ಅಬ್ಬರದಿಂದ ನಡೆಯುತ್ತಿದೆ ಕ್ರಾಂತಿ ಚಿತ್ರದ ಶೂಟಿಂಗ್, ಪೋಲ್ಯಾಂಡ್ ದೇಶಕ್ಕೆ ಹಾರಿದ ಡಿಬಾಸ್ ಹಾಗೂ ತಂಡ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾದ ಕ್ರೇಜ಼್ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಹೌದು ಈ ಹಿಂದೆ ಯಜಮಾನ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕಿ ಶೈಲಜಾ ನಾಗ್ ಮತ್ತು ಬಿ.ಸುರೇಶ ಅವರು ಈ ಕ್ರಾಂತಿ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಶಿಕ್ಷಣದ ಕುರಿತು ಕಥಾ ವಸ್ತು ಹೊಂದಿರುವ ಈ ಕ್ರಾಂತಿ ಸಿನಿಮಾ ಅಕ್ಷರ ಕ್ರಾಂತಿ ಉಂಟು ಮಾಡಲು ಹೊರಟಿದ್ದಾರೆ ಸಂಗೀತ ನಿರ್ದೇಶಕ ಕಮ್ ನಿರ್ದೇಶಕ ವಿ.ಹರಿಕೃಷ್ಣ. ಯಜಮಾನ ಸಿನಿಮಾದ ಮೂಲಕ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿ ಗೆದ್ದಿದ್ದ ವಿ.ಹರಿಕೃಷ್ಣ ಅವರೇ ಕ್ರಾಂತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಯಾವ ಮಾಧ್ಯಮಗಳು ಕೂಡ ಪ್ರಚಾರ ನೀಡಲು ಮುಂದೆ ಬರುತ್ತಿಲ್ಲ.

ಅದಕ್ಕೆ ಪ್ರಮುಖ ಕಾರಣ ಅಂದರೆ ಕೆಲವು ತಿಂಗಳುಗಳ ಹಿಂದೆ ದರ್ಶನ್ ಮತ್ತು ಅವರ ಸ್ನೇಹಿತರು ಜೊತೆಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ನಡುವೆ ನಡೆದ ಹಣಕಾಸಿನ ವ್ಯವಹಾರದ ವಿವಾದದಲ್ಲಿ ದರ್ಶನ್ ಅವರು ಮಾಧ್ಯಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತರ ಒಟ್ಟಾದ ಮಾಧ್ಯಮ ದರ್ಶನ್ ಅವರಿಗೆ ಸಂಬಂಧಪಟ್ಟಂತೆ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ನಿರ್ಧರಿಸಿ ದರ್ಶನ್ ಅವರ ಯಾವ ಸಿನಿಮಾಗೂ ಪ್ರಚಾರ ನೀಡುತ್ತಿಲ್ಲ. ಆದರೆ ನಾಡಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ಪ್ರಚಾರ ಮಾಡುತ್ತಿದ್ದಾರೆ. ಕ್ರಾಂತಿ ಚಿತ್ರತಂಡ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಇದೀಗ ಪೋಲ್ಯಾಂಡ್ ದೇಶಕ್ಕೆ ಹಾಡು ಮತ್ತು ಕೆಲವು ದೃಶ್ಯ ಸನ್ನಿವೇಶ ಸೆರೆಯಿಡಿಯಲು ಹೊರಟಿದೆ. ಹೌದು ಪೋಲ್ಯಾಂಡ್ ದೇಶಕ್ಕೆ ಕ್ರಾಂಚಿ ಚಿತ್ರತಂಡ ಎರಡು ತಂಡಗಳಲ್ಲಿ ಪ್ರಯಾಣ ಬೆಳೆಸಿದೆ.

ಒಂದು ತಂಡದಲ್ಲಿ ನಾಯಕ ದರ್ಶನ್, ನಾಯಕಿ ರಚಿತಾ ರಾಮ್, ನಿರ್ಮಾಪಕಿ ಶೈಲಜಾ ನಾಗ್ ಇದ್ದರೆ, ಇನ್ನೊಂದು ತಂಡದಲ್ಲಿ ನಿರ್ದೇಶಕ ವಿ.ಹರಿಕೃಷ್ಣ ಮತ್ತು ನಿರ್ದೇಶನದ ತಂಡ ಪ್ರಯಾಣ ಬೆಳೆಸಿದೆ. ದರ್ಶನ್ ಮತ್ತು ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಕ್ರಾಂತಿ ಚಿತ್ರ ಕನ್ನಡದ ಬಹು ನಿರೀಕ್ಷೀತ ಚಿತ್ರವಾಗಿದ್ದು, ಈಗಾಗಲೇ ಈ ಸಿನಿಮಾದ ಟ್ರೇಲರ್ ಅಪಾರ ಮೆಚ್ಚುಗೆ ವ್ಯಕ್ತಪಡೆದುಕೊಂಡಿದೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿಭಿನ್ನ ಬಗೆಯಾಗಿ ಮಾಡುತ್ತಿದ್ದಾರೆ ಡಿಬಾಸ್ ಅಭಿಮಾನಿಗಳು. ಇನ್ನು ವಿಮಾನದಲ್ಲಿ ಪೋಲ್ಯಾಂಡ್ ದೇಶಕ್ಕೆ ಹೋಗುತ್ತಿರುವ ಫೋಟೋವನ್ನ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೇ ರೀತಿ ಶೈಲಜಾ ನಾಗ್ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

%d bloggers like this: