ಅಭಿನಯ ಚಕ್ರವರ್ತಿ ಸುದೀಪ್ ಅವರ ದೊಡ್ಡ ಕನಸು ಕೊನೆಗೂ ನನಸಾಗುವ ಕಾಲ ಕೂಡಿ ಬಂತು

ಕಿಚ್ಚ ಸುದೀಪ್ ಅವರ ಶಾಂತಿನಿವಾಸ ಚಿತ್ರವನ್ನು ನೀವೆಲ್ಲರೂ ನೋಡಿರುತ್ತೀರಿ. ಮನಸ್ಸುಗಳು ಒಡೆದಂತಹ ಮನೆಗೆ ಅಡುಗೆ ಕೆಲಸದವನಾಗಿ ಬರುವ ಸುದೀಪ್ ಅವರು ಎಲ್ಲರ ಮನಸ್ಸುಗಳನ್ನು ಹೇಗೆ ಒಂದುಗೂಡಿಸುತ್ತಾರೆ ಎಂಬ ಸ್ವಾರಸ್ಯ ಚಿತ್ರದಲ್ಲಿದೆ. ಅದೇ ರೀತಿ ಇದೀಗ ನಿಜಜೀವನದಲ್ಲಿ ಸುದೀಪ್ ಅವರ ಬಹುದಿನಗಳ ಕನಸು ನೆರವೇರುವ ಸುಮಧುರ ಸಮಯ ಕೂಡಿ ಬಂದಿದೆ.

ಹೌದು ಇದೇ ಸೆಪ್ಟಂಬರ್ 2 ಕ್ಕೆ ಸುದೀಪ್ ಅವರ ಹುಟ್ಟುಹಬ್ಬ ಆಯಿತು, ಅದೇ ದಿನ ಶಾಂತಿನಿವಾಸ ಎಂಬ ಹೆಸರಿನ ಆಶ್ರಮ ಒಂದು ಅವರ ಬಹುದಿನಗಳ ಆಸೆಯಂತೆ ಶಂಕುಸ್ಥಾಪನೆ ನೆರವೇರಿತು. ಅಷ್ಟಕ್ಕೂ ಈ ಶಾಂತಿ ನಿವಾಸದಲ್ಲಿ ಯಾರಿರುತ್ತಾರೆ ಗೊತ್ತೆ, ಯಾವ ಸಂಬಂಧಿಗಳು ಇಲ್ಲದ ವೃದ್ಧರು ಕೈಲಾಗದವರು ಇವರೆಲ್ಲರನ್ನು ಪೋಷಿಸುವ ಆಶ್ರಯ ತಾಣವಾಗಲಿದೆ ಈ ಶಾಂತಿನಿವಾಸ ಆಶ್ರಮ.

ಇದರ ಸಂಪೂರ್ಣ ಆರ್ಥಿಕ ದೇಕರೇಕಿ ಸುದೀಪ್ ಅವರದೇ. ಅಷ್ಟೇ ಅಲ್ಲದೆ ಇಲ್ಲಿ ಆಶ್ರಯ ಪಡೆಯುವವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳು ಸಹ ಇರುತ್ತವೆ. ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುವವರಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ ಕೊಡಲಾಗುವುದು ಎಂದು ಕಿಚ್ಚ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ರಮೇಶ್ ಕಿಟ್ಟಿ ಅವರು ಹೇಳಿದರು.

ಅಷ್ಟಕ್ಕೂ ಆಶ್ರಮ ಬರುವುದು ಮಾಗಡಿರಸ್ತೆಯ ಎಲೆಕೊಡಿಗೆ ಹಳ್ಳಿಯಲ್ಲಿ. ನಿಜಕ್ಕೂ ಸುದೀಪ್ ಅವರ ಈ ನಡಿಗೆ ಶ್ಲಾಘನೀಯ ಮತ್ತು ಅನುಕರಣೀಯ. ನಂಬಿದ ಎಷ್ಟೋ ಜೀವಗಳ ಆಶ್ರಯದಾತನಾದ ಸುದೀಪ್ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರಲಿದ್ದಾರೆ. ಅವರಿಗೂ ಮತ್ತು ಅವರ ಆಶ್ರಮಕ್ಕೆ ನಮ್ಮ ಕಡೆಯಿಂದ ಶುಭಾಶಯಗಳು.

%d bloggers like this: