ಅದ್ದೂರಿಯಾಗಿ ಹಸೆಮಣೆ ಏರಿದ ಕನ್ನಡದ ಮತ್ತೊಬ್ಬ ಕಿರುತೆರೆ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಸುದ್ದಿಯಾಗಿದ್ದಾರೆ‌. ಕೆಲವು ತಿಂಗಳಗಳಿಂದ ಇತ್ತೀಚೆಗೆ ಭಾರತೀಯ ಚಿತ್ರರಂಗ ಮತ್ತು ಕಿರುತೆರೆಯ ಅನೇಕ ಯುವ ನಟ ನಟಿಯರು ಸಪ್ತಪದಿ ತುಳಿಯುತ್ತಿದ್ದಾರೆ. ಅವರ ಸಾಲಿಗೆ ಇದೀಗ ಜನಪ್ರಿಯ ಧಾರಾವಾಹಿಗಳಾದ ಗಾಂಧಾರಿ ಮತ್ತು ರಾಧಾರಮಣ ಖ್ಯಾತಿಯ ನಟಿ ಕಾವ್ಯಾಗೌಡ ಸೋಮಶೇಖರ್ ಎಂಬುವವರನ್ನ ತಮ್ಮ ಬಾಳ ಸಂಗಾತಿಯಾಗಿ ವರಿಸಿದ್ದಾರೆ. ಸೋಮಶೇಖರ್ ಅವರು ಬೆಂಗಳೂರು ಮೂಲದ ಪ್ರತಿಷ್ಟಿತ ಉದ್ಯಮಿಯಾಗಿದ್ದಾರೆ. ಇದಕ್ಕೂ ಮುನ್ನ ನಟಿ ಕಾವ್ಯಾ ಗೌಡ ಮತ್ತು ಸೋಮಶೇಖರ್ ಜೋಡಿಗಳು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವ ಮೂಲಕ ಸಖತ್ ಸುದ್ದಿಯಾಗಿದ್ದರು.

ಈ ಪ್ರೀ ವೆಡ್ಡಿಂಗ್ ಶೂಟ್ ಮೂಲಕವೇ ತಮ್ಮ ಭಾವಿ ಪತಿ ಸೋಮಶೇಖರ್ ಅವರನ್ನು ಪರಿಚಯಿಸಿದ್ದರು. ಈ ಪ್ರೀ ವೆಡ್ಡಿಂಗ್ ಶೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ ನಟಿ ಕಾವ್ಯಾಗೌಡ ಅವರು ಇತ್ತೀಚೆಗೆ ಗೃಹಾಸ್ಥಶ್ರಮಕ್ಕೆ ಕಾಲಿಡುವ ಮುನ್ನ ಆಚರಿಸುವ ಆಧುನಿಕ ಪದ್ದತಿಯಾಗಿರುವ ಬ್ಯಾಚುಲರ್ ಪಾರ್ಟಿಯನ್ನು ಕೂಡ ತಮ್ಮ ಸ್ನೇಹಿತರೊಟ್ಟಿಗೆ ಆಚರಿಸಿದ್ದರು. ಈ ಡಿಸೆಂಬರ್ ತಿಂಗಳ 1ನೇ ತಾರೀಖಿನಂದು ಆರತಕ್ಷತೆ ಮತ್ತು 2ರಂದು ಧಾರಾ ಮುಹೂರ್ತ ಬಹಳ ವಿಜೃಂಭಣೆಯಾಗಿ ಆಯಿತು.

ಕುಟುಂಬಸ್ಥರು,ಸಂಬಂಧಿಕರು, ಗಣ್ಯರು, ಸೆಲೆಬ್ರಿಟಿಗಳು ಸೇರಿದಂತೆ ಅಪಾರ ಸ್ನೇಹಿತರ ಸಮ್ಮುಖದಲ್ಲಿ ನಟಿ ಕಾವ್ಯಾಗೌಡ ಮತ್ತು ಸೋಮಶೇಖರ್ ನವ ವಿವಾಹಕ್ಕೆ ಪಾದಾರ್ಪಣೆ ಮಾಡಿದ್ದಾರೆ‌. ಈ ವಿವಾಹ ಮಹೋತ್ಸವದಲ್ಲಿ ವಧು ಕಾವ್ಯಾಗೌಡ ಕೆಂಪು ಬಣ್ಣದ ಸಿಲ್ವರ್ ಕೋಟೆಡ್ ಲೆಹಂಗಾ ತೊಟ್ಟು ಕಂಗೊಳಿಸಿದರೆ, ವರ ಸೋಮಶೇಖರ್ ಕಪ್ಪು ಮತ್ತು ಬಿಳಿ ಬಣ್ಣದ ಸೂಟ್ ನಲ್ಲಿ ಮಿಂಚುತ್ತಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಾವ್ಯಗೌಡ ಮತ್ತು ಸೋಮಶೇಖರ್ ಅವರ ಅದ್ದೂರಿತನದ ಮದುವೆ ಫೋಟೋಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

%d bloggers like this: