ಅಮಿತ್ ಶಾ ಅವರ ಮಗ ಜೆಯ್ ಶಾ ಎದುರು ಸೋತ ಸೌರವ್ ಗಂಗೂಲಿ ಇಲೆವೆನ್

ಗೃಹ ಸಚಿವ ಅಮಿತ್ ಷಾ ಅವರ ಮಗ ಜೆಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಈಗ ಜಯಶಾ ಅವರು ಕ್ರಿಕೆಟ್ ಆಡಿದ್ದಾರೆ ಅಷ್ಟೇ ಏಕೆ ಭಾರತದ ದಿಗ್ಗಜ ನಾದಸ್ವರ ಗಂಗೂಲಿ ಅವರ ತಂಡವನ್ನು ಸೋಲಿಸಿ ಜಯ ಸಾಧಿಸಿದ್ದಾರೆ, ಅಂದಹಾಗೆ ಅಸಲಿಗೆ ಏನಿದು ಎಂದು ತಿಳಿದುಕೊಳ್ಳಿ. ನಾಳೆಯಿಂದ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದಲ್ಲಿ ಬಿಸಿಸಿಐ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಹಲವಾರು ಮುಖ್ಯ ತೀರ್ಮಾನಗಳು ಹಾಗೂ ನಿರ್ಧಾರಗಳು ನಡೆಯಲಿವೆ. ಅದರ ಸದಸ್ಯರು ಎಲ್ಲರೂ ಸೇರಿ ಚರ್ಚೆ ಮಾಡಲಿದ್ದಾರೆ. ಈ ಚರ್ಚೆಯ ಜೊತೆ ಕ್ರಿಕೆಟ್ ಗೆ ಸಂಬಂಧಿಸಿದ ಹಲವಾರು ಸುದ್ದಿಗಳ ಬಗ್ಗೆ ಮಾತುಕತೆ ನಡೆಯಲಿದೆ.

ಈ ನಡುವೆ ಇಂದು ಅಹಮದಾಬಾದ್ ನಗರದ ಮೋಟೆರ ಕ್ರಿಕೆಟ್ ಮೈದಾನದಲ್ಲಿ 12 ಓವರ್ಗಳ ಸ್ನೇಹಪೂರ್ಣ(ಫ್ರೆಂಡ್ಲಿ) ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಅವರ ಮಗ ಜಯಶಾ ಮತ್ತೊಂದು ಕಡೆ ಸೌರವ್ ಗಂಗುಲಿ ಅವರದು ಇನ್ನೊಂದು ತಂಡ. ಎರಡು ತಂಡಗಳಲ್ಲಿ 11 ಬಿಸಿಸಿಐ ಸದಸ್ಯರು ಕ್ರಿಕೆಟ್ ಆಡಿದ್ದಾರೆ, ಈ ಪಂದ್ಯದ ಅಂಪೈರ್ ಆಗಿ ರಾಜೀವ್ ಶುಕ್ಲಾ ಅವರು ನೇಮಕಗೊಂಡಿದ್ದರು. ಇನ್ನು ಮೊದಲು ಬ್ಯಾಟ್ ಮಾಡಿದ ಜಯ ಶಾ ಅವರ ತಂಡ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 128 ರನ್ಗಳನ್ನು ಕಲೆ ಹಾಕಿತ್ತು. ತದನಂತರ ಬ್ಯಾಟಿಂಗ್ ಮಾಡಿದ ಸೌರವ್ ಗಂಗೂಲಿ ಅವರ ತಂಡ 28 ರನ್ಗಳ ಅಂತರದಿಂದ ಸೋಲು ಕಂಡಿತು.

%d bloggers like this: