ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಯ ಮೂಲಕ ಎಲ್ಲರ ಮನೆಮಾತಾದ ಕಿರುತೆರೆಯ ನಟಿಯೊಬ್ಬರು ಇಂದು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧವಾಗಿದ್ದಾರೆ. ಹೌದು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ವೈಷ್ಣವಿ ಅವರ ನಟನೆಯ ಸಿನಿಮಾವೊಂದು ತೆರೆಕಾಣಲು ಸಿದ್ದವಾಗಿದೆ. ಎರಡು ವರ್ಷಗಳ ಹಿಂದೆ 8ಗಂಟೆಗೆ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಲ್ಲರ ಫೇವರಿಟ್. ಅದರಲ್ಲೂ ವೈಷ್ಣವಿ ಅವರ ಸನ್ನಿಧಿ ಪಾತ್ರವಂತೂ ಎಲ್ಲರಿಗೂ ಅಚ್ಚು ಮೆಚ್ಚು. ಚಿಕ್ಕ ವಯಸ್ಸಿನಲ್ಲೇ ದೇವಿ ಎಂಬ ಸೀರಿಯಲ್ ಮೂಲಕ ಆಕ್ಟಿಂಗ್ ಪ್ರಪಂಚಕ್ಕೆ ಕಾಲಿಟ್ಟ ವೈಷ್ಣವಿ, ತಮ್ಮ ಸ್ವಂತ ಪ್ರತಿಭೆಯಿಂದ ಮುಂದೆ ಬಂದಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಅಂತೂ ವೈಷ್ಣವಿ ಅವರ ಆಕ್ಟಿಂಗ್ ಕೇರಿಯರ್ ಗೆ ಯುಟರ್ನ್ ಕೊಟ್ಟ ಧಾರಾವಾಹಿ ಎನ್ನಬಹುದು.

ಅಗ್ನಿಸಾಕ್ಷಿ ಸೀರಿಯಲ್ ನಂತರ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಆಯ್ಕೆಯಾದ ಇವರು, ತಮ್ಮ ಸೌಮ್ಯ ಸ್ವಭಾವದಿಂದ ಅಲ್ಲಿಯೂ ಎಲ್ಲರ ಮನಗೆದ್ದರು. ಇದೀಗ ವೈಷ್ಣವಿ ಅವರ ಆಕ್ಟಿಂಗ್ ಕೇರಿಯರ್ ನಲ್ಲಿ ದೊಡ್ಡ ಯುಟರ್ನ್ ಒಂದು ಸಿಗಲಿದೆ. ಗೌಡ್ರು ಸೈಕಲ್ ಸಿನಿಮಾವನ್ನು ನಿರ್ದೇಶಿಸಿದ ನಿರ್ದೇಶಕ ಪ್ರಶಾಂತ್ ಕೆ ಅವರು ‘ಬಹುಕೃತ ವೇಷಮ್’ ಎಂಬ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಶಶಿಕಾಂತ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ, ವೈಷ್ಣವಿ ಅವರು ನಾಯಕಿಯಾಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಸ್ಕೃತ ಶೀರ್ಷಿಕೆಯನ್ನು ಹೊಂದಿರುವ ಈ ಸಿನಿಮಾ ಸೈಕಾಲಾಜಿಕಲ್ ರಿವೇಂಜ್ ಥ್ರಿಲ್ಲರ್ ಪ್ರಕಾರವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಫೆಬ್ರವರಿ 18ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಬಹುಕೃತ ವೇಷಂ ಚಿತ್ರ ಬಿಡುಗಡೆಯಾಗುತ್ತಿದೆ.