ಅಮೇರಿಕಾದ ದೊಡ್ಡ ಜಲಪಾತದ ಮುಂದೆ ಕನ್ನಡ ಚಿತ್ರದ ಟೀಸರ್ ಬಿಡುಗಡೆ

ಜೇಮ್ಸ್ ಬಾಂಡ್ ಅವತಾರದಲ್ಲಿ ಫಸ್ಟ್ ರ್ಯಾಂಕ್ ರಾಜು, ಹೌದು 2015 ರಲ್ಲಿ ಬಿಡುಗಡೆಗೊಂಡ ನರೇಶ್ ಕುಮಾರ್ ನಿರ್ದೇಶನದ ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸನ್ಶೇನಲ್ ಕ್ರಿಯೆಟ್ ಮಾಡಿದ ನಟ ಗುರು ನಂದನ್ ಅವರಿಗೆ ಫಸ್ಟ್ ರ್ಯಾಂಕ್ ರಾಜು ಎಂದೇ ಬಿರುದು ಸಿಗುತ್ತದೆ. ಈ ಚಿತ್ರದ ಯಶಸ್ಸಿನ ಬಳಿಕ ಸ್ಮೈಲ್ ಪ್ಲೀಸ್, ರಾಜು ಕನ್ನಡ ಮೀಡಿಯಂ, ಮಿಸ್ಸಿಂಗ್ ಬಾಯ್ ಚಿತ್ರ ಸೇರಿದಂತೆ ಆರೇಳು ಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಟ ಗುರು ನಂದನ್ ಅವರು ರಾಜು ಜೇಮ್ಸ್ ಬಾಂಡ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ರಾಜು ಜೇಮ್ಸ್ ಬಾಂಡ್ ಚಿತ್ರದ ಭಾಗಶಃ ಚಿತ್ರೀಕರಣ ಮುಗಿದಿದ್ದು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಇತ್ತೀಚೆಗೆ ನಟ ಗುರು ನಂದನ್ ಅವರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ದಿನದಂದು ರಾಜು ಜೇಮ್ಸ್ ಬಾಂಡ್ ಚಿತ್ರ ತಂಡ ನಟ ಗುರು ನಂದನ್ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಹೌದು ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಲಾಂಚ್ ಮಾಡಿ ನಟ ಗುರು ನಂದನ್ ಅವರಿಗೆ ಬರ್ಡೇ ಗಿಫ್ಟ್ ನೀಡಿದ್ದಾರೆ ರಾಜು ಜೇಮ್ಸ್ ಬಾಂಡ್ ಚಿತ್ರತಂಡ. ವಿಶೇಷ ಅಂದರೆ ಈ ಚಿತ್ರದ ಟೀಸರ್ ಅನ್ನು ಅಮೆರಿಕದಲ್ಲಿರುವ ಕನ್ನಡಿಗರು ನಯಾಗರಾ ಫಾಲ್ಸ್ ನಲ್ಲಿ ರಿಲೀಸ್ ಮಾಡಿ ನಟ ಗುರು ನಂದನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಜೊತೆಗೆ ರಾಜು ಜೇಮ್ಸ್ ಬಾಂಡ್ ಸಿನಿಮಾಗೆ ಶುಭ ಹಾರೈಸಿದ್ದಾರೆ. ಇನ್ನು ಈ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಸಖತ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ರಾಜು ಜೇಮ್ಸ್ ಬಾಂಡ್ ಸಿನಿಮಾಗೆ ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ಕರ್ಮ ಬ್ರೋಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ , ಕಿರಣ್ ಬರ್ತೂರ್ ನಿರ್ಮಾಣ ಮಾಡಿದ್ದಾರೆ. ರಾಜು ಜೇಮ್ಸ್ ಬಾಂಡ್ ಚಿತ್ರದಲ್ಲಿ ಸಾಧುಕೋಕಿಲ, ಜೈ ಜಗದೀಶ್, ರವಿ ಶಂಕರ್, ಚಿಕ್ಕಣ್ಣ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡಿದ್ದಾರೆ.

%d bloggers like this: