ಆಹಾರಕ್ಕಾಗಿ ರೈತರು ಬೇಕಾಗಿಲ್ಲ, Swiggy ಇಂದ ಆರ್ಡರ್ ಮಾಡುತ್ತೇವೆ ಎಂದವನಿಗೆ ಸ್ವೀಗ್ಗಿ ಕೊಡ್ತು ಭರ್ಜರಿ ತಿರುಗೇಟು

ಸಾಮಾಜಿಕ ಜಾಲತಾಣಗಳೇ ಹಾಗೆ ಒಂದು ಸಣ್ಣ ವಿಷಯವು ಕೂಡಾ ಜಗತ್ತಿನ ತುಂಬೆಲ್ಲಾ ತಲುಪುವ ಶಕ್ತಿ ಇದೆ, ಇದೆ ಸಾಮಾಜಿಕ ಜಾಲತಾಣಗಳಿಂದ ಎಷ್ಟೋ ಕಲಾವಿದರು ಹೊರ ಜಗತ್ತಿಗೆ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಈ ಸಾಮಾಜಿಕ ಜಾಲತಾಣಗಳಿಗೆ ಒಬ್ಬ ವ್ಯಕ್ತಿಯ ಗೌರವವನ್ನು ಹಾಳುಮಾಡುವ ಶಕ್ತಿಯೂ ಕೂಡಾ ಇದೆ, ಹೀಗಾಗಿ ಸಾಮಾಜಿಕ ಜಾಲತಾಣ ಬಳಸುವವರು ಸ್ವಲ್ಪ ಎಚ್ಚೆತ್ತುಕೊಂಡು ಇರಬೇಕು. ಇದೀಗ ಅಂತಹದ್ದೇ ಒಂದು ವಿಷಯ ಭಾರತದಲ್ಲಿ ವೈರಲ್ ಆಗಿದ್ದು ಏನೆಂದು ಹೇಳುತ್ತೇವೆ ನೋಡಿರಿ. ನಿಮಗೆಲ್ಲಾ ಭಾರತದಲ್ಲಿ ಮನೆಗೆ ಆಹಾರ ಡೆಲಿವರಿ ಮಾಡುವ ಸ್ವೀಗ್ಗಿ ಹಾಗು ಝೋಮ್ಯಾಟೋ ಅಂತಹ ಕಂಪನಿಗಳ ಬಗ್ಗೆ ಗೊತ್ತೇ ಇದೆ. ದೂರದ ರಾಜ್ಯಗಳಿಂದ ಕೆಲಸಕ್ಕೆಂದು ದೊಡ್ಡ ದೊಡ್ಡ ನಗರಗಳಿಗೆ ಬರುವ ಲಕ್ಷಾಂತರ ವಲಸಿಗರ ಇಂತಹ ಫುಡ್ ಡೆಲಿವರಿ ಕಂಪನಿಗಳು ದೇವರಿದ್ದಂತೆ, ಎಷ್ಟೋ ಜನರು ಇದರ ಮೇಲೆಯೇ ಅವಲಂಬಿತರಾಗಿರುತ್ತಾರೆ.

ಈಗ ಇದೆ ಸ್ವೀಗ್ಗಿ ಕಂಪನಿ ಈಗ ಇಂಟರ್ನೆಟ್ ಅಲ್ಲಿ ದೊಡ್ಡ ಸುದ್ದಿಯಾಗಿದೆ ಕಾರಣ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದ ಒಂದೇ ಒಂದು ವಾಕ್ಯ. ದೆಹಲಿಯಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಈ ವಿಷಯವಾಗಿ ನಿರ್ಮಲತೈ ಎಂಬ ಟ್ವಿಟ್ಟರ್ ಬಳಕೆದಾರ ಹೀಗೆ ಬರೆದುಕೊಂಡಿದ್ದಾನೆ ‘ನಾನು ಇವತ್ತು ನನ್ನ ಗೆಳೆಯನೊಬ್ಬನ ಜೊತೆ ರೈತರು ಮಾಡುತ್ತಿರುವ ಹೋರಾಟದ ಪರವಾಗಿ ವಾದ ಮಾಡಿದೆ ಅವಾಗ ನನ್ನ ಗೆಳೆಯ, ನಾವು ಆಹಾರಕ್ಕಾಗಿ ರೈತರ ಮೇಲೆ ಅವಲಂಬಿತ ಆಗಿಲ್ಲ ಬದಲಾಗಿ ಸ್ವೀಗ್ಗಿ ಇಂದ ಆಹಾರ ಆರ್ಡರ್ ಮಾಡುತ್ತೇವೆ ಎಂದು ಹೇಳಿದ’ ಎಂದು ಟ್ವೀಟ್ ಮಾಡಿದ್ದಾನೆ.

ಇದಕ್ಕೆ ಟ್ವಿಟ್ಟರ್ ಅಲ್ಲಿ ಉತ್ತರಿಸಿದ ಸ್ವೀಗ್ಗಿ ಅವರು ‘ನಾವು ವಿದ್ಯೆಯನ್ನು ಮರುಪಾವತಿಸಲು ಆಗುವುದಿಲ್ಲ’ ಎಂಬ ವ್ಯಂಗ್ಯ ಉತ್ತರವನ್ನು ನೀಡಿದ್ದು ಕೆಲವೇ ನಿಮಿಷಗಳಲ್ಲಿ ಸ್ವೀಗ್ಗಿ ಅವರು ಮಾಡಿರುವ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಸ್ವೀಗ್ಗಿ ಅವರ ಈ ಉತ್ತರವನ್ನು ಸಾವಿರಾರು ಜನರು ಮೆಚ್ಚಿಗೆ ವ್ಯಕ್ತಪಡಿಸಿದರೆ ಇನ್ನು ಹಲವಾರು ಸ್ವೀಗ್ಗಿ ಹೇಳಿಕೆಯನ್ನು ಖಂಡಿಸಿದರು. ವಿಷಯ ತಿಳಿಯದೆ ಈತರ ರೈತರ ಹೋರಾಟಕ್ಕೆ ಬೆಂಬಲಿಸುತ್ತಿರುವುದು ಮೂರ್ಖತನ ಎಂದು ಸ್ವೀಗ್ಗಿ ಅನ್ನು ಬಹಿಸ್ಕರಿಸುತ್ತೇವೆ ಎಂದು ಟ್ವಿಟ್ಟರ್ ಅಲ್ಲಿ ಹರಿಹಾಯ್ದರು. ಹಿಂದೆ ಒಮ್ಮೆ ಇದೆ ಸಾಮಜಿಕ ಜಾಲತಾಣದಲ್ಲಿ ಝೋಮ್ಯಾಟೋ ಅವರ ಒಂದು ಹೇಳಿಕೆಗೂ ವಿರೋಧ ಬಂದಿತ್ತು.

%d bloggers like this: