ಭಾರತೀಯ ಚಿತ್ರರಂಗದ ಯಾವ ಸ್ಟಾರ್ ದಿಗ್ಗಜ ನಟನಿಗೂ ದೊರೆಯದ ಅಭೂತಪೂರ್ವ ಮೆಚ್ಚುಗೆ ಪಡೆದ ಕೇವಲ 28 ವರ್ಷದ ಬಾಲಿವುಡ್ ಬೆಡಗಿ! ಕಲೆ ಎಂಬುದು ಯಾರ ಸ್ವತ್ತು ಕೂಡ ಅಲ್ಲ. ಅದು ಯಾವ ವ್ಯಕ್ತಿ ಶ್ರದ್ದೆ ನಿಷ್ಠೆ ಭಕ್ತಿಯಿಂದ ಪಾಲಿಸುತ್ತಾರೋ ಅವರನ್ನ ಕಲಾ ಸರಸ್ವತಿ ಕೈ ಹಿಡಿದು ನಡೆಸುತ್ತಾಳೆ, ಮರೆಸುತ್ತಾಳೆ. ಅಂತೆಯೇ ಯಶಸ್ಸಿನ ಉತ್ತುಂಗದ ಅಮಲಿನಲ್ಲಿ ಅಹಂಕಾರ ತೋರದವರನ್ನ ಕೆಳಗಡೆಗೆ ತಳ್ಳಿದ್ದಾಳೆ ಕೂಡಾ. ಇದೀಗ ಈ ಕಲೆ ನಟನೆಯ ಕ್ಷೇತ್ರದ ಬಗ್ಗೆ ಯಾಕೆ ಇಷ್ಟೊಂದು ಪೀಠಿಕೆ ಎನ್ನುತ್ತೀರಾ. ಹೌದು ಖಂಡಿತಾ ವಿಚಾರ ಇದೆ. ಸಾಮಾನ್ಯವಾಗಿ ಸಿನಿಮಾ ನೋಡಿ ಸಿನಿಮಾ ಇಷ್ಟವಾದರೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ನೆಚ್ಚಿನ ನಟ ನಟಿಯರಿಗೆ ಜೈಕಾರ ಹಾಕುತ್ತಾ ಸಿನಿಮಾ ನೋಡಿದ ಪ್ರೇಕ್ಷಕರು ಥಿಯೇಟರ್ ಯಿಂದ ಹೊರ ಬರುತ್ತಾರೆ.

ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ, ಹೂ ಹಾರ ಜೈ ಕಾರ ಇದ್ದೇ ಇರುತ್ತದೆ. ಭಾರತೀಯ ಚಿತ್ರರಂಗದ ಬಹುತೇಕ ಸೂಪರ್ ಸ್ಟಾರ್ ಸಿನಿಮಾ ಬಿಡುಗಡೆಯಾದಾಗ ಇದು ಸಾಮಾನ್ಯವಾದ ವಿಚಾರ. ಆದರೆ ಬಾಲಿವುಡ್ ನ ಈ ಖ್ಯಾತ ನಟಿಯ ಅಭಿನಯಕ್ಕೆ ಮನಸೋತು ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಆರೇಳು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಈ ನಟಿಯ ನಟನೆಗೆ ಅಪಾರ ಅಭೂತ ಪೂರ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಚಿತ್ರರಂಗದ ಯಾವ ಸ್ಟಾರ್ ನಟನಿಗೂ ಕೂಡ ದೊರೆತಿಲ್ಲ ಎಂಬುದು ವಿಶೇಷ. ಹಾಗಾದರೆ ಆ ಬಾಲಿವುಡ್ ನಟಿ ಯಾರು, ಯಾವ ಚಿತ್ರದ ನಟನೆಗೆ ಅಭೂತ ಪೂರ್ವ ಮೆಚ್ಚುಗೆ ಸಿಕ್ಕಿತು ಎಂಬ ಪ್ರಶ್ನೆ ಬಂದರೆ ಆ ಸಿನಿಮಾ ಬೇರಾವುದು ಅಲ್ಲ.

ಅದು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಗೂಬಾಯಿ ಕಾಠಿಯಾವಾಡಿ. ಈ ಚಿತ್ರದ ಪ್ರಧಾನ ಪಾತ್ರ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವುದು ಬಾಲಿವುಡ್ ನ ಜನಪ್ರಿಯ ಬೇಡಿಕೆಯ ನಟಿಯಾಗಿರುವ ಆಲಿಯಾ ಭಟ್. ಈ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಇಂದು ಫೆಬ್ರವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ಸಿನಿಮಾಗಳು ಅಂದರೆ ಅಲ್ಲಿ ವಿವಾದದ ಕೆಲವು ವಿಷಯಗಳು ಕೂಡ ಇರುತ್ತವೆ. ಅದೇ ರೀತಿಯಾಗಿ ಈ ಚಿತ್ರಕ್ಕೂ ಕೂಡ ವಿವಾದ ತಂಟೆ ತಾಪತ್ರಯ ಸುತ್ತಿಕೊಂಡು ಇದೀಗ ನ್ಯಾಯಾಲದಯಲ್ಲಿ ತೀರ್ಪು ದೊರೆತು ನಿರಾಳವಾಗಿದೆ ಚಿತ್ರತಂಡ.

ಇದೆಲ್ಲದರ ನಡುವೆ ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಸಿನಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲಿಯೂ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಅವರ ಅಮೋಘ ಅಭಿನಯಕ್ಕೆ ಜರ್ಮನ್ ದೇಶದ ಬೆರ್ಲಿನ್ ನಗರದ ಚಿತ್ರಮಂದಿರಲ್ಲಿ ಪ್ರೇಕ್ಷಕರು ಆರೇಳು ನಿಮಿಷಗಳ ಕಾಲ ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ಇನ್ನು ಖ್ಯಾತ ಬರಹಗಾರರಾದ ಹುಸೇನ್ ಜೈದಿ ಅವರು ಬರೆದಿರುವ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕ ಆಧಾರಿಸಿ ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ದೇಶನ ಮಾಡಿರುವ ಈ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲಿ ಅಜಯ್ ದೇವಗನ್, ಹುಮಾ ಖುರೇಷಿ, ವಿಜಯ್ ರಾಝ್ ಇನ್ನಿತರರು ಅಭಿನಯಿಸಿದ್ದಾರೆ.