ಅಮೀರ್ ಖಾನ್ ಅವರ ದೊಡ್ಡ ದಾಖಲೆ ಮುರಿದು ಹಾಕಿದ ರಾಕಿಂಗ್ ಸ್ಟಾರ್ ಯಶ್ ಅವರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್2 ಸಿನಿಮಾ ವಿಶ್ವಾದ್ಯಂತ ಅಪಾರ ಜನಪ್ರಿಯತೆ ಗಳಿಸಿ ಭಾರತದ ಬಹುತೇಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಸೈಡ್ ಲೈನ್ ಮಾಡಿ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಕೆಜಿಎಫ್2 ಸಿನಿಮಾ ಯಾವ ಮಟ್ಟಿಗೆ ದಾಖಲೆ ಮಾಡಿದೆ ಅಂದರೆ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್2 ಚಿತ್ರ ನಾಲ್ಕು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಇದೀಗ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಆಗಿ ಹೊರ ಹೊಮ್ಮಿದೆ. ಹೌದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿರುವ ಕೆಜಿಎಫ್2 ಚಿತ್ರ ಇದೀಗ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ ಚಿತ್ರದ ದಾಖಲೆಯನ್ನು ಮುರಿದಿದೆ.

ಹೌದು ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಭಾರತೀಯ ಚಿತ್ರರಂಗದದಲ್ಲಿ ಎರಡು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಾರ್ವಕಾಲಿಕ ದಾಖಲೆ ಮಾಡಿದೆ. ಹಿಂದಿ ಭಾಷೆಯಲ್ಲಿ ದಂಗಲ್ ಸಿನಿಮಾ ಬರೋಬ್ಬರಿ 387 ಕೋಟಿ ಗಳಿಕೆ ಮಾಡಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಹೆಸರಿಗೆ ಪಾತ್ರವಾಗಿತ್ತು. ಇದೀಗ ದಂಗಲ್ ಚಿತ್ರದ ದಾಖಲೆಯನ್ನು ಕನ್ನಡದ ಕೆಜಿಎಫ್2 ಸಿನಿಮಾ ಬ್ರೇಕ್ ಮಾಡಿದೆ. ಹೌದು ಕೆಜಿಎಫ್2 ಚಿತ್ರ ನಾಲ್ಕು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಂಬರ್ ಒನ್ ಸಿನಿಮಾ ಅಂದರೆ ಅದು ಬಾಹುಬಲಿ2 ಚಿತ್ರ. ಹೌದು ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ2 ಸಿನಿಮಾ ಬರೋಬ್ಬರಿ ಐನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಇದೀಗ ಇದರ ದಾಖಲೆಯನ್ನು ಮುರಿಯಲು ಕೆಜಿಎಫ್2 ಚಿತ್ರ ಬೆನ್ನೆತ್ತಿದೆ ಎನ್ನಬಹುದು. ಅಮೀರ್ ಖಾನ್ ಅವರ ದಂಗಲ್ ಚಿತ್ರ ವರ್ಲ್ಡ್ ವೈಡ್ ಬರೋಬ್ಬರಿ 2100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿದೆ. ದಂಗಲ್ ಚಿತ್ರ ಈ ಪರಿ ಪ್ರಮಾಣದ ಗಳಿಕೆ ಮಾಡಲು ಪ್ರಮುಖ ಕಾರಣ ಅಂದರೆ ಅದು ದಂಗಲ್ ಚಿತ್ರ ಕೇವಲ ಭಾರತೀಯ ಭಾಷೆಗಳಲ್ಲಿ ಮಾತ್ರ ಅಲ್ಲದೆ ಚೀನಿ ಭಾಷೆಯಲ್ಲಿ ಕೂಡ ರಿಲೀಸ್ ಆಗಿತ್ತು. ಇದೇ ದಂಗಲ್ ಚಿತ್ರ ಬರೋಬ್ಬರಿ ಎರಡು ಸಾವಿರ ಕೋಟಿಯ ಕಲೆಕ್ಷನ್ ಮಾಡಲು ಸಾಧ್ಯ ಆಗೋದಕ್ಕೆ ಪ್ರಮುಖ ಕಾರಣ ಆಯಿತು ಎಂದು ಹೇಳಲಾಗುತ್ತಿದೆ. ಕೆಜಿಎಫ್2 ಚಿತ್ರ ಇದೀಗ ದಂಗಲ್ ಚಿತ್ರದ ದಾಖಲೆ ಮುರಿದು ಎರಡನೇ ಸ್ಥಾನ ಪಡೆದಿದೆ. ಐನೂರು ಕೋಟಿ ರೀಚ್ ಆದ್ರೆ ಮುಲಾಜಿಲ್ಲದೆ ಬಾಹುಬಲಿ2 ಚಿತ್ರದ ದಾಖಲೆಯನ್ನು ಮುರಿಯಲಿದೆ.

%d bloggers like this: