ಮನೆ ನಿರ್ವಹಣೆ ಎಂಬುದು ಹೇಳಲು ತುಂಬಾ ಸರಳ ಆದರೆ ಮಾಡಲು ಬಹಳ ಕಷ್ಟ. ಹೌದು ಮನೆ ನಿರ್ವಹಣೆ ಎಂದರೆ ಅದರಲ್ಲಿ ಅಡುಗೆಮನೆಯು ತುಂಬಾ ಮಹತ್ವದ ಪಾತ್ರವನ್ನು ಪಡೆಯುತ್ತದೆ. ಅಂತಹ ಅಡುಗೆಮನೆಯಲ್ಲಿ ಹೆಣ್ಣುಮಕ್ಕಳಿಗೆ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಹುಳಗಳ ಸಮಸ್ಯೆ ಕೂಡ ಒಂದು. ಹೌದು ಯಾವುದೋ ಬೇಳೆಗಳನ್ನು ಅಥವಾ ಹಿಟ್ಟನ್ನು ಒಂದು ಡಬ್ಬಿಯಲ್ಲಿ ಹಾಕಿ ಇಟ್ಟಿರುತ್ತಾರೆ ಆದರೆ ಸ್ವಲ್ಪ ದಿನ ಬಿಟ್ಟು ನೋಡಿದರೆ ಅದರಲ್ಲಿ ಹುಳಗಳು ಆಗಿಬಿಟ್ಟಿರುತ್ತವೆ. ಇದು ಮನೆಯಲ್ಲಿ ಕೆಲವೊಮ್ಮೆ ತುಂಬಾ ಸಿಟ್ಟಿಗೆ ಕೂಡಾ ಕಾರಣವಾಗುತ್ತದೆ ಅಲ್ಲದೆ ಅಡುಗೆ ಮಾಡುವುದು ಕೂಡ ಕಷ್ಟವೆನಿಸುತ್ತದೆ. ಒಂದು ವೇಳೆ ಸರಿಯಾಗಿ ನೋಡದೆ ಅಂತಹ ಹುಳ ಹತ್ತಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯದಲ್ಲಿ ಬಹಳ ಏರುಪೇರು ಆಗಬಹುದು.
ಇಂತಹ ಸಂಕೀರ್ಣ ಸಮಸ್ಯೆಗೆ ಸರಳ ಪರಿಹಾರವು ಕೂಡ ಇದೆ. ಅದೇನೆಂದರೆ ನೀವೇ ಓದಿ. ಬೇಳೆ ಕಾಳುಗಳಲ್ಲಿ 1ಕೆಜಿ ಅಳತೆಗೆ 1 ಚಮಚ ಸಾಸಿವೆ ಎಣ್ಣೆಯನ್ನು ಹಾಕಿ ಬೆರೆಸಬೇಕು. ಇಷ್ಟೇ ಮಾಡಿದರೆ ಸಾಕು ಒಂದು ವರ್ಷವಾದರೂ ಸಹ ಬೇಳೆಕಾಳುಗಳು ಹುಳ ಹತ್ತುವುದಿಲ್ಲ. ಹೆಸರು ಬೇಳೆಗಳಲ್ಲಿ ಹುಳಗಳ ಸಮಸ್ಯೆ ಬರಬಾರದು ಅಂದರೆ ಡಬ್ಬಿಗೆ ಸ್ವಲ್ಪ ಅರಿಶಿನ ಪುಡಿ ಹಾಕಿ ಸಾಕು. ಇನ್ನು ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು ಜೋಳದ ಹಿಟ್ಟು ಯಾವುದೇ ಆಗಿರಲಿ ಅದರಲ್ಲಿ ಹುಳಗಳು ಆಗಬಾರದು ಎಂದರೆ ಸ್ವಲ್ಪ ಲವಂಗದ ಎಲೆಗಳನ್ನು ಹಾಕಬೇಕು. ಅಥವಾ ಬೇವಿನಸೊಪ್ಪನ್ನು ಕೂಡ ಹಾಕಿದರೂ ಪರವಾಗಿಲ್ಲ. ಇನ್ನು ಶಾವಿಗೆಗೆ ಹುಳ ಆಗಬಾರದು ಎಂದರೆ ಶಾವಿಗೆಯನ್ನು ತಂದ ಕೂಡಲೇ ಅವುಗಳನ್ನು ಹುರಿದು ಸಂಗ್ರಹಿಸಟ್ಟರೆ ಸಾಕು.