ಅಪ್ಪು ಅಭಿಮಾನಿಗಳಿಗೆ ಒಂದು ಇದೀಗ ಗುಡ್ ನ್ಯೂಸ್ ಹೊರ ಬಿದ್ದಿದೆ. ಅಪ್ಪು ಅವರನ್ನ ಕಳೆದುಕೊಂಡದ್ದ ಅತೀ ನೋವಿನ ಸಂಗತಿ. ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣ ಹೊಂದಿ ಎಂಟು ತಿಂಗಳು ಕಳೆದರು ಕೂಡ ಕನ್ನಡ ಚಿತ್ರರಂಗ ಮತ್ತು ಕರುನಾಡಿನ ಅಭಿಮಾನಿಗಳು ಮರೆಯಲು ಸಾಧ್ಯವಾಗುತ್ತಿಲ್ಲ. ಅದು ಸಾಧ್ಯವೂ ಕೂಡ ಅಲ್ಲ. ಅಷ್ಟರ ಮಟ್ಟಿಗೆ ಅಪ್ಪು ಅವರು ಎಲ್ಲರ ಮನದಲ್ಲಿ ಬೆರೆತು ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ನಿಧನದ ನಂತರ ಅವರು ನಟಿಸಿದ ಜೇಮ್ಸ್ ಸಿನಿಮಾ ರಿಲೀಸ್ ಆಯಿತು. ಅಪ್ಪು ಅಭಿಮಾನಿಗಳು ಅವರ ಅನುಪಸ್ಥಿತಿಯಲ್ಲಿ ಈ ಚಿತ್ರ ಕಣ್ತುಂಬಿಕೊಂಡು ಭಾವುಕರಾಗಿ ಕಣ್ಣೀರಾಕಿದ್ದರು. ಜೇಮ್ಸ್ ಪುನೀತ್ ರಾಜ್ ಕುಮಾರ್ ಅವರು ನಾಯಕ ನಟರಾಗಿ ಅಭಿನಯಿಸಿದ ಅಂತಿಮ ಚಿತ್ರ ಇದಾಗಿದ್ದರಿಂದ ಈ ಚಿತ್ರವನ್ನು ಕೋಟ್ಯಾಂತರ ಅಭಿಮಾನಿಗಳು ಮುಗಿಬಿದ್ದು ನೋಡಿದ್ದರು. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಜೇಮ್ಸ್ ದಾಖಲೆ ಕೂಡ ನಿರ್ಮಾಣ ಮಾಡಿತು.

ಇದೀಗ ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿರುವ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಅದ್ದೂರಿಯಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸಲು ಸಜ್ಜಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾದಲ್ಲಿ ಎಷ್ಟು ಆಸಕ್ತಿ ಇತ್ತೋ, ಅಷ್ಟೇ ಜಿಮ್, ಸೈಕ್ಲಿಂಗ್, ಡ್ಯಾನ್ಸ್, ಟ್ರಕ್ಕಿಂಗ್ ಅಂತಹ ಒಂದಷ್ಟು ಹವ್ಯಾಸ ಕೂಡ ಇತ್ತು. ಅದರ ಜೊತೆಗೆ ಅವರಿಗೆ ಪ್ರಕೃತಿಯ ಮೇಲೆ ವಿಶೇಷವಾದ ಪ್ರೀತಿ ಇತ್ತು. ಹಾಗಾಗಿಯೇ ಅವರು ಕರ್ನಾಟಕದ ಅರಣ್ಯ ನೈಸರ್ಗಿಕ ಸಂಪತ್ತು ಕುರಿತು ಡಾಕ್ಯುಮೆಂಟರಿ ಮಾಡಬೇಕು ಅನ್ನೋ ಹಂಬಲ ಮೂಡಿತ್ತು. ಅದರಂತೆ ಪುನೀತ್ ರಾಜ್ ಕುಮಾರ್ ಅವರು ಅಮೋಘ ವರ್ಷ ಅವರೊಟ್ಟಿಗೆ ಜೊತೆಗೂಡಿ ಗಂಧದಗುಡಿ ಎಂಬ ನೇಚರ್ ಡಾಕ್ಯುಮೆಂಟರಿ ಫಿಲ್ಮ್ ತಯಾರು ಮಾಡಲು ಮುಂದಾದರು.



ಈ ಚಿತ್ರ ಮಾಡಲು ಪುನೀತ್ ರಾಜ್ ಕುಮಾರ್ ರಿಯಲಿಸ್ಟ್ ಆಗಿಯೇ ಇರಬೇಕು ಅಂತೇಳಿ ನಾಡಿನುದ್ದಕ್ಕೂ ಇರುವ ವಿಶಿಷ್ಟ ವಿಭಿನ್ನ ಅರಣ್ಯ ಕಾಡು ಮೇಡುಗಳಲ್ಲಿ ನೈಜವಾಗಿ ಚಿತ್ರೀಕರಣ ಮಾಡಿಸಿದ್ದಾರೆ. ಈ ಡಾಕ್ಯುಮೆಂಟರಿ ಸಿನಿಮಾದಲ್ಲಿ ಅಪ್ಪು ಅವರು ಮೇಕಪ್ ಇಲ್ಲದೆ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರು ಇದ್ದಿದ್ದರೆ ಈ ಗಂಧದ ಗುಡಿ ಡಾಕ್ಯುಮೆಂಟರಿ ಸಿನಿಮಾ ಮತ್ತಷ್ಟು ಅದ್ದೂರಿತನದಲ್ಲಿ ಮೂಡಿ ಬರುತ್ತಿತ್ತು. ಈ ಡಾಕ್ಯುಮೆಂಟರಿ ಸಿನಿಮಾದಲ್ಲಿ ಅಪ್ಪು ಅವರು ಬಹುತೇಕ ಮಟ್ಟಿಗೇ ನಟಿಸಿದ್ದಾರೆ. ಇದರ ಜೊತೆಗೆ ನಿರ್ದೇಶಕ ಅಮೋಘವರ್ಷ ಅವರು ಅಪ್ಪು ಅವರ ಅನುಪಸ್ಥಿತಿಯಲ್ಲಿ ಕೂಡ ಒಂದಷ್ಟು ದೃಶ್ಯ ಸನ್ನಿವೇಶಗಳನ್ನ ಕಂಪ್ಲೀಟ್ ಮಾಡಿಕೊಂಡಿದ್ದು, ಈ ಡಾಕ್ಯುಮೆಂಟರಿ ಸಿನಿಮಾವನ್ನು ಇದೀಗ ಸಂಪೂರ್ಣವಾಗಿ ಮುಗಿಸಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರ ಪ್ರಕಾರ ಇದು ಡಾಕ್ಯುಮೆಂಟರಿ ಸಿನಿಮಾ ಎಂದು ಹೇಳಲಾಗುವುದಿಲ್ಲ.



ಇದೊಂದು ಫೀಚರ್ ಸಿನಿಮಾ ಅಂತೆ. ಯಾವ ಫೀಚರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಗಂಧದಗುಡಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಗಂಧದಗುಡಿ ಚಿತ್ರವನ್ನು ಇದೇ ನವೆಂಬರ್ ತಿಂಗಳ ಒಂದನೇ ತಾರೀಖು ಕನ್ನಡ ರಾಜ್ಯೋತ್ಸವ ದಿನದಂದೇ ರಿಲೀಸ್ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಇದು ಸ್ಪಷ್ಟವಾಗಿಲ್ಲ. ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಗಂಧದ ಗುಡಿ ಚಿತ್ರದ ಬಗ್ಗೆ ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನ ನಿರೀಕ್ಷೆ ಮಾಡಬಹುದು. ಒಟ್ಟಾರೆಯಾಗಿ ಅಪ್ಪು ಅವರ ಅಗಲಿಕೆಯ ನಂತರ ಅವರ ಅಭಿನಯದ ಮತ್ತೊಂದು ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರ ಅಭಿಮಾನಿಗಳದ್ದು. ಈ ಸುದ್ದಿಯಿಂದ ಅಪ್ಪು ಅವರ ಅಭಿಮಾನಿಗಳಿಗೆ ಸಂತಸ ತರುವುದರಲ್ಲಿ ಅನುಮಾನವಿಲ್ಲ.