ಆರು ವರ್ಷಗಳ ನಂತರ ಕನ್ನಡಕ್ಕೆ ಮರಳಿದ ನಟಿ, ಏಪ್ರಿಲ್ ಒಂದರಂದು ಉಪ್ಪಿ ಅವರ ಹೊಸ ಚಿತ್ರ ಬಿಡುಗಡೆ

ಶಿವರಾಜ್ ಕುಮಾರ ನಟನೆಯ ಶಿವಲಿಂಗ ಚಿತ್ರದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ನಟಿ ವೇದಿಕಾ ಅವರು ಮತ್ತೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ವೇದಿಕಾ ನಟಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸುಜಯ್ ಕೆ ಶ್ರೀಹರಿ ಅವರು ಹೋಮ್ ಮಿನಿಸ್ಟರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಜಿಬ್ರಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಕುಂಟುನಿ ಎಸ್.ಕುಮಾರ ಛಾಯಾಗ್ರಹಣವನ್ನು ನೀಡಿದ್ದು, ಆಂಟೋನಿ ಅವರ ಸಂಕಲನ ಈ ಚಿತ್ರಕ್ಕಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಹೋಂ ಮಿನಿಸ್ಟರ್ ಚಿತ್ರದಿಂದ ಉಪೇಂದ್ರ ಅವರಿಗೆ, ಈ ಚಿತ್ರದ ಮೂಲಕ ಅಭಿಮಾನಿಗಳ ಚಕ್ರವರ್ತಿ ಎಂದು ಬಿರುದು ನೀಡಲಾಗಿದೆ. ಅಭಿಮಾನಿಗಳ ಚಕ್ರವರ್ತಿ ಎನಿಸಿಕೊಳ್ಳುವುದು ಸಾಮಾನ್ಯವಾದ ವಿಷಯವೇನಲ್ಲ. ಹೆಸರಿಗೆ ತಕ್ಕಂತೆ ಯೂನಿಕ್ ಆಗಿ ತಮ್ಮ ಚಿತ್ರಗಳ ಮೂಲಕ ಒಳ್ಳೆಯ ಸಂದೇಶವನ್ನು ಅಭಿಮಾನಿಗಳಿಗೆ ನೀಡುತ್ತಾರೆ. ಇನ್ನು ಹೋಂ ಮಿನಿಸ್ಟರ್ ಚಿತ್ರದಲ್ಲಿ ನಟಿ ವೆದಿಕಾ, ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕಾ ಅವಿನಾಶ್, ತಿಲಕರು, ಲಾಸ್ಯ ಸುಧಾಬೆಳವಾಡಿ, ಶ್ರೀನಿವಾಸಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನು ಈ ಚಿತ್ರವನ್ನು ಪೂರ್ಣಚಂದ್ರ ನಾಯ್ಡು ಅವರು ನಿರ್ಮಿಸುತ್ತಿದ್ದಾರೆ.

ಇತ್ತೀಚೆಗೆ ಉಪೇಂದ್ರ ಹಾಗೂ ವೇದಿಕಾ ಜೋಡಿಯಾಗಿ ನಟಿಸಿರುವ ಹೋಂ ಮಿನಿಸ್ಟರ್ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಆನಂದ್ ಆಡಿಯೋ ಮೂಲಕ ಹೋಂ ಮಿನಿಸ್ಟರ್ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ, ಸಚಿವ ಮುನಿರತ್ನ ಗೋಲ್ಡನ್ ಸ್ಟಾರ್ ಗಣೇಶ್, ನಟ ಪ್ರಜ್ವಲ್ ದೇವರಾಜ್, ನಿರಂಜನ್ ಸುಧಿಂದ್ರ ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ನ ಶರವಣ ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದರು. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ವೇದಿಕಾ ಅವರ ಬಹುನಿರೀಕ್ಷಿತ ಹೋಂ ಮಿನಿಸ್ಟರ್ ಚಿತ್ರ ಇದೆ ಏಪ್ರಿಲ್1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

%d bloggers like this: