ಅಮೆರಿಕದ ಅಧ್ಯಕ್ಷ ರ ಆಡಳಿತ ವಿಭಾಗದಲ್ಲಿ ಸ್ಥಾನ ಪಡೆಯುವುದು ಎಂದರೆ ಅದು ಮಹೋನ್ನತ ಸಂಗತಿಯೇ ಎನ್ನಬಹುದು. ಹೌದು ಅಮೆರಿಕದ ಅಧ್ಯಕ್ಷ ರಿಗೆ ವಿಶ್ವದ ದೊಡ್ಡಣ್ಣ ಎಂದೇ ಕರೆಯುತ್ತಾರೆ ಅಂತಹ ದೊಡ್ಡಣ್ಣನ ಕೈಕೆಳಗೆ ಕೆಲಸ ನಿರ್ವಹಿಸುವುದು ಹೆಮ್ಮೆಯ ವಿಷಯವಾಗಿದೆ. ಇದೀಗ ಕನಡಿಗನೊಬ್ಬ ಹೊಸದಾಗಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರಿದ ಜೋಬಿಡೆನ್ ಅವರ ಆಡಳಿತ ವಿಭಾಗದಲ್ಲಿ ಸರ್ಜನ್ ಜನರಲ್ ಆಗಿ ನೇಕಗೊಂಡಿದ್ದಾರೆ. ಹೌದು ಈ ಹಿಂಡೆ ಅಮೆರಿಕದ ಅಧ್ಯಕ್ಷ ಆಗಿದ್ದ ಬರಾಕ್ ಒಬಾಮಾ ಅವರ ಆಡಳಿತದಲ್ಲಿಯೂ ಸರ್ಜನ್ ಜನರಲ್ ಆಗಿದ್ದ ಕನ್ನಡಿಗ ಡಾಕ್ಟರ್ ವಿವೇಕ್ ಮೂರ್ತಿ ಅವರನ್ನು ಮತ್ತೆ ಆಸ್ಥಾನಕ್ಕೆ ಜೋ ಬಿಡೆನ್ ಆಯ್ಕೆ ಮಾಡಿದ್ದಾರೆ.

ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ವಿವೇಕ ಹಲ್ಲೆಗೆರೆ ಅವರು ಈ ಮೂಲಕ ನಮ್ಮ ನಾಡಿಗೆ ಮತ್ತು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅದರಲ್ಲೂ ವಿಶ್ವ ಕೋರೋಣ ಮಹಾಮಾರಿಗೆ ನಲುಗಿರುವ ಸಂಧರ್ಬದಲ್ಲಿ ವಿವೇಕ್ ಅವರಿಗೆ ನೀಡಿದ ಈ ಜವಾಬ್ದಾರಿ ತುಂಬಾ ಮಹತ್ವಪೂರ್ಣ ವಾಗಿದೆ. ಆದರೆ ಒಬಾಮಾ ಅವರ ಅವಧಿಗಿಂತ ಈ ಬಾರಿ ವಿವೇಕ ಮೂರ್ತಿ ಅವರಿಗೆ ಹೆಚ್ಚಿನ ಸದಸ್ಯರು ಇರುವ ವಿಸ್ತೃತ ತಂಡ ಸಿಗಲಿದೆ ಅಂತೆ. ವಿವೇಕ ಮೂರ್ತಿ ಅವರಿಗೆ ಮತ್ತೊಮ್ಮೆ ಈ ಹುದ್ದೆ ನೀಡಲು ಮುಖ್ಯ ಕಾರಣ ಈ ಹಿಂದೆ ಒಬಾಮಾ ಅವರ ಸಮಯದಲ್ಲಿ ಎಬೋಲ ಮತ್ತು ಝೀಕ ವೈರಸ್ ಗಳ ಹಾವಳಿ ಸಂಧರ್ಬದಲ್ಲಿ ಅದನ್ನು ಸಮರ್ಥವಾಗಿ ಅವರು ಎದುರಿಸಿದ್ದರು ಹಾಗಾಗಿ ಅವರನ್ನೇ ಮತ್ತೆ ಈ ಹುದ್ದೆಗೆ ನೇಮಿಸಲಾಗಿದೆ.

ಡೆಮಾಕ್ರೆಟಿಕ್ ಪಕ್ಷದ ಬೆಂಬಲಿಗರಾಗಿರುವ ವಿವೇಕ ಮೂರ್ತಿ ಅವರು ಈ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಪ್ರಚಾರ ಕಾರ್ಯದಲ್ಲಿ ಆರೋಗ್ಯ ಸಲಹೆಗಾರರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕೋರೋಣ ಹೆಮ್ಮಾರಿ ಮುಖ್ಯವಾಗಿ ಅಮೆರಿಕದಲ್ಲಿ ರೌದ್ರ ನರ್ತನ ನಡೆಸುತ್ತಿದೆ ಮತ್ತು ಈಗಾಗಲೇ ಮೂರು ಲಕ್ಷ ಸನಿಹ ಸಾವುಗಳು ಅಲ್ಲಿ ಸಂಭವಿಸಿವೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿವೇಕ ಮೂರ್ತಿ ಅವರನ್ನು ನಂಬಿ ಅಮೆರಿಕ ಒಳ್ಳೆಯ ದಿನಗಳನ್ನು ಎದುರು ನೋಡುತ್ತಿದ್ದು ವಿವೇಕ ಅವರಿಂದ ಒಳ್ಳೆಯ ಕೆಲಸಗಳು ಆಗಲಿ ಎಂದು ಹಾರೈಸೋಣ.