ಆಂಧ್ರ ತೆಲಂಗಾಣದಲ್ಲೂ ಕೆಜಿಎಫ್ ಗೆ ಬಂಗಾರದ ಬೆಲೆ, ಇಷ್ಟು ದೊಡ್ಡ ಮೊತ್ತಕ್ಕೆ ಹಕ್ಕುಗಳ ಬೇಡಿಕೆ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್2 ಚಿತ್ರದ ವಿತರಣೆಯ ಹಕ್ಕು ಪಡೆಯಲು ಭಾರಿ ಪೈಪೋಟಿ! ಕನ್ನಡದ ಸಿನಿಮಾ ಅಂದರೆ ಪರಭಾಷೆಯವರು ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು, ಕನ್ನಡ ಸಿನಿಮಾಗಳಲ್ಲಿ ಗುಣಮಟ್ಟವಿರುವುದಿಲ್ಲ, ಕಥೆ ಇರುವುದಿಲ್ಲ, ಅಪ್ಡೇಟ್ ಆಗಿಲ್ಲ ಎಂದು ಅಣಿಕಿಸುತ್ತಿದ್ದವರಿಗೆ ಇಂದು ಕೆಜಿಎಫ್ ಚಿತ್ರ ತಕ್ಕ ಉತ್ತರ ನೀಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಡೀ ಭಾರತೀಯ ಚಿತ್ರರಂಗಕ್ಕೆ 70ರಿಂದ 80 ದಶಕದಲ್ಲಿ ರಾಜ್ ಕುಮಾರ, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಷ್ ದಿಗ್ಗಜ ನಟರಿಂದ ಕನ್ನಡ ಚಿತ್ರರಂಗ ಮಾದರಿಯಾಗಿತ್ತು ಎಂಬುದನ್ನು ಮರೆಯಬಾರದು. ಅಂದಹಾಗೆ ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ ಮನೋಭಾವನೆ ಬರಲು ಮುಖ್ಯ ಕಾರಣ ಪರಭಾಷಿಕರು ಮಾಡಿದ ಚಿತ್ರಗಳನ್ನು ನಮ್ಮಲ್ಲಿ ರಿಮೇಕ್ ಮಾಡುತ್ತಿದ್ದರು.

ನಮ್ಮಲ್ಲಿ ಸೃಜನಶೀಲ ಕಥೆಗಾರರು, ನಿರ್ದೇಶಕರು ಇದ್ದರೂ ಕೂಡ ಅವರಿಗೆ ಸಹಕಾರ, ಇಲ್ಲ ಅವರ ಪ್ರತಿಭೆ ಗುರುತಿಸುವಲ್ಲಿ ನಮ್ಮವರು ಎಡವಿದ್ದರೋ ಏನೋ ಗೊತ್ತಿಲ್ಲ ಒಟ್ಟಾರೆಯಾಗಿ ಕನ್ನಡ ಸಿನಿಮಾಗಳನ್ನು ತಲೆಯೆತ್ತಿ ನೋಡದ ಪರಭಾಷಿಕರು ಲೂಸಿಯಾ, ಯುಟರ್ನ್, ರಂಗಿತರಂಗ, ಗುಲ್ಟು, ಕೆಜಿಎಫ್ ಸಿನಿಮಾಗಳನ್ನು ನೋಡಿ ಕನ್ನಡ ಸಿನಿಮಾಗಳ ಬಗ್ಗೆ ಗಮನ ಹರಿಸಿದರು. ಇದೀಗ ಕನ್ನಡ ಚಿತ್ರರಂಗದ ಸುವರ್ಣಯುಗ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಕಾರಣ ನಮ್ಮಲ್ಲಿಯೂ ಸಹ ಗುಣಮಟ್ಟದ ಸಿನಿಮಾಗಳು ಬರತೊಡಗಿದ್ದಾವೆ. ಸಿನಿಮಾದ ಬಗ್ಗೆ ಪ್ಯಾಷನ್ ಇರುವ ನಿರ್ಮಾಪಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ. ನಮ್ಮ ಕನ್ನಡದ ನಿರ್ದೇಶಕರು ಕೂಡ ಸೃಜನ ಶೀಲರಾಗಿ, ಸಂವೇದನಾ ಶೀಲರಾಗಿ ಚಿಂತನೆ ಮಾಡುತ್ತಾರೆ ಎಂಬುದಕ್ಕೆ ಕನ್ನಡದಲ್ಲಿ ಬರುತ್ತಿರುವ ಇತ್ತೀಚಿನ ಚಿತ್ರಗಳೇ ಸಾಕ್ಷಿ ಎನ್ನಬಹುದು.

ವಿಶೇಷವಾಗಿ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಾಪ್ಟರ್2 ಚಿತ್ರ ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಹೀಗಿರುವಾಗಲೇ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆಯಲು ಪರಭಾಷೆ ಸಿನಿಮಾ ವಿತರಕರು ಪೈಪೋಟಿ ನಡೆಸುತ್ತಿದ್ದಾರೆ. ಆಂಧ್ರ ಮತ್ತು ತೆಲುಗಿನಲ್ಲಿ ಕೆಜಿಎಫ್ ಚಾಪ್ಟರ್2 ಚಿತ್ರದ ವಿತರಣೆಯ ಹಕ್ಕನ್ನು ಆಂಧ್ರದ ಪ್ರಖ್ಯಾತ ವಿತರಕರೊಬ್ಬರು ಬರೋಬ್ಬರಿ 60ಕೋಟಿಗೆ ಖರೀದಿ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ‌. ಈ ಹಿಂದೆ ಕೆಜಿಎಫ್ ಪಾರ್ಟ್1 ಅನ್ನು ಟಾಲಿವುಡ್ ನ ಖ್ಯಾತ ನಟ ವಿಶಾಲ್ ಹಂಚಿಕೆ ಮಾಡಿದ್ದರು.

%d bloggers like this: