ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಶುಭ ಸುದ್ದಿ, ಸ್ಕಾಲರ್ ಶಿಪ್ ಬೇಕೆನ್ನುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯದ ವಿಧ್ಯಾರ್ಥಿಗಳಿಗೆ ಶುಭಸುದ್ದಿ! ಸಮಾಜದಲ್ಲಿ ಇರುವಂತಹ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮಾನತೆ ಹೋಗಲಾಡಿಸಿ ಸಮಾಜದ ವ್ಯವಸ್ಥೆಯಲ್ಲಿ ಸಮಾನತೆಯನ್ನು ಸರಿದೂಗಿಸಲು ಸಂವಿಧಾನದಲ್ಲಿ ಮಾಡಿರುವ ಮೀಸಲಾತಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಸಮುದಾಯದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗೆ ಸಲುವಾಗಿ ಸರ್ಕಾರ ಒಂದಷ್ಟು ಹಣಕಾಸಿನ ನೆರವನ್ನು ನೀಡುತ್ತದೆ. ಆಯಾ ಇಲಾಖೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಹಣಕಾಸಿನ ನೆರವು ಸಿಗುತ್ತದೆ. ಇದೇ ರೀತಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್, ಜೈನ, ಹಾಗೂ ಬೌದ್ದ ಧರ್ಮದ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡುತ್ತದೆ‌. ಈ ವರ್ಷದ ವಿಧ್ಯಾರ್ಥಿ ವೇತನ ಪಡೆಯಲು ಡಿಸೆಂಬರ್30 ಕೊನೆಯ ದಿನಾಂಕ ಎಂದು ಸರ್ಕಾರ ಹೊರಡಿಸಲಾಗಿದ್ದ ಆದೇಶವನ್ನು ಪರಿಶೀಲಿಸಿ ಮತ್ತೆ 2021 ಜನವರಿ 20 ರವರೆಗೆ ಅರ್ಜಿಸಲ್ಲಿಸಲು ಕಾಲಾವಕಾಶ ನೀಡಿ ಆದೇಶ ನೀಡಿದೆ.

ಇಲಾಖೆಯ ಜಾಲತಾಣಕ್ಕೆ ಅರ್ಜಿ ಸಲ್ಲಿಸುವಾಗ ಆದಷ್ಟು ಜಾಗರೂಕತೆಯಿಂದ ಎಲ್ಲಾ ರೀತಿಯ ಮೂಲದಾಖಲೆಯಲ್ಲಿ ಇರುವಂತೆ ನಿಮ್ಮ ಮಾಹಿತಿ ನೀಡಿ, ಜಾತಿ ಮತ್ತು ಅದಾಯ ಪ್ರಮಾಣ ಪತ್ರದ ಕಾಲಾವಧಿಯ ದಿನಾಂಕ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಮತ್ತು ಹೆಸರುಗಳು ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಕೊಂಡು ಅರ್ಜಿಸಲ್ಲಿಸಿ ಇಲ್ಲವಾದಲ್ಲಿ ನಿಮ್ಮ ಅರ್ಜಿ ಗಳು ತಿರಸ್ಕಾರವಾಗುತ್ತವೆ. ಆದ್ದರಿಂದ ಅರ್ಹ ಅಲ್ಪ ಸಂಖ್ಯಾತ ಸಮುದಾಯದ ವಿಧ್ಯಾರ್ಥಿಗಳು ಅರ್ಹತೆಗೆ ಬೇಕಾದ ಜಾತಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯ ಮೂಲ ದಾಖಲೆ ಪತ್ರಗಳೊಂದಿಗೆ http://www.sholarships.gov.in ಜಾಲತಾಣಕ್ಕೆ ಭೇಟಿ ನೀಡಿ ಇದರ ಮೂಲಕ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ನಿಮ್ಮ ಶಾಲಾ ಕಾಲೇಜಿನ ಕಛೇರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಅವರಿಗೆ ಸಲ್ಲಿಸಿ ಈ ವಿಧ್ಯಾರ್ಥಿ ವೇತನದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

%d bloggers like this: