ಸ್ಯಾಂಡಲ್ವುಡ್ ನ ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇದೀಗ ನಟಿ ಅಮೂಲ್ಯ ಮತ್ತು ಜಗದೀಶ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಅಮೂಲ್ಯ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದರು. ಇತ್ತೀಚೆಗೆ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ಮನೆಯಲ್ಲಿಯೇ ಕುಟುಂಬಸ್ಥರೊಡನೆ ನೆರವೇರಿತ್ತು. ಈ ಕಾರ್ಯಕ್ರಮದ ನಂತರ ಅಮೂಲ್ಯ ಅವರ ಸ್ನೇಹಿತರು ಸೇರಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಎರಡು ಕಾರ್ಯಕ್ರಮಗಳ ನಂತರ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಕನ್ನಡದ ಚಿತ್ರರಂಗದ ಗಣ್ಯರಿಗೆ ಆಹ್ವಾನಿಸಿ, ವಿಭಿನ್ನ ಥೀಮ್ ನಲ್ಲಿ ಪಾರ್ಟಿ ಒಂದನ್ನು ಅರೆಂಜ್ ಮಾಡಲಾಗಿತ್ತು.

ಚಿತ್ರರಂಗದ ಅನೇಕ ನಟ ನಟಿಯರು ತಮ್ಮ ಫ್ಯಾಮಿಲಿಯೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದು ವಿಶೇಷ. ಕೆಲವು ದಿನಗಳ ಹಿಂದೆ ಅಮೂಲ್ಯ ಅವರು ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಇವರ ಬೇಬಿ ಬಂಪ್ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇತ್ತೀಚೆಗೆ ರೆಸಾರ್ಟ್ ಒಂದರಲ್ಲಿ ನಡೆದ ಪಾರ್ಟಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಸುಧಾರಾಣಿ, ಶೃತಿ, ಮಾಳವಿಕಾ ಅವಿನಾಶ್, ಭಾರತಿ ವಿಷ್ಣುವರ್ಧನ್ ಭಾಗವಹಿಸಿದ್ದರು. ನಟಿ ರಾಧಿಕಾ ಪಂಡಿತ್ ಜೊತೆ ಅವರ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ಆಹ್ವಾನಿಸಿ ಅಮೂಲ್ಯ ಅವರಿಗೆ ಶುಭ ಕೋರಿದರು.



ನಟ ಗಣೇಶ್ ದಂಪತಿ ಹಾಗೂ ಮಕ್ಕಳು, ನಟ ಪ್ರೇಮ್ ದಂಪತಿಗಳು ಹಾಗೂ ಅವರ ಮಕ್ಕಳು, ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಹೀಗೆ ಹಲವಾರು ನಟರು ತಮ್ಮ ಫ್ಯಾಮಿಲಿ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಮೂಲ್ಯ ಅವರಿಗೆ ಗಿಫ್ಟ್ ಗಳ ಸುರಿಮಳೆಯೇ ಆಗಿದೆ. ಇನ್ನೂ ವಿಶೇಷವೆಂದರೆ ಸಾರ್ವಜನಿಕವಾಗಿ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಅಮೂಲ್ಯ ಅವರ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಯು ಎಸ್ ನಲ್ಲಿದ್ದ ನಟಿ ರಮ್ಯಾ ಕೂಡ ಈ ಪಾರ್ಟಿಗೋಸ್ಕರ ಬೆಂಗಳೂರಿಗೆ ಬಂದಿದ್ದು ವಿಶೇಷ. ಅಮೂಲ್ಯ ಮತ್ತು ರಮ್ಯಾ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರು.



ಈ ಹಿಂದೆ ರಮ್ಯಾ ಕೂಡಾ ಈ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದರು. ಪಾರ್ಟಿಗೆ ಕೊಂಚ ತಡವಾಗಿ ಬಂದ ರಮ್ಯಾ ಅವರು ಅಮೂಲ್ಯ ಅವರಿಗೆ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿ ವಿಶ್ ಮಾಡಿದ್ದಾರೆ. ಇದೀಗ ರಮ್ಯಾ ಅವರು ನೀಡಿರುವ ಗಿಫ್ಟ್ ಸುದ್ದಿಯಲ್ಲಿದೆ. ರಮ್ಯಾ ಅವರು ನೀಡಿರುವ ಗಿಫ್ಟ್ ನ್ನು ನಟಿ ಅಮೂಲ್ಯ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿ ಸಂತಸ ವ್ಯಕ್ತಪಡಿಸಿದರು. ರಮ್ಯಾ ಅವರು ಸ್ಯಾಂಡಲ್ವುಡ್ ನಿಂದ ದೂರವಿದ್ದರೂ, ಸ್ಯಾಂಡಲ್ವುಡ್ ಮಂದಿಯ ನಂಟನ್ನು ಬಿಟ್ಟಿಲ್ಲ. ಅಮೂಲ್ಯ ಅವರ ಪಾರ್ಟಿಗೆ ಸ್ವಲ್ಪ ತಡವಾಗಿ ಬಂದ ರಮ್ಯಾ ಅವರು ವಿಶೇಷವಾದ ಕನಕವಲ್ಲಿ ಬ್ರಾಂಡ್ ನ ಸೀರೆಯ ಜೊತೆಗೆ ಗ್ರೀಟಿಂಗ್ ಕಾರ್ಡ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.



ಕನಕವಲ್ಲಿ ಬ್ರ್ಯಾಂಡ್ ಪ್ರತಿಷ್ಟಿತ ಮತ್ತು ಸಾಕಷ್ಟು ವರ್ಷಗಳಿಂದ ಗ್ರಾಹಕರ ವಿಶ್ವಾಸ ಸಂಪಾದಿಸಿರುವ ಬ್ರಾಂಡ್ ಆಗಿದ್ದು, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು, ದೊಡ್ಡ ದೊಡ್ಡ ಉದ್ಯಮಿಗಳು ಈ ಸೀರೆಯನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಹಾಗೆಯೇ ಕನಕವಲ್ಲಿ ಸೀರೆಗಳು ಬಹಳ ದುಬಾರಿ ಕೂಡ ಹೌದು. ಅಮೂಲ್ಯ ಅವರು ಈ ಸೀರೆಯನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ, ಧನ್ಯವಾದಗಳು ರಮ್ಯಾ ಮೇಡಂ. ನೀವು ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನಗೆ ಮತ್ತಷ್ಟು ಖುಷಿ ತಂದಿದೆ. ಈ ಸೀರೆ ನನಗೆ ತುಂಬಾ ಇಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ. ರಮ್ಯಾ ಅವರು ಕೇವಲ ಅಮೂಲ್ಯ ಅವರಿಗೆ ಮಾತ್ರವಲ್ಲದೆ, ನಟಿ ರಚಿತಾ ರಾಮ್ ಅವರ ಹುಟ್ಟುಹಬ್ಬಕ್ಕೂ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದರು. ಈ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ರಚಿತಾ ರಾಮ್ ಅವರು ಹೇಳಿಕೊಂಡಿದ್ದರು.