ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಭಾರಿ ನಿರಾಸೆ ಮೂಡಿಸಿದ ನಟ ರಜನಿಕಾಂತ್

ರಾಜಕೀಯದಿಂದ ಹಿಂದೆ ಸರಿದ್ರಾ ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜಿನಿಕಾಂತ್! ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಮೂರು ಪುಟದ ಪತ್ರಗಳು ಹೌದು ಎನ್ನುತ್ತಿವೆ. ನಟಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇದೇ ಡಿಸೆಂಬರ್ 31ರಂದು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಈ ಹಿಂದೆ ಅವರು ಮಾತನಾಡಿದ್ದರು. ಇದರ ನಡುವೆಯೇ ಅವರಿಗೆ ರಕ್ತದ ಒತ್ತಡ ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾಗಿತ್ತು ನಂತರ ಚೇತರಿಸಿಕೊಂಡು ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆ ಗೊಂಡರು, ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ರಾಜಕೀಯಕ್ಕೆ ರಜಿನಿ ಎಂಟ್ರಿ ಇದೀಗ ರಜಿನಿಯವರ ಈ ನಿರ್ಧಾರ ಅಭಿಮಾನಿಗಳಿಗೆ ಮತ್ತು ತಮಿಳುನಾಡಿನ ಜನತೆಗೆ ಭಾರಿ ನಿರಾಸೆಯಾಗಿದೆ.

ತಮ್ಮ ಹುಟ್ಟು ಹಬ್ಬದಿನದಂದು ರಜಿನಿಕಾಂತ್ ಅವರು ರಾಜಕೀಯಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ ಅಂದೇ ಹೊಸ ಪಕ್ಷದ ಹೆಸರನ್ನ ಬಹಿರಂಗ ಪಡಿಸುತ್ತಾರೆ ಎಂದು ಹಲವು ಮೂಲಗಳು ತಿಳಿಸಿದವು ಆದರೆ ಅಂದು ನಿರಾಸೆಯಾಯಿತು. ರಜಿನಿಕಾಂತ್ ಅವರಿಗೆ ರಾಜಕೀಯ ಕನಸು ಎರಡು ದಶಕಗಳ ಕಾಲದ್ದು ಅಂದಿನಿಂದ ಯಾವುದಾದರು ವಿಚಾರಕ್ಕೆ ಗಂಟುಬಿದ್ದು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ ಈ ವರ್ಷ ಅವರ ಕನಸು ಸಾಕಾರವಾಗುತ್ತದೆ ಎಂದು ಅವರು ಕೂಡ ಭಾವಿಸಿದರು. ಕಳೆದ ಬಾರಿ ಮಾತನಾಡಿದ ತಲೈವಾ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆ ತರೋಣ ಆಧ್ಯಾತ್ಮಿಕವಾಗಿ, ರಾಜಕೀಯವಾಗಿ, ಪ್ರಾಮಾಣಿಕಪಾರದರ್ಶಕ ಆಡಳಿತ ತರುತ್ತೇನೆ ಇದೇ ಡಿಸೆಂಬರ್ 31ರಂದು ನಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡುತ್ತೇನೆ ಎಂದು ವಿಶ್ವಾಸದ ನುಡಿಗಳನ್ನು ಆಡಿದ್ದರು.

ತಮಿಳುನಾಡಿನಲ್ಲಿ ರಜಿನಿಕಾಂತ್ ಅವರನ್ನು ಆರಾಧ್ಯ ದೈವರಾಗಿ ಪೂಜಿಸುತ್ತಾರೆ. ಕರುಣಾನಿಧಿ, ಜಯಲಲಿತಾ ಅವರು ಕಾಲವಾದ ನಂತರ ಪ್ರಬಲ ನಾಯಕತ್ವ ಹೊಂದಿರುವ ನಾಯಕ ಅಂದರೆ ಅದು ರಜಿನಿಕಾಂತ್. ಹಾಗಾಗಿಯೇ ಅವರನ್ನು ರಾಜಕೀಯಕ್ಕೆ ತರಬೇಕು ಎಂದು ಅವರ ಅಭಿಮಾನಿಗಳು ಮತ್ತು ತಮಿಳುನಾಡಿನ ಜನತೆ ಬಯಸಿದ್ದರು. ಆದರೆ ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ತಮ್ಮ ಆರೋಗ್ಯದ ಕಾರಣ ನೀಡಿ ಸುಧೀರ್ಘ ಮೂರು ಪುಟದ ಪತ್ರಗಳನ್ನು ಬರೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾನು ನೂತನ ರಾಜಕೀಯ ಪಕ್ಷವನ್ನು ಕಟ್ಟುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.

%d bloggers like this: