ಐತಿಹಾಸಿಕ ಗೆಲುವಿಗೆ ಕಾರಾಣರಾದ ಈ ಆಟಗಾರರಿಗೆ ಭರ್ಜರಿ ಉಡುಗೊರೆ ಕೊಟ್ಟ ಆನಂದ್ ಮಹಿಂದ್ರ

ನಮ್ಮ ದೇಶದಲ್ಲಿ ಕ್ರಿಕೆಟ್ ಎಂದರೆ ಒಂದು ಧರ್ಮ ಮತ್ತು ಆ ಧರ್ಮಕ್ಕೆ ಸಚಿನ್ ತೆಂಡೂಲ್ಕರ್ ಒಬ್ಬ ದೇವರಂತೆ ಕಾಣುವ ಕೋಟಿ ಕೋಟಿ ಭಾರತೀಯರಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಅವರ ನೆಲದಲ್ಲಿಯೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲುವುದು ಎಂದರೆ ಅದು ಸುಲಭದ ಮಾತಲ್ಲ. ಹೌದು ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಬೌಲರ್ ಗಳನ್ನು ಹೊಂದಿದ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಕಷ್ಟಸಾಧ್ಯವೇ ಸರಿ. ಆದರೆ ನಮ್ಮ ಯುವ ತಂಡ ಇದನ್ನು ಸಾಧಿಸಿ ತೋರಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿತ್ತು. ಕೇವಲ 36 ರನ್ ಗಳಿಗೆ ಆಲ್ ಔಟ್ ಆಗಿ ತುಂಬಾ ಅವಮಾನವನ್ನು ಎದುರಿಸಿತ್ತು.

ಅದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಸಹ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ತಂಡವನ್ನು ಬಿಟ್ಟು ದೇಶಕ್ಕೆ ವಾಪಸಾದರು. ಅನುಭವಿ ಆಟಗಾರರು ಇಲ್ಲದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿತ್ತು. ಸಂಪೂರ್ಣ ಪ್ರಯತ್ನ ಹಾಕಿ ನಂತರ ನಡೆದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಮತ್ತೊಂದನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು. ನಿರ್ಣಾಯಕವಾದ ರೋಚಕವಾದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎರಡು ತಂಡಗಳಿಗೆ ಇತ್ತು. ಕೊನೆಗೆ ನಮ್ಮ ಯುವ ಭಾರತ ತಂಡ ಗೆಲವಿನ ನಗೆ ಬೀರಿ ದೇಶಕ್ಕೆ ಹೆಮ್ಮೆಯನ್ನು ತಂದಿದ್ದು ಈಗ ಎಲ್ಲರಿಗೂ ಗೊತ್ತೇ ಇದೆ. ಬಲಿಷ್ಠ ತಂಡವನ್ನು ಮಣಿಸಿದ ಯುವ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಈ ನಡುವೆ ನಮ್ಮ ದೇಶದ ಪ್ರಮುಖ ಆಟೊಮೊಬೈಲ್ ಉದ್ಯಮಿಗಳಲ್ಲಿ ಒಬ್ಬರಾದ ಮಹಿಂದ್ರ ಗ್ರೂಪ್ ಅಧ್ಯಕ್ಷರಾದ ಆನಂದ ಮಹಿಂದ್ರಾ ಅವರು ಆರು ಜನ ಆಟಗಾರರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಭರ್ಜರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಹೌದು ಶುಭಮನ್ ಗಿಲ್, ಸಿರಾಜ್, ವಾಷಿಂಗ್ಟನ್ ಸುಂದರ, ನಟರಾಜನ್, ಸೈನಿ ಮತ್ತು ಶಾರ್ದುಲ್ ಠಾಕೂರ್ ಅವರಿಗೆ ಥಾರ ಮಹಿಂದ್ರ ವೆಹಿಕಲ್ ಅನ್ನು ಗಿಫ್ಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಈ ವಿಷಯ ತಿಳಿಸಿದ ಮಹಿಂದ್ರ ಅವರು ಯುವ ಆಟಗಾರರಿಗ ಸ್ಪೂರ್ತಿ ತುಂಬಾ ಕೆಲಸ ಮಾಡಿದ್ದಾರೆ. ಮೂಲಗಳ ಪ್ರಕಾರ ಈ ವೆಹಿಕಲ್ ನ ಬೆಲೆ ಹತ್ತರಿಂದ ಹದಿನೈದು ಲಕ್ಷದವರೆಗೆ ಇದೆ ಎನ್ನಲಾಗುತ್ತಿದೆ.

%d bloggers like this: