ಐದನೇ ವರ್ಷದ ಮದುವೆ ವಾರ್ಷಿಕೋತ್ಸವ, ಸುಂದರವಾದ ಪೋಸ್ಟ್ ಹಂಚಿಕೊಂಡ ಕನ್ನಡದ ಯಶಸ್ವಿ ಜೋಡಿ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟು ಡಿಸೆಂಬರ್9 2021ಕ್ಕೆ ಐದು ವರ್ಷಗಳು ಪೂರೈಸಿವೆ. ಹೌದು 2016 ಡಿಸೆಂಬರ್ 9ರಂದು ಸಪ್ತಪದಿ ತುಳಿದ ಈ ಯಶಸ್ವಿ ತಾರಾ ಜೋಡಿ ಇದೀಗ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಆದರ್ಶ ಬದುಕನ್ನ ನಡೆಸುತ್ತಿದ್ದಾರೆ. ಚಂದನವನದಲ್ಲಿ ಅನೇಕ ಕ್ಯೂಟ್ ಕಪಲ್ ಗಳಿವೆ. ಅಂತಹ ಮುದ್ದಾದ ಜೋಡಿಗಳಲ್ಲಿ ಟಾಪ್ ಲಿಸ್ಟ್ ನಲ್ಲಿ ನಿಲ್ಲುವುದು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಜೊತೆಯಾಗಿಯೇ ಸ್ಯಾಂಡಲ್ ವುಡ್ ಪ್ರವೇಶ ಈ ಜೋಡಿ ಇದಕ್ಕೂ ಮುನ್ನ ಉದಯ ಟಿವಿಯ ನಂದಗೋಕಲ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದರು.

ಇಲ್ಲಿ ಕೇವಲ ಮುಖ ಪರಿಚಯವಿದ್ದ ಇವರಿಗೆ ಸ್ನೇಹ ಆರಂಭವಾಗಿದ್ದು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ. ತದ ನಂತರ ಸ್ನೇಹ, ಪ್ರೀತಿ ಆಗಿ ಕೊನೆಗೆ ಇಬ್ಬರು ಕೂಡ ತಮ್ಮ ಸಿನಿ ವೃತ್ತಿಯಲ್ಲಿ ಯಶಸ್ಸು ಗಳಿಸಿ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆ ಕೂಡ ಆದರು. ಡ್ರಾಮಾ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವಾಡ್ ಎಂಬ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ ಈ ತಾರಾ ದಂಪತಿ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಭಾರತೀಯ ಚಿತ್ರರಂಗದಲ್ಲಿ ತನ್ನದೇಯಾದ ಅಪಾರ ಅಭಿಮಾನ ಬಳಗ ಹೊಂದಿದ್ದಾರೆ.

ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿಗಳು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ವೊಂದರಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿ ಸಂತೋಷವಾಗಿ ಸ್ವತಂತ್ರ ಬದುಕನ್ನ ಕಟ್ಟಿಕೊಂಡು ಸಮಾಜದಲ್ಲಿ ಮಾದರಿಯಾಗಿ ಜೀವನ ನಡೆಸುತ್ತಿದ್ದಾರೆ. ಈ ಆದರ್ಶ ತಾರಾ ದಂಪತಿಗಳಿಗೆ ಡಿಸೆಂಬರ್9 ಐದನೇ ವರ್ಷದ ಮದುವೆ ವಾರ್ಷಿಕೋತ್ಸವ. ಈ ಸಂತಸದ ದಿನವನ್ನು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಹೌದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಯಶ್ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಸಂಸಾರದ ಮುದ್ದಾದ ಫೋಟೋಗಳನ್ನು ತಮ್ಮ ಇನ್ಸ್ಟಾ ದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅಂತೆಯೇ ನಟ ಯಶ್ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದು ರಾಧಿಕಾ ಅವರೊಟ್ಟಿಗೆ ಇರುವ ಎರಡು ವಿಭಿನ್ನ ಫೋಟೋಗಳನ್ನ ಶೇರ್ ಮಾಡಿ ಅವುಗಳ ಜೊತೆಗೆ ಎಲ್ಲರೂ ಈ ಪ್ರಪಂಚ ಬಹಳ ಸುಂದರವಾಗಿದೆ ಅಂತ ಹೇಳುತ್ತಾರೆ. ಅದನ್ನ ನಾನು ಖಂಡಿತಾ ಒಪ್ಪಿಕೊಳ್ಳುತ್ತೇನೆ. ಆದ್ರೆ ನೀನು ನನ್ನ ಸನಿಹದಲ್ಲಿದ್ದಾಗ ಮಾತ್ರ ನನ್ನ ಜಗತ್ತು ಸುಂದರವಾಗುತ್ತದೆ. ನನ್ನ ಜಗತ್ತನ್ನು ಸುಂದರಗೊಳಿಸಿದ್ದಕ್ಕಾಗಿ ನಿನಗೆ ಧನ್ಯವಾದಗಳು. ಲವ್ಯೂಫಾರ್ ಎವರ್ ಅಂಡ್ ಎವರ್ ಎಂದು ತಮ್ಮ ಮನದಾಳದ ಭಾವನೆಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

%d bloggers like this: