7,500 ಕೋಟಿ ಹಣ ಗಳಿಕೆ ಮಾಡಿ ದಾಖಲೆ ನಿರ್ಮಿಸಿದ ಸುಪ್ರಸಿದ್ಧ ಚಿತ್ರ

ಭಾರತದಲ್ಲಿ ಹಾಲಿವುಡ್ ಸಿನಿಮಾದ್ದೇ ಹವಾ, ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ, ಆಗುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಾಗಿದ್ದಂತಹ ತೆಲುಗಿನ ಪುಷ್ಪ, ತಮಿಳಿನ ಅಣ್ಣಾತೆ, ಮಲೆಯಾಳಂ ನ ಮರಕ್ಕಾರ್, ಹಿಂದಿ ಭಾಷೆಯ 83 ಸಿನಿಮಾಗಳು ತೆರೆ ಕಂಡವು.ಇದಲ್ಲದೆ ಕನ್ನಡದಲ್ಲಿಯೂ ಕೋಟಿಗೊಬ್ಬ 3, ಸಲಗ, ಭಜರಂಗಿ 2 ಬಡವ ರಾಸ್ಕಲ್ ಅಂತಹ ಸಿನಿಮಾಗಳು ತೆರೆಕಂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿವೆ. ಜೊತೆಗೆ ಉತ್ತಮ ಗಳಿಕೆಯನ್ನ ಕೂಡ ಮಾಡಿವೆ. ಆದರೆ ಭಾರತೀಯ ಚಿತ್ರರಂಗದ ಮಾರುಕಟ್ಟೆಯಲ್ಲಿ ವಿದೇಶಿ ಸಿನಿಮಾವೊಂದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಆರ್ಭಟ ಮಾಡುತ್ತಿದೆ.

ಮಾರ್ವೆಲ್ ಸ್ಟುಡಿಯೋಸ್, ಕೊಲಂಬಿಯಾ ಪಿಕ್ಚರ್ಸ್, ಪಾಸ್ಕಲ್ ಪಿಕ್ಚರ್ಸ್ ಸಂಸ್ಥೆಯಡಿಯಲ್ಲಿ ಕೆವಿನ್ ಅವರ ನಿರ್ಮಾಣದಲ್ಲಿ ಜಾನ್ ವಾಟ್ಸ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸ್ಪೈಡರ್ ಮ್ಯಾನ್ ನೋ ವೇ ಸಿನಿಮಾ ಜಗತ್ತಿನಾದ್ಯಂತ ಡಿಸೆಂಬರ್ 17 ರಂದು ಬಿಡುಗಡೆ ಆಗಿದೆ. ವಿಶೇಷ ಅಂದರೆ ಈ ಚಿತ್ರ ಒಂದು ದಿನ ಮುನ್ನವೇ ಅಂದರೆ ಡಿಸೆಂಬರ್ 16 ರಂದು ಭಾರತದಲ್ಲಿ ರಿಲೀಸ್ ಆಗಿತ್ತು. ಸೋನಿ ಪಿಕ್ಚರ್ಸ್ ಸಂಸ್ಥೆ ಭಾರತದಲ್ಲಿ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಈ ಸ್ಪೈಡರ್ ಮ್ಯಾನ್ ಸಿನಿಮಾಗೆ ಮೈಕಲ್ ಜಿಯಾ ಚಿನೋ ಮ್ಯೂಸಿಕ್ ನೀಡಿದ್ದು, ಟಿಮ್ ಹಾಲೆಂಡ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳ ಅವತರಣೆಕೆಯಲ್ಲಿಯೂ ಕೂಡ ರಿಲೀಸ್ ಆಗಿ ಕೇವಲ ಎರಡು ವಾರದಲ್ಲಿಯೇ ದೇಶಾದ್ಯಂತ ಬರೋಬ್ಬರಿ ಏಳುವರೆ ಇಂದ ಎಂಟು ಸಾವಿರ ಕೋಟಿ ವರೆಗೆ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿಯೇ ಈ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ಸರಿ ಸುಮಾರು 155 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆಯಂತೆ.

ಒಂದೆಡೆ ರಿಲೀಸ್ ಆಗಿದ್ದಂತಹ ಹಾಲಿವುಡ್ ನ ಮೆಟ್ರಿಕ್ಸ್ ಸಿನಿಮಾ ನೆಗೆಟಿವ್ ರೆಸ್ಪಾನ್ಸ್ ಪಡೆದುಕೊಂಡ ಕಾರಣ ಹಿಂದಿ, ತೆಲುಗಿನ ಪುಷ್ಪ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ಈ ಹಾಲಿವುಡ್ ಸ್ಪೈಡರ್ ಮ್ಯಾನ್ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು‌. ಇದಲ್ಲದೆ ಇನ್ನೊಂದೆಡೆ ಕ್ರಿಸ್ ಮಸ್ ಹಬ್ಬದ ಪರಿಣಾಮ ಈ ಚಿತ್ರ ನೋಡಲು ಪ್ರೇಕ್ಷಕರು ಕೂಡ ಮುಗಿ ಬಿದ್ದರು‌. ಭಾರತದಲ್ಲಿ ಭಾರತೀಯ ಸಿನಿಮಾಗಳು ಮಾಡದಷ್ಟು ಕಲೆಕ್ಷನ್ ಅನ್ನು ಈ ಹಾಲಿವುಡ್ ಸಿನಿಮಾ ಮಾಡಿರುವುದರಿಂದ ಎಲ್ಲರ ದೃಷ್ಠಿ ಈ ಚಿತ್ರದತ್ತ ನೆಟ್ಟಿದೆ. ಈ ಸ್ಪೈಡರ್ ಮ್ಯಾನ್ ನೋ ವೇ ಚಿತ್ರವನ್ನು ಥ್ರೀಡಿ, ಟೂ ಡಿಯಲ್ಲಿಯೂ ಕೂಡ ನೋಡುವ ಅವಕಾಶವಿರುವುದರಿಂದ ಸಿನಿ ಪ್ರೇಕ್ಷಕರು ಕೂಡ ಉತ್ಸುಕತೆಯಿಂದ ಈ ಚಿತ್ರ ನೋಡಲು ಮುಗಿಬಿದ್ದಿದ್ದಾರೆ.

%d bloggers like this: