ಐದೇ ದಿನಕ್ಕೆ ನೂರು ಕೋಟಿ ತಲುಪಿದ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ

ಯಾವುದೇ ಸ್ಟಾರ್ ನಟರ ಸಿನಿಮಾ ಆಗಲಿ, ಯಾವುದೇ ಸ್ಟಾರ್ ನಿರ್ದೇಶಕರ ಸಿನಿಮಾ ಆಗಲಿ ಅಥವಾ ಬಿಗ್ ಬಜೆಟ್ ಚಿತ್ರವಾಗಲಿ ರಿಲೀಸ್ ಗೂ ಮುನ್ನ ಚಿತ್ರದ ಪ್ರಚಾರ ಅವಶ್ಯಕ. ಚಿತ್ರದ ನಿರ್ಮಾಪಕರಂತೂ ಚಿತ್ರದ ನಿರ್ಮಾಣಕ್ಕಾಗಿ ಖರ್ಚು ಮಾಡಿದ ಹಣದಷ್ಟೇ ಪ್ರಚಾರಕ್ಕಾಗಿ ಖರ್ಚು ಮಾಡುತ್ತಾರೆ. ಏಕೆಂದರೆ ಒಂದು ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನ ಚಿತ್ರದ ಪ್ರಚಾರದಿಂದ ಹೆಚ್ಚು ಜನರು ಸಿನಿಮಾವನ್ನು ವೀಕ್ಷಸುತ್ತಾರೆ. ಹೀಗಾಗಿ ಗಳಿಕೆ ಹೆಚ್ಚಾಗಬಹುದು ಎಂಬುದು ಎಲ್ಲರ ಅಭಿಪ್ರಾಯ. ಆದರೆ ಯಾವುದೇ ಪ್ರಚಾರವಿಲ್ಲದೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಸಿನಿಮಾ ಎಂದರೆ ಇಡೀ ಭಾರತದ ಚಿತ್ರರಂಗದಲ್ಲಿ ಜೇಮ್ಸ್ ಸಿನಿಮಾ ಒಂದೇ ಆಗಿರಲು ಸಾಧ್ಯ. ಇದಕ್ಕೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೇಲಿರುವ ಅತಿಯಾದ ಪ್ರೀತಿ, ಅಭಿಮಾನ ಕಾರಣ ಎನ್ನಬಹುದು. ಎಷ್ಟೇ ದೊಡ್ಡಮಟ್ಟದ ಸಿನಿಮಾ ಆಗಲಿ ನೂರು ಕೋಟಿ ಗಡಿ ದಾಟಲು ಕನಿಷ್ಠ ಒಂದು ವಾರವಾದರೂ ಬೇಕು.

ಆದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ರಿಲೀಸ್ ಆದ ನಾಲ್ಕೇ ದಿನಕ್ಕೆ ಶತಕೋಟಿ ಕ್ಲಬ್ ಗೆ ಗ್ರ್ಯಾಂಡ್ ರಾಯಭಾರಿಯಾಗಿ ನಿಂತಿದೆ. ಹೌದು ಅಪ್ಪು ಅವರ ಮೇಲಿನ ಅಭಿಮಾನದಿಂದ ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ಗೆಲ್ಲಿಸಲೇಬೇಕು ಎಂದು ಅಭಿಮಾನಿಗಳು ಪಣತೊಟ್ಟಿದ್ದರು. ಅಭಿಮಾನಿಗಳು ಮನಸ್ಸು ಮಾಡಿದ ಮೇಲೆ ಆ ಚಿತ್ರ ಗೆಲ್ಲಲೇಬೇಕು. ಅಭಿಮಾನಿಗಳು ತಾವು ಕೊಟ್ಟಮಾತಿನಂತೆ ಜೇಮ್ಸ್ ಚಿತ್ರವನ್ನು ಗೆಲುವಿನ ಶಿಖರಕ್ಕೆ ಕೊಂಡೊಯ್ದಿದ್ದಾರೆ. ರಿಲೀಸ್ ಆದ ನಾಲ್ಕೇ ದಿನಕ್ಕೆ ಶತಕೋಟಿಯನ್ನೂ ಜೇಮ್ಸ್ ಸಿನಿಮಾ ಗಳಿಸಿ ಹೊಸ ದಾಖಲೆಯನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಮಾರ್ಚ್ 17ರಂದು ಪುನೀತ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಜೇಮ್ಸ್ ಸಿನಿಮಾ ಬರೋಬ್ಬರಿ 386 ಸಿಂಗಲ್ ಸ್ಕ್ರೀನ್, 180ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಸ್ಕ್ರೀನ್ ಹಾಗೂ ಹೊರರಾಜ್ಯ ಮತ್ತು ವಿದೇಶಗಳ ನೂರಾರು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು.

ಮೊದಲ ದಿನವೇ ಮೂರರಿಂದ ನಾಲ್ಕು ಸಾವಿರ ಪ್ರದರ್ಶನ ಕಂಡಿದ್ದ ಜೇಮ್ಸ್, ತನ್ನ ಮೊದಲ ದಿನದ ಗೆಲುವಿನ ನಾಗಾಲೋಟವನ್ನು ಶುರುಮಾಡಿತ್ತು. ಮೊದಲ ದಿನ ಜೇಮ್ಸ್ ಚಿತ್ರದ ನಾಗಾಲೋಟವನ್ನು ನೋಡಿದ ಸಿನಿ ಪಂಡಿತರು ಇದು 100 ಕೋಟಿ ಕ್ಲಬ್ಗೆ ವಾರದೊಳಗೆ ಸೇರ್ಪಡೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆ ಮಾತು ಈಗ ನಿಜವಾಗಿದೆ. ಮೊದಲ ದಿನ 32.04 ಕೋಟಿ ಸಂಪಾದನೆ ಮಾಡಿ, ಇದುವರೆಗೂ ಯಾವುದೇ ಕನ್ನಡ ಸಿನಿಮಾ ಮಾಡಿರದ ಕಲೆಕ್ಷನ್ನು ಜೇಮ್ಸ್ ಚಿತ್ರ ಮಾಡಿದೆ. ಇನ್ನೂ ಎರಡನೇ ದಿನ 21.8 ಕೋಟಿ, ಮೂರನೇ ದಿನ 26.4 ಕೋಟಿ, ನಾಲ್ಕನೇ ದಿನ 29.5 ಕೋಟಿ ಸಂಪಾದನೆ ಮಾಡಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬರೀ ಕರ್ನಾಟಕದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿರುವ ಜೇಮ್ಸ್ ಚಿತ್ರ ಮಲ್ಟಿಫ್ಲೆಕ್ಸ್ ಗಳಲ್ಲಿ ಎಪ್ಪತ್ತು ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಈ ತಿಂಗಳ 25ನೇ ತಾರೀಕು ತ್ರಿಬಲ್ ಆರ್ ಸಿನಿಮಾ ರಿಲೀಸ್ ಆಗಲಿದೆ. ಅಷ್ಟರಲ್ಲಿ ಜೇಮ್ಸ್ ಆರಾಮಾಗಿ 150 ಕೋಟಿ ಸಂಪಾದನೆ ಮಾಡಿರುತ್ತದೆ ಎನ್ನುತ್ತದೆ ಚಿತ್ರತಂಡ. ಇನ್ನೂ ರಿಲೀಸ್ ಆಗಿ ಮೂರು ವಾರ ಕಳೆಯುವಷ್ಟರಲ್ಲಿ ಕನ್ನಡದ ಸಿನಿಮಾದೆಲ್ಲದರ ರೆಕಾರ್ಡ್ ಗಳನ್ನು ಅಳಿಸಿಹಾಕಿ ಹೊಸ ದಾಖಲೆ ಬರೆಯುವ ಎಲ್ಲಾ ಸೂಚನೆಯನ್ನು ಜೇಮ್ಸ್ ಕೊಡುತ್ತಿದೆ. ಇನ್ನೂ ನಾಲ್ಕು ವಾರ ಕಳೆಯುವಷ್ಟರಲ್ಲಿ 150 ಕೋಟಿ ರೂಪಾಯಿ ಸಂಪಾದನೆ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜೇಮ್ಸ್ ಚಿತ್ರ ಒಂದರಮೇಲೊಂದು ಈ ಹಿಂದೆ ಸಿನಿಮಾಗಳು ಮಾಡಿದ ದಾಖಲೆಯನ್ನು ಮೀರಿಸುತ್ತಿದೆ.

%d bloggers like this: