ಅಭಿಮಾನಿಗಳ ಆಸೆಯಂತೆ ಸಾಮಾನ್ಯರ ತರಹ ಅಭಿಮಾನಿಗಳ ಜೊತೆ ಸಮಯ ಕಳೆದ ಕಿಚ್ಚ ಸುದೀಪ್ ಅವರು

ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಗೆ ಸಜ್ಜಾಗಿದೆ. ರಂಗಿತರಂಗ ಖ್ಯಾತಿಯ ಅನುಪ್ ಬಂಡಾರಿ ಮತ್ತು ಕಿಚ್ಚ ಸುದೀಪ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳು ಬಹುತೇಕ ಕಂಪ್ಲೀಟ್ ಆಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಮತ್ತು ಕೋವಿಡ್ ನಿಯಂತ್ರಣಕ್ಕೋಸ್ಕರ ಸರ್ಕಾರ ರೂಪಿಸಿದ ಹಲವು ನಿಯಮಗಳಿಂದಾಗಿ ಯಾವುದೇ ಸಿನಿಮಾಗಳು ತೆರೆ ಕಾಣಲಿಲ್ಲ. ಈಗಾಗಲೇ ಸಿನಿಮಾದ ಬಿಡುಗಡೆಯ ದಿನಾಂಕವೂ ಎರಡೆರಡುಬಾರಿ ಮುಂದೂಡಲಾಗಿದೆ. ಯಾವಾಗ ಕಿಚ್ಚ ಅವರ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ನೋಡುತ್ತೇವೆ.

ಚಿತ್ರದ ರಿಲೀಸ್ ದಿನಾಂಕವನ್ನು ಖಚಿತಪಡಿಸಿ ಎಂದು ಸುದೀಪ್ ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗಾಗಲೇ ಸಕ್ಕತ್ ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರದ ರಿಲೀಸ್ ದಿನಾಂಕವನ್ನು ಈ ಬಾರಿ ಪಕ್ಕಾ ಗೊತ್ತು ಮಾಡಿಕೊಂಡು ಅಖಾಡಕ್ಕಿಳಿಯುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್ನೊಂದು ಕಡೆ ಅನೂಪ್ ಭಂಡಾರಿ ಅವರ ಜೊತೆಗೆ ಸುದೀಪ್ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಹರಡಿತ್ತು. ವಿಕ್ರಾಂತ್ ಚಿತ್ರದ ನಂತರ ಹೊಸ ಚಿತ್ರದ ಕೆಲಸಗಳು ಆರಂಭವಾಗಲಿವೆ ಎಂದು ಸುದ್ದಿ ಹರಿದಾಡುತ್ತಿತ್ತು. ಸುದೀಪ್ ಅವರು ಅನುಪ್ ಅವರ ಜೊತೆ ಮತ್ತೊಂದು ಚಿತ್ರ ಮಾಡಲಿದ್ದಾರೆ ಎಂಬುದನ್ನು ಖಚಿತ ಪಡಿಸಿರುವ ಸುದೀಪ್ ಅವರು, ಯಾವಾಗ ಕೆಲಸಗಳು ಪ್ರಾರಂಭವಾಗುತ್ತವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಕೊರೋನಾ ಕಾರಣಗಳಿಂದ ಸುದೀಪ್ ಅವರು ಅಭಿಮಾನಿಗಳನ್ನು ಬಹಳ ದಿನಗಳಿಂದ ಭೇಟಿ ಮಾಡಿರಲಿಲ್ಲ. ನಿನ್ನೆ ಬೆಳಿಗ್ಗೆ ಜೆಪಿ ನಗರದ ಸುದೀಪ್ ಅವರ ಮನೆಯ ಮುಂದೆ ಕಿಚ್ಚನ ಅಭಿಮಾನಿಗಳು ದಂಡು ಸೇರಿದ್ದರು. ಅಭಿಮಾನಿಗಳಿಗೋಸ್ಕರ ಮನೆಯಿಂದ ಹೊರಗಡೆ ಬಂದ ಸುದೀಪ್ ಅವರು ತಮ್ಮ ಸಂಡೆ ಯನ್ನು ಅಭಿಮಾನಿಗಳ ಜೊತೆ ಕಳೆದಿದ್ದಾರೆ. ಹೌದು ಸುಮಾರು ಹನ್ನೊಂದು ಗಂಟೆಗೆ ಮನೆಯಿಂದ ಹೊರಬಂದ ಕಿಚ್ಚ ಅವರು, ತಮ್ಮ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡು ಆಟೋಗ್ರಾಫ್ ನೀಡಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಸೂಪರ್ ಸಂಡೇ ಅನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದಕ್ಕಾಗಿ ಕಿಚ್ಚನ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

%d bloggers like this: