ಆಸ್ತಿಯಲ್ಲಿ ಇಂಗ್ಲೆಂಡ್ ರಾಣಿಯನ್ನೇ ಮೀರಿಸಿದ್ದಾರೆ ಇನ್ಫೋಸಿಸ್ ಒಡೆಯ ನಾರಾಯಣ ಮೂರ್ತಿ ಅವರ ಮಗಳು

ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ನೋಡೋಣ, ಅವರು ತಮ್ಮ ಶ್ರೀಮಂತಿಕೆ ಇಂದ ಮಾತ್ರ ಎಲ್ಲೆಡೆ ಹೆಸರುವಾಸಿ ಆಗಿಲ್ಲ ಬದಲಾಗಿ ತಮ್ಮ ವಿನಮ್ರತೆ, ಸಹಾಯ ಮನೋಭಾವ ಮತ್ತು ಸಾಮಾಜಿಕ ಕಾರ್ಯಗಳಿಂದ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ನಾರಾಯಣ್ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳಿಗೆ ರೋಹನ್ ಮತ್ತು ಅಕ್ಷತಾ ಎಂಬ ಮಕ್ಕಳಿರುವುದು ಎಲ್ಲರಿಗೂ ಗೊತ್ತು. ಈ ಅಕ್ಷತಾ ಅವರನ್ನು ಸದ್ಯ ಇಂಗ್ಲೆಂಡ್ ದೇಶದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರಿಷಿ ಸುಣಕ್ ಅವರಗೆ ಕೊಟ್ಟು ಮದುವೆ ಮಾಡಲಾಗಿದೆ. ರಿಷಿ ಸುನಕ್ ಉತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಅಲ್ಲದೆ ಪ್ರಾರಂಭದಲ್ಲಿಯೇ ಇಂಗ್ಲೆಂಡ್ ದೇಶಕ್ಕೆ ಉತ್ತಮ ಬಜೆಟ್ ಒಂದನ್ನು ಕೂಡ ರಿಷಿ ಅವರು ಮಂಡಿಸಿದ್ದು ಈಗ ಇತಿಹಾಸ.

ಆದರೆ ಈಗ ರಿಷಿ ಸುನಕ್ ಮತ್ತು ಅಕ್ಷತಾ ದಂಪತಿಗಳಿಗೆ ಹಣಕಾಸಿನ ವಿಷಯದಲ್ಲಿ ಒಂದು ಸಮಸ್ಯೆ ಎದುರಾಗಿದೆ. ಇಂಗ್ಲೆಂಡಿನ ಕಾನೂನಿನ ಪ್ರಕಾರ ದೇಶದ ಎಲ್ಲಾ ಮಂತ್ರಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರು ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಬಹಿರಂಗವಾಗಿ ಪ್ರಕಟಿಸಬೇಕೆಂಬ ನಿಯಮಗಳಿವೆ. ಸದನದಲ್ಲಿ ಮುಖ್ಯ ಹುದ್ದೆಯಲ್ಲಿ ಇರುವ ರಿಷಿ ಸುಣಕ್ ಅವರಿಗೆ ಇದೇ ವಿಷಯದಲ್ಲಿ ಈಗ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಹ್ಪುದು ಅಕ್ಷತಾ ಅವರು ತಮ್ಮ ಎಲ್ಲ ಆಸ್ತಿಯ ವಿವರಗಳನ್ನು ಬಹಿರಂಗಪಡಿಸದೇ ಇರುವುದು ಈಗ ಅವರಿಗೆ ಮುಳುವಾಗಿ ಪರಿಣಮಿಸಿದೆ. ಇಂಗ್ಲೆಂಡ್ ದೇಶದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ದಿಗಾರ್ಡಿಯನ್ ನಡೆಸಿದ ಸಂಶೋಧನೆ ಪ್ರಕಾರ ಅಕ್ಷತಾ ಮಿಲಿಯನ್ ಗಂಟಲೇ ಆಸ್ತಿಯನ್ನು ಘೋಷಿಸದೆ ಮುಚ್ಚಿಟ್ಟಿದ್ದಾರೆ.

ಆಸ್ತಿ ಎಷ್ಟರಮಟ್ಟಿಗೆ ಇದೆಯೆಂದರೆ ಅಕ್ಷತಾ ಅವರು ಇಂಗ್ಲೆಂಡ್ ದೇಶದ ರಾಣಿ ಎಲಿಜಿಬತ್ ಅವರಿಗಿಂತ ಶ್ರೀಮಂತೆ ಎಂದು ಅದು ವರದಿ ಮಾಡಿದೆ. ಅಕ್ಷತಾ ಮೂರ್ತಿಯವರು ತಮ್ಮ ತಂದೆ ಹಾಗೂ ಇನ್ಫೋಸಿಸ್ ಕಂಪನಿಯ ಸ್ಥಾಪಕ ನಾರಾಯಣ ಮೂರ್ತಿಯವರ ಕಂಪನಿಯಲ್ಲಿ ಅಂದಾಜು 4200ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಬರೋಬ್ಬರಿ 15 ಕಾಮನ್ ವೆಲ್ತ್ ರಾಷ್ಟ್ರಗಳಿಗ ರಾಣಿಯಾಗಿರುವ ಇಂಗ್ಲೆಂಡಿನ ರಾಣಿ ಕ್ವೀನ್ ಎಲಿಜಿಬತ್ ಅವರ ಆಸ್ತಿಯ ಮೌಲ್ಯ ಸುಮಾರು 3400 ನಾಲ್ಕು ನೂರು ಕೋಟಿ. ಆದರೆ ಸಮಸ್ಯೆ ಆಗಿರುವುದು ಅಕ್ಷತಾ ಮೂರ್ತಿಯವರು ತಮ್ಮ ಆಸ್ತಿವಿವರಗಳನ್ನು ಮುಚ್ಚಿಟ್ಟಿದ್ದ್ದುಇಂಗ್ಲೆಂಡ್ ದೇಶದ ಕಾನೂನುಗಳಿಗೆ ವಿರುದ್ಧವಾಗಿದೆ.

%d bloggers like this: