ಅಭಿಮಾನಿ ದೇವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಯುವರತ್ನ

ಕರ್ನಾಟಕ ರತ್ನ ವರ ನಟ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅವರ ಆದರ್ಶಗಳನ್ನು ಇಂದು ಬಹುತೇಕ ಎಲ್ಲ ನಟ ನಟಿಯರೂ ಪಾಲಿಸುತ್ತಿದ್ದಾರೆ. ಇನ್ನು ಅವರ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳಿಗೆ ಕೊಡುವ ಮಹತ್ವ ನಮ್ಮೆಲ್ಲರಿಗೂ ಗೊತ್ತೇ ಇದೆ.

ಹೌದು ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಅಭಿಮಾನಿ ಒಬ್ಬರಿಗೆ ಪವರ್ ಸ್ಟಾರ್ ಹಾಡಿನ ಮೂಲಕ ವಿಶೇಷವಾಗಿ ಶುಭಕೋರಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಂಜು ಎಂಬುವರು ಡಾಕ್ಟರ್ ರಾಜಕುಮಾರ್ ಮತ್ತು ಅವರ ಕುಟುಂಬದ ದೊಡ್ಡ ಅಭಿಮಾನಿ, ಅದರಲ್ಲೂ ಪವರ್ ಸ್ಟಾರ್ ಅಪ್ಪು ಎಂದರೆ ಅತಿಯಾದ ಪ್ರೀತಿ. ಆದ್ದರಿಂದಲೇ ಅಪ್ಪು ಯುವ ಸೇನಾ ಸಮಿತಿಯ ಬಳಗಕ್ಕೆ ಅಧ್ಯಕ್ಷರು ಕೂಡ ಇವರೇ ಆಗಿದ್ದಾರೆ.

ತಮ್ಮ ಮೇಲೆ ಇಷ್ಟೆಲ್ಲಾ ಪ್ರೀತಿ ಇಟ್ಟುಕೊಂಡಿರುವ ಮಂಜು ಅವರ ಹುಟ್ಟುಹಬ್ಬಕ್ಕೆ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ನಗುತಾ ನಗುತಾ ಬಾಳು ನೀನು ನೂರು ವರ್ಷ ಎಂಬ ಹಾಡನ್ನು ಹಾಡುವುದರ ಮೂಲಕ ಮಂಜು ಅವರಿಗೆ ಶುಭಾಶಯ ಕೋರಿದ್ದಾರೆ. ಇಂಥ ಸರಳ ನಡುವಳಿಕೆಯಿಂದಲೆ ಅಪ್ಪು ಎಂದು ಎಲ್ಲರ ನೆಚ್ಚಿನ ನಟನಾಗಿದ್ದಾರೆ.

%d bloggers like this: