53 ವರ್ಷಗಳಿಂದ ಮೂಗಿನಲ್ಲಿ ನಾಣ್ಯ ಇಟ್ಟುಕೊಂಡು ಬದುಕುತ್ತಿದ್ದ ವ್ಯಕ್ತಿ

ಈ ವಿಸ್ಮಯ ಜಗತ್ತಿನಲ್ಲಿ ಪ್ರತಿನಿತ್ಯ ವಿಚಿತ್ರ ವಿಚಿತ್ರ ಘಟನೆಗಳು ಜರುಗುತ್ತಿರುತ್ತವೆ, ಒಂದೊಂದು ವಿಷಯಗಳು ನಂಬಲಸಾಧ್ಯವಾದರೂ ಅವು ಸತ್ಯವಾಗಿರುತ್ತವೆ. ಹೌದು ಅಂತಹ ಅಪರೂಪದ ವಿಚಿತ್ರ ಘಟನೆ ಒಂದು ರಷ್ಯಾ ದೇಶದಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 53 ವರ್ಷಗಳಿಂದ ರಷ್ಯಾದ ಒಬ್ಬ ವ್ಯಕ್ತಿಯ ಮೂಗಿನೊಳಗೆ ಒಂದು ನಾಣ್ಯ ಸಿಕ್ಕಿಹಾಕಿಕೊಂಡಿತ್ತು ಎಂದರೆ ನೀವು ನಂಬಲೇಬೇಕು. ಆ ವ್ಯಕ್ತಿ ಕೇವಲ ಆರು ವರ್ಷದ ಸಣ್ಣ ಮಗುವಿದ್ದಾಗ ಆಟವಾಡುವ ಸಮಯದಲ್ಲಿ ಮೂಗಿನೊಳಗೆ ಒಂದು ನಾಣ್ಯವನ್ನು ಗೊತ್ತಾಗದೆ ತೂರಿಸಿಕೊಂಡಿದ್ದಾನೆ. ಆದರೆ ಈ ವಿಷಯವನ್ನು ತನ್ನ ತಾಯಿಗೆ ಹೇಳಲು ಹೆದರಿದ ಬಾಲಕ ಸುಮ್ಮನೆಯಾಗಿ ದಿನಕಳೆದಂತೆ ಅದನ್ನು ತಾನೇ ಮರೆತು ಸಹಜವಾಗಿ ತನ್ನ ಜೀವನವನ್ನು ಸಾಗಿಸುತ್ತ ಬಂದಿದ್ದಾನೆ. ಆದರೆ ಇತ್ತೀಚಿಗೆ ಆ ವ್ಯಕ್ತಿಗೆ 59ವರ್ಷ ವಯಸ್ಸಾದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

ಆಗ ಪರೀಕ್ಷೆಮಾಡಲು ವೈದ್ಯರ ಹತ್ತಿರ ಹೋದಾಗ ವೈದ್ಯರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅವರ ಮೂಗಿನ ಬಲಭಾಗದ ಸ್ಕ್ಯಾನ್ ಅನ್ನು ಮಾಡಿದಾಗ ಮೂಗಿನ ಬಲ ಹೊಳ್ಳೆ ಬ್ಲಾಕ್ ಆಗಿರುವುದು ಗೊತ್ತಾಗಿದೆ. ಆಗ ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ವೈದ್ಯರು ಗಮನಿಸಿದ್ದು ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ವ್ಯಕ್ತಿಯ ಮೂಗಿನಿಂದ ನಾಣ್ಯವೊಂದನ್ನು ತೆಗೆದಿದ್ದಾರೆ. ಸ್ವತಹ ಆ ವ್ಯಕ್ತಿ ಕೂಡ ಇದರಿಂದ ಆಶ್ಚರ್ಯಚಕಿತರಾಗಿದ್ದಾರೆ. ಆ ನಾಣ್ಯ ಸೋವಿಯತ್ ರಷ್ಯಾದ ಒಂದು ಕೋಪನ್ ಎಂದು ಗುರುತಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಆ ವ್ಯಕ್ತಿಯ ಉಸಿರಾಟ ಮತ್ತೆ ಸಹಜಸ್ಥಿತಿಗೆ ಬಂದಿದ್ದು ವ್ಯಕ್ತಿ ಆರೋಗ್ಯವಂತನಾಗಿದ್ದಾನೆ. ನೋಡಿ 53 ವರ್ಷಗಳಿಂದ ಒಂದು ನಾಣ್ಯ ಮೂಗಿನ ಒಳಗೆ ಇದ್ದ ಕೂಡ ಯಾವುದೇ ಸಮಸ್ಯೆ ಆಗದೆ ಗಮನಕ್ಕೆ ಬಾರದಿರುವುದು ವಿಚಿತ್ರ ಘಟನೆಯೆ ಸರಿ.

%d bloggers like this: