ಅಮೆಜಾನ್ ಅಲ್ಲಿ ಈ ದಿನದಂದು ಬರೋಬ್ಬರಿ 60% ರಿಯಾಯಿತಿ ಇದೆ, ಮಿಸ್ ಮಾಡ್ಬೇಡಿ

ಜನವರಿ 26 ಗಣರಾಜ್ಯೋತ್ಸವ ಪ್ರಯುಕ್ತ ಅಮೆಜಾ಼ನ್ ನಿಂದ ಭರ್ಜರಿ ಆಫರ್! ಹಬ್ಬ ಹರಿದಿನಗಳು ಬಂದರೆ ಸಾಕು ಆನ್ಲೈನ್ ಕಂಪನಿಗಳಗೆ ಸುಗ್ಗಿಯೋ ಸುಗ್ಗಿ ತನ್ನ ಸಂಸ್ಥೆಯ ಉತ್ಪನ್ನಗಳನ್ನು ರಿಯಾಯಿತಿ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆದು ಭರ್ಜರಿಯಾಗಿ ವ್ಯಾಪಾರ ವಹಿವಾಟುಗಳನ್ನು ಮಾಡಲು ತಯಾರಾಗುತ್ತವೆ. ಅದೇ ರೀತಿಯಾಗಿ ಆನ್ಲೈನ್ ದಿಗ್ಗಜ ಅಮೇಜಾ಼ನ್ ಮಾರಾಟ ಮಳಿಗೆಯಲ್ಲಿ ತನ್ನ ಗ್ರಾಹಕರಿಗೆ ಶೇಕಡ 60ರಷ್ಟು ರಿಯಾಯಿತಿ ನೀಡುತ್ತಿದೆ. ಈ ಗ್ರೇಟ್ ರಿಯಾಯಿತಿ ದಿನಗಳು ಜನವರಿ 19ರಿಂದ ಆರಂಭವಾಗಿ ಐದು ದಿನಗಳ ಕಾಲ ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಮೇಜಾ಼ನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಮೂಲಕ ಮಾರಾಟ ಮಾಡಲಾಗುತ್ತಿದೆ, ಇನ್ನು ಅಮೆಜಾ಼ನ್ ಈಗಾಗಲೇ ಈ ರಿಯಾಯಿತಿ ಕೊಡುಗೆಗಳನ್ನು ಜನರಿಗೆ ತಲುಪಿಸಲು ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಗ್ರಾಹಕರು ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಇನ್ನು ಕೆಲವು ಉತ್ಪನ್ನಗಳನ್ನು ಕ್ಯಾಶ್ಲೆಸ್ ಅಂದರೆ ಕಾರ್ಡ್ ಗಳ ಮುಖಾಂತರ ವಹಿವಾಟು ನಡೆಸಿದರೆ ಕನಿಷ್ಟ ಶೇ40 ರಿಂದ ಶೇ60 ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆ ಇದೆ.

ಇನ್ನು ಅಮೇಜಾ಼ನ್ ನಲ್ಲಿ ಮೊಬೈಲ್ ಫೋನ್ ಮತ್ತು ರಿಪೇರಿ ಸೇವೆಗಳ ಮೇಲೆ ಶೇಕಡ 40% ರಿಯಾಯಿತಿ ನೀಡಿದರೆ, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಅದರ ರಿಪೇರಿ ಸೇವೆಗಳಿಗೆ ಶೇಕಡ 60% ಕೊಡುಗೆ ನೀಡಲಾಗುತ್ತಿದೆ. ಜೊತೆಗೆ ಅಮೆಜಾ಼ನ್ ಇಕ್ಯು, ಫೈರ್ ಟಿವಿ, ಕಿಂಡಲ್ ಡಿವೈಸ್ ಗಳ ಮೇಲೆ ಶೇಕಡ 40ರಷ್ಟು ರಿಯಾಯಿತಿ ನೀಡಲಿದೆ. ಇನ್ನು ಪ್ರತಿಷ್ಠಿತ ಫೋನ್ ಗಳಾದ ಒನ್ ಪ್ಲಸ್, ಸ್ಯಾಮ್ಸಂಗ್, ಸಿಯೋಮಿ ಫೋನ್ ಗಳನ್ನು ಈ ಗ್ರೇಟ್ ಅಮೇಜಾ಼ನ್ ಸೇಲ್ ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಇವುಗಳ ಜೊತೆಗೆ ಒಪ್ಪೋ ಎ31 ಐಫೋನ್, ಎಮ್51, ರೆಡ್ ಮಿ ನೋಟ್ 9 ಪ್ರೋ, ಫೋನ್ ಗಳೂ ಕೂಡ ಆಫರ್ ನೀಡಿವೆ. ಇನ್ನು ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಎಚ್ ಪಿ, ಲೆನೊವೋ, ಸೋನಿ, ಸ್ಯಾಮ್ಸಂಗ್, ಕ್ಯಾನನ್ ಸಂಸ್ಥೆಯ ಉತ್ಪನ್ನಗಳು ಈ ಗ್ರೇಟ್ ಸೇಲ್ ನಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ನೀಡಲಿವೆ. ಇನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ವಹಿವಾಟು ನಡೆಸಿದರೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ರಿಯಾಯಿತಿ ದೊರೆಯುತ್ತದೆ. ಒಟ್ಟಾರೆಯಾಗಿ ಅಮೇಜಾ಼ನ್ ಸಂಸ್ಥೆಯು ಈ ಗಣರಾಜ್ಯೋತ್ಸವ ಅಂಗವಾಗಿ ತನ್ನ ಗ್ರಾಹಕರಿಗೆ ಉತ್ತಮವಾದ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.

%d bloggers like this: