ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದಾಗಿನಿಂದ ಈ ಸಿನಿಮಾವನ್ನು ಯಾವಾಗ ಕಣ್ತುಂಬಿಕೊಳ್ಳುತ್ತೇವೆ ಎಂದು ಅಮೀರ್ ಖಾನ್ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷ ಅಂದರೆ ಲಾಲ್ ಸಿಂಗ್ ಛಡ್ಡಾ ಚಿತ್ರದ ಚಿತ್ರೀಕರಣ ಕಾರ್ಗಿಲ್ ಯಿಂದ ಕನ್ಯಾಕುಮಾರಿ ವರೆಗೂ ದೇಶದ ಪ್ರಮುಖ ನೂರು ನಗರಗಳಲ್ಲಿ ನಡೆದಿದೆ. ಈ ಲಾಲ್ ಸಿಂಗ್ ಛಡ್ಡಾ ಚಿತ್ರಕ್ಕೆ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ವಿಶೇಷತೆ ಅಂದರೆ ಅಮೀರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಮೂವರು ನಟರು ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ಬಣ್ಣ ಹಚ್ಚಿದ್ದಾರೆ.

ಇದರ ಜೊತೆಗೆ ಇದೇ ಮೊದಲ ಬಾರಿಗೆ ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ವಿಯಕಾಮ್18 ಸ್ಟೂಡಿಯೋಸ್ ಮತ್ತು ಪ್ಯಾರಾಮೌಂಟ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಲಾಲ್ ಸಿಂಗ್ ಛಡ್ಡಾ ಚಿತ್ರ 1986 ರಲ್ಲಿ ಪ್ರಕಟಗೊಂಡ ವಿನ್ ಸ್ಟನ್ ಗ್ರೂಮ್ ರಚಿತ ಫಾರೆಸ್ಟ್ ಗಂಪ್ ಪುಸ್ತಕ ಆಧಾರಿತ ಸಿನಿಮಾವಾಗಿದೆ. ಈಗಾಗಲೇ ಈ ಕಥೆಯನ್ನ ಇಂಗ್ಲೀಷಿನಲ್ಲಿ 1994 ರಲ್ಲಿ ಫಾರೆಸ್ಟ್ ಗಂಪ್ ಎಂಬ ಚಿತ್ರ ಕೂಡ ತೆರೆಕಂಡಿದೆ. ಇದರಲ್ಲಿ ನಾಯಕ ನಟರಾಗಿ ಟಾಮ್ ಹ್ಯಾಂಕ್ಸ್ ಅವರು ಫಾರೆಸ್ಟ್ ಗಂಪ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ಅಭಿನಯಕ್ಕೆ ಆಸ್ಕರ್ ಅವಾರ್ಡ್ ಕೂಡ ಲಭಿಸಿದೆ.



ಅದಲ್ಲದೆ ಈ ಫಾರೆಸ್ಟ್ ಗಂಪ್ ಸಿನಿಮಾ ಚಿತ್ರಕಥೆ, ನಿರ್ದೇಶನ, ಸಂಕಲನ ಹೀಗೆ ವಿವಿಧ ಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ. ಹಾಲಿವುಡ್ ನ ಅತ್ಯುತ್ತಮ ಚಿತ್ರಗಳಲ್ಲಿ ಫಾರೆಸ್ಟ್ ಗಂಪ್ ಚಿತ್ರ ಕೂಡ ಒಂದಾಗಿದೆ. ಇದೀಗ ಇದೇ ಫಾರೆಸ್ಟ್ ಗಂಪ್ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಿದ್ದು ಇದರಲ್ಲಿ ಅಮೀರ್ ಖಾನ್ ಸಿಖ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆ ಅಗಲಿದೆ. ಇದಕ್ಕೂ ಮುನ್ನ ಅಮೀರ್ ಖಾನ್ ಅವರು ಫಾರೆಸ್ಟ್ ಗಂಪ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ ನಟ ಟಾಮ್ ಹ್ಯಾಂಕ್ಸ್ ಅವರ ರೆಸ್ಪನ್ಸ್ ಪಡೆದುಕೊಳ್ಳಲು ಅವರಿಗಾಗಿ ಅಮೇರಿಕದಲ್ಲಿ ವಿಶೇಷ ಪ್ರದರ್ಶನ ಆಯೋಜನೆ ಮಾಡಿದ್ದಾರೆ. ಹೀಗಾಗಿ ಅಮೀರ್ ಖಾನ್ ಅಮೆರಿಕಾದತ್ತ ಪಯಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.