ಅದ್ದೂರಿಯಾಗಿ ನಡೆಯಿತು ಭಾರತ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ಸ್ಟಾರ್ ನಟ, ನಟಿಯ ವಿವಾಹ

ಬಾಲಿವುಡ್ ರಂಗದ ಅನೇಕ ನಟ ನಟಿಯರು ಬಹಳ ಅದ್ದೂರಿಯಾಗಿ ಮದುವೆಯಾಗಿ ಭಾರಿ ಸುದ್ದಿಯಾಗಿದ್ದಾರೆ. ಅದೇ ರೀತಿಯಾಗಿ ಇದೀಗ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಮತ್ತು ಯುವ ಸ್ಟಾರ್ ನಟ ವಿಕ್ಕಿ ಕೌಶಲ್ ಕೂಡ ಅತ್ಯಂತ ವೈಭವವಾಗಿಯೇ ಡಿಸೆಂಬರ್ 9ರಂದು ಸಪ್ತಪದಿ ತುಳಿದಿದ್ದಾರೆ‌. ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರದ್ದು ಲವ್ ಕಮ್ ಅರೆಂಜ್ಡ್ ಮ್ಯಾರೇಜ್. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಬೇರೆ ಬೇರೆ ಧರ್ಮಗಳಾಗಿದ್ದ ಕಾರಣ ಫ್ಯಾಮಿಲಿಗಳಲ್ಲಿ ಕೊಂಚ ಅಡೆ ತಡೆ ಉಂಟಾಗಬಹುದು ಎಂದು ಊಹೆ ಮಾಡಲಾಗಿತ್ತು. ಆದರೆ ಅದಕ್ಕೆ ಅವಕಾಶ ಕೊಡದ ಈ ಜೋಡಿ ತಮ್ಮ ಕುಟುಂಬದವರ ಸಮ್ಮತಿ ಪಡೆದುಕೊಂಡು ಗ್ರ್ಯಾಂಡ್ ಆಗಿ ಮದುವೆ ಆಗಿದ್ದಾರೆ.

ಈ ಸ್ಟಾರ್ ಜೋಡಿಗಳ ಮದುವೆ ಯಾವ ಮಟ್ಟಿಗೆ ಸದ್ದು ಮಾಡಿತೋ ಅಷ್ಟೇ ಅವರು ಮದುವೆಯಾಗುತ್ತಿರುವ ಅದ್ದೂರಿತನದ ಬಗ್ಗೆಯೂ ಕೂಡ ಸದ್ದು ಮಾಡಿದೆ. ಹೌದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಆಗಿದ್ದು ಬರೋಬ್ಬರಿ 14ಶತಮಾನಗಳ ಇತಿಹಾಸ ಹೊಂದಿರುವ ರಾಜಸ್ತಾನದ ಜೈಪುರ ಕೋಟೆಯಲ್ಲಿ ಎಂಬುದು ವಿಶೇಷವಾಗಿತ್ತು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆ ಐದು ದಿನಗಳ ಕಾಲ ಮದುವೆಯ ವಿವಿಧ ಕಾರ್ಯಕ್ರಮಗಳು ಎಲ್ಲರ ಕಣ್ಣು ಕುಕ್ಕುವಂತೆ ವೈಭವೋಪೇತವಾಗಿ ಸರಾಗವಾಗಿ ನಡೆಯಿತು. ಈ ನವ ದಂಪತಿ ಜೋಡಿಗಳಿಗೆ ಶುಭ ಹಾರೈಸಲು ಹಿಂದಿ ಚಿತ್ರರಂಗದ ದಿಗ್ಗಜ ನಟ ನಟಿಯರು, ರಾಜಕೀಯ ಗಣ್ಯಾತಿಗಣ್ಯರು, ಪ್ರತಿಷ್ಟಿತ ಉದ್ಯಮಿಗಳು ಆಗಮಿಸಿದ್ದರು.

ಅಚ್ಚರಿಯ ಸಂಗತಿ ಅಂದರೆ ಕೈಫ್ ಮದುವೆಗೆ ಯಾರಿಗೂ ಕೂಡ ಮೊಬೈಲ್ ಬಳಸುವ ಅವಕಾಶ ನೀಡಿರಲಿಲ್ಲ. ಮೊದಲೇ ಸೂಚಿಸಿದಂತೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಬಹಳ ಸುರಕ್ಷತೆ ಯಾಂದ ಗೌಪ್ಯಯಾಗಿ ಎಲ್ಲಿಯೂ ಕೂಡ ಫೋಟೋ, ವೀಡಿಯೋ ಚಿತ್ರೀಕರಣವಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದರು. ತಮ್ಮ ಮದುವೆಗೆ ಬಂದಿದ್ದ ಎಲ್ಲರಿಗೂ ಕೂಡ ಈ ಬಗ್ಗೆ ಮೊದಲೇ ತಿಳಿಸಿದ್ದ ಕಾರಣ ಯಾರೂ ಕೂಡ ಮೊಬೈಲ್ ನಲ್ಲಿ ಫೋಟೋ ವೀಡಿಯೋ ಮಾಡಲು ಪ್ರಯತ್ನ ಮಾಡಿಲ್ಲ ಎಂದು ತಿಳಿದು ಬಂದಿಲ್ಲ‌. ಇದೀಗ ಕತ್ರಿನಾ ಕೈಫ್ ಅವರ ಕಡೆಯಿಂದಾನೆ ತಮ್ಮ ಮದುವೆಯ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

%d bloggers like this: