ಅಭಿಮಾನಿಗಳಲ್ಲಿ ಕ್ರೇಜ್ ಸೃಷ್ಟಿಸಿದೆ ರಾಕಿ ಭಾಯ್ ಕಾರು, ಇದರ ವಿಶೇಷ ಏನ್ ಗೊತ್ತಾ

ಸದ್ಯಕ್ಕೆ ಎಲ್ಲೆಡೆ ಕೆಜಿಎಫ್2 ಸಿನಿಮಾದ ಟ್ರೈಲರ್ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಕೆಜಿಎಫ್ ಚಾಪ್ಟರ್1 ಗಿಂತ ಚಾಪ್ಟರ್ ಟು ತುಂಬಾನೇ ಮಜವಾಗಿದೆ ಹಾಗೂ ಕುತೂಹಲವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ವಿಲನ್ ಪಾತ್ರದಲ್ಲಿ ಸಂಜಯ್ ದತ್ ಜೊತೆ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಅಧೀರ ಮತ್ತು ಯಶ್ ಅವರ ನಡುವಿನ ಫೈಟ್ ಸೀನ್ ಹೇಗಿರಬಹುದು ಎಂದು ಎಲ್ಲರೂ ಕುತೂಹಲದಿಂದ ಕಾದಿದ್ದಾರೆ. ಕೇವಲ ಇವರಷ್ಟೇ ಅಲ್ಲ ಪ್ರಧಾನಮಂತ್ರಿಯಾಗಿ ಕಾಣಿಸಿಕೊಂಡಿರುವ ರಮಿಕ ಸೆನ್ ಅವರ ಕ್ಯಾರೆಕ್ಟರ್ ಕೂಡ ಎಲ್ಲರ ಗಮನ ಸೆಳೆದಿದೆ. ಪ್ರತಿಯೊಬ್ಬರೂ ಟ್ರೈಲರ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ರತಿ ಸೀನುಗಳ ಬಗ್ಗೆನೂ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೇ ಆಗಲಿ ರಿಲೀಸ್ ಆಗುವ ದಿನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎಂದು ಹಲವರು ಟಿಕೆಟ್ ಬುಕ್ಕಿಂಗ್ ಮಾಡಲು ಕಾದುಕುಳಿತಿದ್ದಾರೆ. ಕೆಜಿಎಫ್ ಟ್ರೈಲರ್ ಎಬ್ಬಿಸಿರುವ ತೂಫಾನಿಗೆ ಹಳೆ ರೆಕಾರ್ಡ್ ಗಳೆಲ್ಲಾ ಮೂಲೆ ಸೇರಿವೆ. ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 200 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಾಣುವ ಮೂಲಕ ಹೊಸ ಇತಿಹಾಸವನ್ನು ಕೆಜಿಎಫ್ ಸೃಷ್ಟಿಸಿದೆ.

ಇಷ್ಟು ದಿನ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲಾ 24ಗಂಟೆಗಳಲ್ಲಿ ಮಾಡಿದ್ದ ರೆಕಾರ್ಡ್ ಗಳನ್ನು ಕೇವಲ 12 ಗಂಟೆಗಳಲ್ಲಿ ಕೆಜಿಎಫ್ ಚಿತ್ರ ಮುರಿದಿದೆ. ಕೆಜಿಎಫ್ ಟ್ರೈಲರ್ ನ ವೀಕ್ಷಣೆ ಹಾಗೂ ದಾಖಲೆಗಳನ್ನು ಪಕ್ಕಕ್ಕಿಟ್ಟರೆ ಟ್ರೈಲರ್ ನಲ್ಲಿ ಕಾಣಸಿಗುವ ಪ್ರತಿಯೊಂದು ಸನ್ನಿವೇಶ, ದೃಶ್ಯಗಳು ಮನಮೋಹಕವಾಗಿವೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಟ್ರೈಲರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಉಪಯೋಗಿಸಿರುವ ಕಾರ್ ತುಂಬಾ ವಿಶಿಷ್ಟವಾಗಿ ಕಾಣುತ್ತಿದೆ. ಈ ಕಾರನ್ನು ಸೂಕ್ಷ್ಮವಾಗಿ ಗಮನಿಸಿದವರು ಖಂಡಿತವಾಗಿ ಇದರ ಡೀಟೇಲ್ಸ್ ತಿಳಿದುಕೊಳ್ಳಲು ಪ್ರಯತ್ನಿಸಿರುತ್ತಾರೆ. ಕೆಜಿಎಫ್ ಸಿನಿಮಾ 1975ರ ಆಸುಪಾಸಿನಲ್ಲಿ ನಡೆಯುವ ಕಥೆಯಾಗಿದೆ. ಹೀಗಾಗಿ ಆಗಿನ ಕಾಲಕ್ಕೆ ತಕ್ಕಂತೆ ಕಾರುಗಳನ್ನು ಈ ಚಿತ್ರದಲ್ಲಿ ಉಪಯೋಗಿಸಲಾಗಿದೆ. ಅದರಲ್ಲೂ ಚಿತ್ರದ ಹೀರೋ ಉಪಯೋಗಿಸುವ ಕಾರು ಎಂದರೆ ಅದು ವಿಭಿನ್ನವಾಗಿ ಹಾಗೂ ಸ್ಟೈಲಿಶ್ ಆಗಿ ಇರಲೇಬೇಕು. ಹಾಗೆಯೇ ಯಶ್ ಅವರು ಕೂಡ ಅತ್ಯಂತ ಕಾಸ್ಟ್ಲಿ ಮತ್ತು ಸ್ಟೈಲಿಶ್ ಆಗಿರುವ ಕಾರನ್ನು ಈ ಚಿತ್ರದಲ್ಲಿ ಉಪಯೋಗಿಸಿದ್ದಾರೆ.

ವಿಶೇಷವೆಂದರೆ ಈ ಶೈಲಿಯ ಕಾರು 1969ರಲ್ಲಿ ಮನಿಫ್ಯಾಕ್ಚರ್ ಆಗಿದ್ದು, ಯು ಎಸ್ ಮೂಲದ ಫೋರ್ಡ್ ಕಂಪನಿ ಇದನ್ನು ತಯಾರಿಸಿದೆ. ಈ ಕಾರಿನ ಹೆಸರು ಫೋರ್ಡ್ ಮಸ್ಟಾಂಗ್ ಬಾಸ್ 429. ಇದು ಆಗಿನ ಕಾಲದ ಅತ್ಯಂತ ದುಬಾರಿ ಹಾಗೂ ಸ್ಟೈಲಿಶ್ ಕಾರ್ ಆಗಿದ್ದು, ಭಾರತದಲ್ಲಿ ಇದರ ಬೆಲೆ ಬರೋಬ್ಬರಿ 1.8 ಕೋಟಿ ರೂಪಾಯಿ ಎನ್ನಲಾಗಿದೆ. ಹಾಗೆಯೇ ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ಕಾರಿನ ನಂಬರ್ ಪ್ಲೇಟ್ ಕೂಡ ವಿಶೇಷವಾಗಿದೆ. ಕಾರಿನ ನಂಬರ್ ಪ್ಲೇಟ್ ನಲ್ಲಿ ಏನು ವಿಶೇಷ ವಿರುತ್ತದೆ ಎಂದು ಯೋಚಿಸುತ್ತಿದ್ದೀರಾ. ಹೌದು ವಿಶೇಷವೆಂದರೆ 8055 ಇದು ನಿಜ ಜೀವನದಲ್ಲಿ ಯಶ್ ಬಳಸುವ ಕಾರಿನ ನಂಬರ್ ಹಾಗೂ ಚಿತ್ರದಲ್ಲಿ ಬಳಸಿರುವ ಕಾರ್ ನಂಬರ್ ಒಂದೇ ಆಗಿದೆ. ಟ್ರೈಲರ್ ನ ಒಂದೆರಡು ಸೀನ್ ಗಳಲ್ಲಿ ಮಾತ್ರ ಈ ಕಾರು ಕಾಣಿಸಿಕೊಂಡಿದೆ. ಈ ಚಿತ್ರದಲ್ಲಿ ಅತಿ ಹೆಚ್ಚು ಚೇಸಿಂಗ್ ದೃಶ್ಯಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಒಟ್ಟಾರೆಯಾಗಿ ಕೆಜಿಎಫ್ ಟು ಚಾಪ್ಟರ್ ಒಂದು ಸರ್ಪ್ರೈಸ್ ಪ್ಯಾಕೇಜ್ ಎನ್ನಬಹುದು.

%d bloggers like this: