ಅಮಿತಾಬ್ ಬಚ್ಚನ್ ಅವರ ಬಂಗಲೆಯನ್ನೇ ಬಾಡಿಗೆಗೆ ಪಡೆದ ಸ್ಟಾರ್ ನಟಿ, ತಿಂಗಳ ಬಾಡಿಗೆ ಎಷ್ಟು ಗೊತ್ತೇ

ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಮನೆಯನ್ನೇ ಬಾಡಿಗೆಗೆ ಪಡೆದ ಸ್ಟಾರ್ ನಟಿ! ಭಾರತೀಯ ಚಿತ್ರರಂಗದ ಅನೇಕ ನಟ ನಟಿಯರು ಐಷಾರಾಮಿ ಬದುಕನ್ನ ನಡೆಸುತ್ತಿರುತ್ತಾರೆ. ಜೊತೆಗೆ ಅವರ ಆದಾಯವು ಕೂಡ ಅಷ್ಟೇ ದುಬಾರಿ ಆಗಿಯೇ ಇರುತ್ತದೆ. ಬಹುತೇಕ ಸ್ಟಾರ್ ನಟ ನಟಿಯರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ತೊಡಗಿಕೊಂಡಿರುವುದಿಲ್ಲ. ಅವರು ಕಂಪನಿಗಳಲ್ಲಿ ಹೂಡಿಕೆ, ಜಾಹೀರಾತು, ಶೇರು ಮಾರುಕಟ್ಟೆ ಹೀಗೆ ಅನೇಕಾನೇಕ ಆದಾಯ ಬರುವ ಹಾಗೇ ಯೋಜನೆ ಮಾಡಿಕೊಂಡಿರುತ್ತಾರೆ. ಹೀಗೆ ವರ್ಷಕ್ಕೆ ಕೋಟಿ ಕೋಟಿ ಆದಾಯ ಗಳಿಸುವ ಈ ಸ್ಟಾರ್ಸ್ ಪ್ರತಿಷ್ಟಿತ ನಗರಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಪ್ರಾಪರ್ಟಿಯನ್ನು ಖರೀದಿ ಮಾಡಿರುತ್ತಾರೆ. ಅಂತೆಯೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಮುಂಬೈನ ಪ್ರತಿಷ್ಟಿತ ಏರಿಯಾಗಳಲ್ಲಿ ಒಂದಷ್ಟು ಪ್ರಾಪರ್ಟಿ ಮಾಡಿಟ್ಟುಕೊಂಡಿದ್ದಾರೆ.

ಸದ್ಯಕ್ಕೆ ಅವರು ಜಲ್ಸಾ ಎಂಬ ಹೆಸರಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ಮನೆಯ ಬಳಿ ಅಮ್ಮು ಮತ್ತು ವಾತ್ಸಾ ಎಂಬ ಎರಡು ಮನೆಗಳು ಕೂಡ ಇವೆ. ಈ ಎರಡು ಮನೆಗಳ ಪೈಕಿ ಅಮಿತಾಬ್ ಬಚ್ಚನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಬಾಡಿಗೆಗೆ ನೀಡಿದ್ದಾರೆ. ಈ ಮನೆಯು ಸುಮಾರು 3150 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಹದಿನೈದು ವರ್ಷದ ಅವಧಿಗೆ ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಡ್ವಾನ್ಸ್ 2.26 ಕೋಟಿರೂ ನೀಡಿದ್ದು,ಪ್ರತಿ ತಿಂಗಳು 18.9 ಲಕ್ಷರೂ ಬಾಡಿಗೆ ನೀಡುತ್ತಿದೆ. ಅದೇ ರೀತಿಯಾಗಿ ಅಮಿತಾಬ್ ಅವರ ಇನ್ನೊಂದು ಮನೆಯನ್ನ ಇದೀಗ ಬಾಲಿವುಡ್ ಸ್ಟಾರ್ ನಟಿಯಾದ ಕೃತಿ ಸನೋನ್ ಬಾಡಿಗೆಗೆ ಪಡೆದಿದ್ದಾರಂತೆ.

ಅದೂ ಕೂಡ ಎರಡು ವರ್ಷಗಳ ಅವಧಿಗೆ. ಹೌದು ನಟಿ ಕೃತಿ ಸನೋನ್ ಅವರು ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯ ಬಂಗಲೆಯನ್ನ ಅರವತ್ತು ಲಕ್ಷರೂ ಮುಂಗಡವಾಗಿ ಹಣ ನೀಡಿದ್ದು, ತಿಂಗಳಿಗೆ ಹತ್ತು ಲಕ್ಷರೂ ಬಾಡಿಗೆಯಾಗಿ ಎರಡು ವರ್ಷಗಳ ಅವಧಿಗೆ ಬಂಗಲೆಯನ್ನು ಪಡೆದಿದ್ದಾರೆ. ಈ ಬಾಡಿಗೆಯ ಅವಧಿಯು 2021ರ ಅಕ್ಟೋಬರ್ 16ರಿಂದ 2023ರ ಅಕ್ಟೋಬರ್ 15ರವರೆಗೆ ಇರಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಒಟ್ಟಾರೆಯಾಗಿ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಸಿನಿಮಾ, ಜಾಹೀರಾತು, ರಿಯಾಲಿಟಿ ಶೋ ಇದೀಗ ಬಾಡಿಗೆ ಹೀಗೆ ಒಂದಷ್ಟು ಆದಾಯದ ಮೂಲಕ ಬಾಲಿವುಡ್ ಮಂದಿಯನ್ನ ನಿಬ್ಬೆರಗಾಗಿಸುತ್ತಿದ್ದಾರೆ. ಇನ್ನೊಂದೆಡೆ ನಟಿ ಕೃತಿ ಸನೋನ್ ಅವರಿಗೆ ಬಿಗ್ಬಿ ಅವರ ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ ಎಂಬ ಖುಷಿ ಮತ್ತೊಂದೆಡೆ.

%d bloggers like this: