ಅಮೆಜಾನ್ ಸಂಸ್ಥಾಪಕನನ್ನು ಹಿಂದೆ ಹಾಕಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಆದ

ಈಗ ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಎಲೋನ್ ಮಸ್ಕ್! ಹೌದು ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯಗಳ ಏರಿಕೆ ಮತ್ತು ಇಳಿಕೆಯ ಓಟದಿಂದಾಗಿ ನಿನ್ನೆ ಶ್ರೀಮಂತರಲ್ಲಿ ಮೊದಲಿಗರಾಗಿದ್ದವರು ಇಂದು ಕೊನೇ ಸ್ಥಾನ ತಲುಪಬಹುದು, ಕೊನೆಯಲ್ಲಿ ಇದ್ದವರು ಮೊದಲ ಸ್ಥಾನದಲ್ಲಿ ನಿಲ್ಲಬಹುದು ಇದು ಸಾದ್ಯವಾಗುವುದು ಕೇವಲ ಷೇರು ಮಾರುಕಟ್ಟೆಯ ಕ್ಷೇತ್ರದಲ್ಲಿ ಮಾತ್ರ ಎನ್ನಬಹುದಾಗಿದೆ. ಹೌದು ಕಳೆದ ಮೂರು ವರ್ಷಗಳಿಂದ ಅಂದರೆ 2017 ರಿಂದ ನಿರಂತರವಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದ ಅಮೇಜಾ಼ನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಸೈಡ್ ಹೊಡೆದು ಟೆಸ್ಲಾ ಇಂಕ್ ಅಂಡ್ ಸ್ಪೇಸ್ ಎಕ್ಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ದೆಯ ಸ್ದಾಪಕರಾಗಿರುವ ಎಲೋನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.

ನ್ಯುಯಾರ್ಕ್ ಷೇರು ಮಾರುಕಟ್ಟೆಯಲ್ಲಿ ದಕ್ಷಿಣ ಆಫ್ರಿಕಾ ಮೂಲದ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು ನಿನ್ನೆ ಗುರುವಾರ (7) 188.5 ಬಿಲಿಯನ್ ಡಾಲರ್ ನಷ್ಟಿತ್ತು, ಆದರೆ ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯಕ್ಕಿಂತ 1.5 ಬಿಲಿಯನ್ ಡಾಲರ್ ಅಧಿಕವಾಗಿತ್ತು ಎಂದು ಷೇರು ಮಾರುಕಟ್ಟೆಯ ಮೂಲಗಳಿಂದ ತಿಳಿದು ಬಂದಿದೆ. ನ್ಯುಯಾರ್ಕ್ ಷೇರು ಮಾರುಕಟ್ಟೆಯಲ್ಲಿ ಶೇಕಡ 4.8 ರಷ್ಟು ಏರಿಕೆ ಕಂಡಿದೆ ಎನ್ನಲಾಗಿದೆ. ಇನ್ನು ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಗಳ ಉಡಾವಣೆಯ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.

%d bloggers like this: