ಅಭಿಮಾನಿ ಮಾಡಿದ ಈ ಸಣ್ಣ ತಪ್ಪಿನಿಂದ ರೋಹಿತ್ ಶರ್ಮ ಸೇರಿ ಭಾರತದ 5 ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ಸಂಕಷ್ಟ

ಯಾವುದಾದರು ವಿಚಾರದಲ್ಲಿ ತಮಾಷೆ ಮಾಡಲು ಹೋಗಿ ಅವು ಕೆಲವೊಮ್ಮೆ ಗಂಭೀರ ಸ್ವರೂಪ ಪಡೆದು ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಇದಕ್ಕೆ ಉದಾಹರಣೆ ಎಂಬಂತೆ ಕ್ರಿಕೆಟ್ ಅಭಿಮಾನಿಯೊಬ್ಬ ಮಾಡಿದ ವೀಡಿಯೋ ಆಟಗಾರರ ಇಡೀ ತಂಡವನ್ನು ಐಸೋಲೇಷನ್ಗೆ ಕಳುಹಿಸುವಂತಾದ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಅಷ್ಟಕ್ಕೂ ಆ ಅಭಿಮಾನಿ ಯಾರು, ಗೊತ್ತಾ ಹಾಗಾದರೆ ಈ ವಿಚಾರದ ಬಗ್ಗೆ ನೀವು ಇನ್ನಷ್ಟು ವಿಚಾರ ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕಾಗಿದೆ. ಹೌದು ಮೂರನೇಯ ಟೆಸ್ಟ್ ಕ್ರಿಕೆಟ್ ಸರಣಿಯ ಸಲುವಾಗಿ ಆಸ್ಟ್ರೇಲಿಯಾ ತಾಣದಲ್ಲಿ ಬೀಡುಬಿಟ್ಟಿರುವ ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನಗಿಲ್, ನವದೀಪ್ ಶೈನಿ, ಪೃಥ್ವಿಶಾ ಈ ಐವರು ಆಟಗಾರರು ಊಟಕ್ಕೆಂದು ಸಿಡ್ನಿಯ ರೆಸ್ಟೋರೆಂಟ್ ಹೋಗಿದೆ. ಅದೇ ಹೋಟೇಲ್ ಅಲ್ಲಿ ಭಾರತೀಯ ಮೂಲದ ನವಲ್ ದೀಪ್ ಎಂಬ ಅಭಿಮಾನಿಯೊಬ್ಬ ಐವರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಅಭಿಮಾನಿಯಾದ ನವಲ್ ದೀಪ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಖುಷಿಪಟ್ಟರೆ ಇನ್ನು ಕೆಲವರು ಈ ಐವರು ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದರು, ಇದೀಗ ಇದೇ ವೀಡಿಯೋ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಅವರ ಗಮನಕ್ಕೆ ಬಂದಿದ್ದು ನಿಯಮಗಳ ಪ್ರಕಾರ ಕೊರೋನ ಮಾರ್ಗಸೂಚಿ ಪರಸ್ಪರ ಆಟಗಾರರು ಸಾರ್ವಜನಿಕ ವಲಯದಲ್ಲಿ ಇರಕೂಡದು ಎಂದು ಆದೇಶ ನೀಡಿದ್ದರು. ಆದರೆ ಈ ಐವರು ಆಟಗಾರರು ನಿಯಮವನ್ನು ಉಲ್ಲಂಘನೆ ಮಾಡಿರುವುದರಿಂದ ಈ ಐವರು ಆಟಗಾರರನ್ನು ಐಸೋಲೇಷನ್ ಅಲ್ಲಿ ಇಡಲಾಗಿದೆ. ಹಾಗೆಯೇ ಇವರ ಬಿಲ್ ಅನ್ನು ನಾನೇ ಕಟ್ಟಿದ್ದೇನೆ ಎಂದು ಅವರ ಬಿಲ್ ಹಾಳೆಯ ಫೋಟೋ ಸಹ ಹಾಕಿದ್ದಾನೆ. ಇನ್ನು ಈ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಕೊಹ್ಲಿ ನಾಯಕತ್ವವಿದ್ದ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದರು, ನಂತರ ಅಜಿಂಕ್ಯಾ ರಹಾನೆಯವರ ನಾಯಕತ್ವದಲ್ಲಿ ಎರಡನೇ ಪಂದ್ಯವನ್ನು ಗೆದ್ದಿತು. ಇದೀಗ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಜೊತೆಯಾಗಿದ್ದು ಭಾರತ ತಂಡಕ್ಕೆ ಬ್ಯಾಟಿಂಗ್ ಬಲ ಹೆಚ್ಚಾಗಲಿದೆ.

%d bloggers like this: