ಅಮೆರಿಕಾದ ಬೈಡೆನ್ ಸರ್ಕಾರದಲ್ಲಿ ಭಾರತೀಯರದ್ದೇ ಸುಗ್ಗಿ

ವಿಶ್ವದ ದೊಡ್ಡಣ ಎಂಬ ಖ್ಯಾತಿ ಪಡೆದಿರುವ ಅಮೇರಿಕಾದಲ್ಲಿ ಭಾರತೀಯ ಮೂಲದ ಅಮೇರಿಕನ್ನರ ಹವಾ! ಹೌದು ಅಮೇರಿಕ ದೇಶದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ಟೀಮ್ ನಲ್ಲಿ ಬರೋಬ್ಬರಿ 37 ಭಾರತೀಯ ಮೂಲದ ಅಮೇರಿಕನ್ನರಿಗೆ ಅವಕಾಶ ನೀಡಲಾಗಿದೆ. ಜೋ ಬೈಡನ್ ಅವರ ಆಡಳಿತ ತಂಡದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದ ಭಾರತಿಯ ಮೂಲದ ಅಮೇರಿಕನ್ನರಲ್ಲಿ, ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ಇನ್ನು ಮೂವತ್ತೇಳು ಭಾರತೀಯ ಮೂಲದವರಲ್ಲಿ 13 ಮಂದಿ ಮಹಿಳೆಯರು ಎನ್ನವುದು ವಿಶೇಷವಾಗಿದೆ ಮತ್ತು 17 ಮಂದಿ ಶ್ವೇತ ಭವನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಅಮೇರಿಕದೇಶದ ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಭಾರತೀಯ ಮೂಲದ ಅಮೇರಿಕನ್ನರು ವಾಸಿಸುತ್ತಿದ್ದಾರೆ. ಆಗಿದ್ದೂ ಸಹ ಜೋಬೈಡನ್ ಅವರ ಆಡಳಿತದಲ್ಲಿ ಮೂವತ್ತೇಳು ಮಂದಿ ಸ್ದಾನ ಪಡೆದಿರುವುದು ಸಂತೋಷದ ಸಂಗತಿಯಾಗಿದೆ. ಕಳೆದ ಬಾರಿ ಅಂದರೆ 2018ರಲ್ಲಿ ಟ್ರಂಪ್ ಅವರ ವಿದೇಶಿ ನೀತಿಗಳಿಗೆ ಅಸಮಾಧಾನಗೊಂಡು ಸೇವೆ ತ್ಯಜಿಸಿದ್ದ ರಾಜತಾಂತ್ರಿಕರೊಬ್ಬರನ್ನು ಮತ್ತೆ ಜೋಬೈಡನ್ ಅವರು ತಮ್ಮ ಆಡಳಿತ ತಂಡಕ್ಕೆ ಸೇರಿಸಿಕೊಂಡು ರಾಜ್ಯ ಇಲಾಖೆಯ ಮುಖ್ಯ ಹುದ್ದೆಗೆ ನೇಮಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವನೀತಾ ಗುಪ್ತಾ ಅವರಿಗೆ ನ್ಯಾಯಾಂಗ ಇಲಾಖೆಯ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿದೆ, ಮಾಲಾ ಅಡಿಗ ಅವರನ್ನು ಅಮೇರಿಕದ ಪ್ರಥಮ ಮಹಿಳೆ ಎನ್ನುವ ಜಿಲ್ ಬೈಡನ್ ಅವರ ನೀತಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. ಶ್ವೇತ ಭವನ ಕಛೇರಿ ನಿರ್ವಹಣೆ ಮತ್ತು ಲೆಕ್ಕಪತ್ರಗಳ ಆಯವ್ಯಯ ನಿರ್ದೇಶಕರಾಗಿ ನೀರಾ ಟಂಡನ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಕರ್ನಾಟಕದ ಮಂಡ್ಯ ಜಿಲ್ಲೆಯ ಡಾ.ವಿವೇಕ್ ಮೂರ್ತಿಯವರನ್ನು ಅಮೇರಿಕದ ಸರ್ಜನ್ ಜನರಲ್ ಆಗಿ ನೇಮಕ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರನ್ನು ಕೊರೋನ ವೈರಸ್ ನಿಯಂತ್ರಣದ ಮಹತ್ವದ ಜವಬ್ದಾರಿಯನ್ನು ಸಹ ನೀಡಲಾಗಿದೆ. ಈ ವಿಚಾರ ನಿಜಕ್ಕೂ ಕೂಡ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

%d bloggers like this: