ನಮ್ಮ ಜೀವನದಲ್ಲಿ ನಾವು ಕೆಲವೊಂದು ವಿಷಯಕ್ಕೆ ಎಷ್ಟರ ಮಟ್ಟಿಗೆ ಅಂಟಿಕೊಂಡಿರುತ್ತೇವೆ ಎಂದರೆ ಅವು ಸದಾ ನಮ್ಮ ನೆನಪಿನಲ್ಲಿ ಉಳಿದಿರುತ್ತವೆ, ಇಂತಹ ನೆನಪಲ್ಲಿ ಸದಾ ಉಳಿಯುವುದು ಈ ಕಾರು ಇದುವೇ ಅಂಬಾಸೆಡರ್ ಕಾರು. ಭಾರತದಲ್ಲಿ ಅಂಬಾಸೆಡರ್ ಕಾರಿನ ಹೆಸರೇ ಕೇಳದವರು ಇಲ್ಲ ಯಾಕೆಂದರೆ ಅಷ್ಟೊಂದು ಪ್ರಸಿದ್ದಿ ಈ ಕಾರು ನಮ್ಮ ದೇಶದಲ್ಲಿ. ಹಿಂದೂಸ್ತಾನ್ ಮೋಟರ್ಸ್ ಕಂಪನಿಯ ಈ ಕಾರು ಪ್ರತಿಯೊಬ್ಬ ರಾಜಕಾರಣಿಯ ಬಳಿ ಇರುತ್ತಿತ್ತು, ಅಷ್ಟೇ ಏಕೆ ಊರಿನಲ್ಲಿ ಶ್ರೀಮಂತರು ಸಹ ಇದೆ ಕಾರಿಗೆ ಮಾರು ಹೋಗಿ ಇವುಗಳನ್ನೇ ಬಳಸುತ್ತಿದ್ದರು. ಸಿಕೆ ಬಿರ್ಲಾ ಒಡೆತನದ ಈಕಾರು ಸುಮಾರು ಅರವತ್ತು ವರ್ಷಗಳ ಹಿಂದೆಯೇ ತಯಾರಾಗಿ ಸುಮಾರು ಅರವತ್ತು ವರ್ಷಗಳ ಕಾಲ ತುಂಬಾ ಪ್ರಸಿದ್ದಿಯಲ್ಲಿತ್ತು.

ಇನ್ನೊಂದು ವಿಶೇಷತೆ ಎಂದರೆ ಭಾರತಕ್ಕೆ ಮೊಟ್ಟ ಮೊದಲ ಡೀಸೆಲ್ ಕಾರು ಬಂದಿದ್ದು ಇದೆ ಅಂಬಾಸೆಡರ್ ಇಂದ, ದೊಡ್ಡ ದೊಡ್ಡ ನಗರಗಳಾದ ಮುಂಬೈ ಡೆಲ್ಲಿ ಹಾಗು ಕೋಲ್ಕತ್ತಾ ನಗರಗಳಲ್ಲಿ ಇಂದಿಗೂ ಈ ಅಂಬಾಸೆಡರ್ ಕಾರುಗಳು ಟ್ಯಾಕ್ಸಿ ರೂಪದಲ್ಲಿ ಸೇವೆಯನ್ನು ನೀಡುತ್ತಿವೆ. ಕ್ರಮೇಣ ಇಪ್ಪತ್ತೊಂದನೆಯ ಶತಮಾನದ ಕಾಲದಲ್ಲಿ ಭಾರತಕ್ಕೆ ಬೇರೆ ದೇಶಗಳಿಂದ ಕಾರುಗಳ ಸ್ಪರ್ಧೆ ಹೆಚ್ಚಾಗಿದ್ದರಿಂದ ಅಂಬಾಸೆಡರ್ ಸ್ಪರ್ಧಿಸಲು ಆಗಲಿಲ್ಲ, ಹಾಗೆ ಹಿಂದೂಸ್ತಾನ್ ಮೋಟರ್ಸ್ ಕಂಪನಿಯು ನಷ್ಟದಲ್ಲಿ ಇದ್ದಿದ್ದರಿಂದ ಕೊನೆಗೂ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಯಿತು.