್ ನಟಿಸಿದ್ದಾರೆ. ಇನ್ನಿತರೆ ಪ್ರಮುಖ ಪಾತ್ರಗಳಲ್ಲಿ ಸಾರಾ ಅಣ್ಣಯ್ಯ, ಚಿತ್ಕಲ ಬಿರಾದರ್, ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ವಿಕಾಸ್ ನೇಗಿಲೋಣಿ, ಪರಂ ಮತ್ತು ಮಂಜುನಾಥ್ ಭಟ್ ಅವರು ಚಿತ್ರಕಥೆ ಬರೆದಿದ್ದಾರೆ. ಯೋಗೀಶ್ ಗೌಡ ಕ್ಯಾಮರ ಕೈ ಚಳಕ ತೋರಿದ್ದಾರೆ. ಈ ಎಲ್ಲರ ಪರಿಶ್ರಮ ಕನ್ನಡತಿ ಧಾರಾವಾಹಿ ಇಂದು ನಾಡಿನ ಮೂಲೆ ಮೂಲೆ ಗಳಲ್ಲಿ ಅಪಾರ ಜನಪ್ರಿಯತೆ ಪಡೆದು ಯಶಸ್ವಿಯಾಗಿ ಐನೂರು ಸಂಚಿಕೆಗಳನ್ನು ಪೂರೈಸಿ ರೋಚಕ ತಿರುವುಗಳ ನೀಡುತ್ತಾ ಸಾಗುತ್ತಿದೆ.

%d bloggers like this: