6 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ ತಮಿಳು ನಟಿ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಂಗಮ ಚಿತ್ರದ ಮೂಲಕ 2008ರಲ್ಲಿ ಸ್ಯಾಂಡಲ್ ವುಡ್ ಗೆ ನಟಿ ವೇದಿಕಾ ಎಂಟ್ರಿ ಕೊಟ್ಟರು. 2008ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಇವರು ಲಕ್ಷ್ಮಿ ಎಂಬ ಹೆಸರಿನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಂಗಮ ಚಿತ್ರಕ್ಕೂ ಮೊದಲು ಇವರು 2ತಮಿಳು ಮತ್ತು ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಇವರ ಸಿನಿ ಪಯಣದಲ್ಲಿ ಇವರಿಗೆ ಬ್ರೇಕ್ ನೀಡಿದ್ದು ಕನ್ನಡದ ಸಂಗಮ ಸಿನಿಮಾ. ಈ ಸಿನಿಮಾದಲ್ಲಿ ವೇದಿಕಾ ಹಾಗೂ ನಟ ಗಣೇಶ್ ಅವರ ಕಾಂಬಿನೇಷನ್ನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಂಗಮ ಚಿತ್ರದ ನಂತರ ಕೊಂಚ ಬ್ರೇಕ್ ತಗೆದುಕೊಂಡಿದ್ದ ವೇದಿಕಾ ಮತ್ತೆ ಅವರು ಅಭಿನಯಿಸಿದ್ದು ಶಿವರಾಜ್ ಕುಮಾರ್ ನಟನೆಯ ಶಿವಲಿಂಗ ಚಿತ್ರದಲ್ಲಿ.

ಶಿವಲಿಂಗ ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಹಾರರ್ ಕಾಂಬಿನೇಶನ್ ನಲ್ಲಿ ವೇದಿಕಾ ಮಿಂಚಿದ್ದರು. ಶಿವಲಿಂಗ ಚಿತ್ರದಲ್ಲಿ ಇವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಇದರಿಂದ ನಟಿ ವೇದಿಕಾ ಅವರಿಗೂ ಕೂಡ ಒಳ್ಳೆಯ ಹೆಸರು ಬಂತು. ಶಿವಲಿಂಗ ಚಿತ್ರದ ನಂತರ ವೇದಿಕಾ ಅವರು ಮತ್ತೆ ಎರಡು ಕನ್ನಡ ಚಿತ್ರಕ್ಕೆ ಸಹಿ ಮಾಡಿದ್ದರು. ಗೌಡ್ರ ಹೋಟೆಲ್ ಮತ್ತು ಹೋಮ್ ಮಿನಿಸ್ಟರ್, ಈ ಎರಡು ಚಿತ್ರಗಳಲ್ಲಿ ವೇದಿಕಾ ನಟಿಸಿ ಸೈ ಎನಿಸಿಕೊಂಡರು. ಇದೀಗ ವೇದಿಕಾ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೌದು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ಗ್ಲಾಮರ್ ಗೊಂಬೆ ವೇದಿಕಾ ಮತ್ತೆ ಸ್ಯಾಂಡಲ್ವುಡ್ ನತ್ತ ಮುಖ ಮಾಡಿದ್ದಾರೆ. ಈ ಬಾರಿ ವೇದಿಕಾ ಅವರು ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿ ಗಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಗಣ ಸಿನಿಮಾವನ್ನು ಹರಿಪ್ರಸಾದ್ ಜಕ್ಕ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಟ ಪ್ರಜ್ವಲ್ ದೇವರಾಜ್, ನಟಿ ವೇದಿಕಾ, ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇದುವರೆಗೆ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ವೇದಿಕಾ ಅವರು ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ವೇದಿಕಾ ಅವರು ಗಣ ಚಿತ್ರದಲ್ಲಿ ಯಾವ ರೀತಿಯ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಗಣ ಸಿನಿಮಾದಲ್ಲಿ ಇವರದ್ದು ಸವಾಲಿನ ಪಾತ್ರವಾಗಿದೆಯಂತೆ. ಸಸ್ಪೆನ್ಸ್ ಮತ್ತು ತ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟನೆಗೆ ಅವಕಾಶವಿರುವಂತಹ ಪಾತ್ರವನ್ನು ಇವರಿಗೆ ನಿರ್ದೇಶಕರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

%d bloggers like this: