500ರ ಗಡಿ ದಾಟಿದ ಕನ್ನಡದ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿ

ಕನ್ನಡ ಜನಪ್ರಿಯ ಕಿರುತೆರೆ ವಾಹಿನಿಯಲ್ಲಿ ಒಂದಾಗಿರುವ ಜೀ಼ ಕನ್ನಡ ವಾಹಿನಿಯು ಗುಣಮಟ್ಟದ ರಿಯಾಲಿಟಿ ಶೋ ಮತ್ತು ಉತ್ತಮ ಕಥೆಯುಳ್ಳ ಕೌಟುಂಬಿಕ ಧಾರಾವಾಹಿಗಳ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡಿದಿದೆ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ಧಾರಾವಾಹಿಗಳು ಅಪಾರ ಜನಪ್ರಿಯತೆಯ ಜೊತೆಗೆ ಟಿ.ಆರ್.ಪಿ. ರೇಟಿಂಗ್ ನಲ್ಲಿಯೂ ಕೂಡ ಉತ್ತಮ ಸ್ಥಾನದಲ್ಲಿವೆ. ಅಂತೆಯೇ ಜನ ಮನ ಗೆದ್ದಿರುವ ಧಾರಾವಾಹಿಗಳ ಪೈಕಿ ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮರಾಠಿ ಮೂಲದ ಧಾರಾವಾಹಿಯೊಂದರ ರಿಮೇಕ್ ಆಗಿರುವ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ. ಕನ್ನಡ ಕಿರುತೆರೆ ಧಾರಾವಾಹಿಯಲ್ಲಿ ಅದ್ದೂರಿತನದ ಮೇಕಿಂಗ್ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟ ಮೊದಲ ಧಾರಾವಾಹಿ ಅಂದರೇ ಅದು ಜೊತೆ ಜೊತೆಯಲಿ.

ಶ್ರೀಮಂತ ಮಧ್ಯ ವಯಸ್ಕ ಆರ್ಯವರ್ಧನ್ ಎಂಬ ಉದ್ಯಮಿಗೆ ತನಗಿಂತ ಅರ್ಧ ವಯಸ್ಸಿನ ಮಧ್ಯಮ ವರ್ಗದ ಅನು ಸಿರಿಮನೆ ಎಂಬ ಯುವತಿಯ ನಡುವೆ ಪ್ರೇಮಾಂಕುರವಾಗಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದು ಯಾವ ರೀತಿ ಬದುಕು ಸಾಗುತ್ತದೆ ಎಂಬ ಕಥಾ ಹಂದರ ಹೊಂದಿರುವ ಈ ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗಿನಿಂದ ಇಂದಿನವರೆಗೂ ವೀಕ್ಷಕರಿಗೆ ಅದೇ ಕುತೂಹಲ ಉಳಿಸಿಕೊಂಡು ಸಾಗುತ್ತಿದೆ. ಆರ್ಯವರ್ಧನ್ ಪಾತ್ರದಲ್ಲಿ ನಟಿಸಿರುವ ಅನಿರುದ್ದ್ ಮತ್ತು ಅನು ಸಿರಿಮನೆ ಪಾತ್ರದಲ್ಲಿ ನಟಿಸಿರುವ ನಟಿ ಮೇಘಾಶೆಟ್ಟಿ ಜೋಡಿ ವೀಕ್ಷಕರಿಗೆ ಮೋಡಿ ಮಾಡಿವೆ.

2019 ರಲ್ಲಿ ಆರಂಭವಾದ ಈ ಧಾರಾವಾಹಿ ಇಂದಿಗೂ ಕೂಡ ಅದೇ ಸ್ವಾರಸ್ಯಕರ ಕಥಾಹಂದರ ಮೂಲಕ ವೀಕ್ಷಕರಿಗೆ ಎಲ್ಲಿಯೂ ಬೋರ್ ಹೊಡಿಸಿದಂತೆ ನೋಡಿಸಿಕೊಂಡು ಹೋಗುತ್ತಿದೆ. ಯಶಸ್ವಿಯಾಗಿ ಸಾಗುತ್ತಿರುವ ಈ ಜೊತೆ ಜೊತೆಯಲಿ ಧಾರಾವಾಹಿಗೆ ಇದೀಗ ಬರೋಬ್ಬರಿ 550 ಸಂಚಿಕೆ ಪೂರೈಸಿರುವ ಸಂಭ್ರಮ. ಜೊತೆ ಜೊತೆಯಲಿ ಕಥೆ ಮಾತ್ರ ಅಲ್ಲ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಕೂಡ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. ಇನ್ನು ಈ ಧಾರಾವಾಹಿಯಲ್ಲಿ ಇದೀಗ ಆರ್ಯವರ್ಧನ್ ಅವರ ಮೊದಲ ಹೆಂಡತಿಯ ರಾಜನಂದಿನಿಯ ಕಥೆ ಬಿಚ್ಚಿಟ್ಟುಕೊಳ್ಳುತ್ತಿದೆ.

ಈ ಮೂಲಕ ಜೊತೆ ಜೊತೆಯಲಿ ಧಾರಾವಾಹಿ ಮತ್ತೊಂದು ಹೊಸ ತಿರುವಿಗೆ ಹೊರಳುತ್ತಿದ್ದು, ಮತ್ತಷ್ಟು ರೋಚಕತೆ ಸೃಷ್ಟಿಸುತ್ತಿದೆ. ಇನ್ನು ಈ ಯಶಸ್ವಿ ಧಾರಾವಾಹಿಯಾದ ಜೊತೆ ಜೊತೆಯಲಿ ಯಲ್ಲಿ ಮುಖ್ಯಭೂಮಿಕೆಯಲ್ಲಿ ಆರ್ಯವರ್ಧನ್ ಆಗಿ ನಟಿ ಅನಿರುದ್ದ್, ಅನು ಸಿರಿಮನೆ ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ, ಝೆಂಡೆ ಪಾತ್ರದಲ್ಲಿ ನಟ ಯಶ್ ವಂತ್ ಬಿ, ಮೀರಾ ಪಾತ್ರದಲ್ಲಿ ಮಾನಸಾ ಮನೋಹರ್, ಪುಷ್ಪಾ ಪಾತ್ರದಲ್ಲಿ ನಟಿ ಅಪೂರ್ವಾ ಶ್ರೀ, ರಮ್ಯಾ ಪಾತ್ರದಲ್ಲಿ ನಟಿ ಪ್ರಿಯದರ್ಶಿನಿ ಕಾಣಿಸಿಕೊಳ್ಳುತ್ತಿದ್ದಾರೆ.

%d bloggers like this: