ಆಂಧ್ರ ಪ್ರವಾಹ, ಸರ್ಕಾರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ ಸ್ಟಾರ್ ನಟ ಹಾಗೂ ಮಗ

ಆಂಧ್ರದಲ್ಲಿ ಅತೀವೃಷ್ಟಿಗೆ ಜನ ಜೀವನ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿರುವ ಸಂಕಷ್ಟದ ಸಂಧರ್ಭದಲ್ಲಿ ಆಂಧ್ರ ಪ್ರದೇಶ ಸರ್ಕಾರದ ಜೊತೆಯಾಗಿ ನಿಂತು ನೆರವಾದ ಟಾಲಿವುಡ್ ಸ್ಟಾರ್ ನಟ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಅತಿಯಾದ ಮಳೆ ಪ್ರವಾಹ ಉಂಟಾಗಿದೆ. ಇದರಿಂದ ರೈತರು ಬೆಳೆದ ಬೆಳೆಗಳು ಮುಳುಗಡೆಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದೇ ಕಂಗಲಾಗಿದ್ದಾರೆ. ಇದರ ಬೆನ್ನಲ್ಲೇ ಬೆಳೆಗಳು ನಾಶವಾಗಿ ಪೂರೈಕೆ ಕಡೆಮೆಯಾಗಿ ಬೇಡಿಕೆ ಹೆಚ್ಚಾಗಿ ತರಕಾರಿಗಳ ಬೆಲೆಗಳು ಗಗನಕ್ಕೇರಿ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಕರ್ನಾಟಕ ರಾಜ್ಯದ ಕರಾವಳಿ ಭಾಗಗಳು ಸೇರಿದಂತೆ ಮಳೆಯ ಅಬ್ಬರ ಜೋರಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ಬೆಳೆ ಪರಿಹಾರ ಘೋಷಣೆ ಮಾಡಿದೆ. ಅದರಂತೆ ನೆರೆ ರಾಜ್ಯಗಳಾದ ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿಯೂ ಕೂಡ ಮಳೆ ಪ್ರವಾಹ ಹೆಚ್ಚಾಗಿದೆ. ಆಂಧ್ರ ಪ್ರದೇಶದಲ್ಲಿ ಮಳೆಯ ಪ್ರವಾಹ ತೀವ್ರತೆ ಹೆಚ್ಚಾಗಿ ದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಜಗನ್ ಅವರ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಎಲ್ಲಾ ರೀತಿಯ ಸಕಲ ಸೌಕರ್ಯ ಸೌಲಭ್ಯಗಳ ಬಗ್ಗೆ ಗಮನ ಹರಿಸುತ್ತಿದೆ. ಪ್ರವಾಹದಿಂದಾಗಿ ಜಗನ್ ಸರ್ಕಾರಕ್ಕೆ ಆರ್ಥಿಕ ಹೊಡೆತ ಕೂಡ ಹೆಚ್ಚಾಗಿದೆ.ಈ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕೂಡ ಹೆಣಗಾಡುತ್ತಿದೆ.

ಈಗಾಗಲೇ ಆಂಧ್ರ ಪ್ರದೇಶದ ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಜ್ಯೂನಿಯರ್ ಎನ್.ಟಿ.ಆರ್. ಪ್ರಿನ್ಸ್ ಮಹೇಶ್ ಬಾಬು ಸೇರಿದಂತೆ ಅನೇಕ ಟಾಲಿವುಡ್ ನಟರು ನೆರವಾಗಿದ್ದರು. ಇದೀಗ ಅವರಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ನಟ ರಾಮ್ ಚರಣ್ ತೇಜಾ ಅವರು ಇಬ್ಬರು ಸೇರಿ ತಲಾ ಇಪ್ಪತ್ತೈದು ಲಕ್ಷ ರೂಗಳನ್ನು ಆಂಧ್ರ ಪ್ರದೇಶ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಕುರಿತು ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ವ್ಯಾಪಕವಾಗಿ ಹಾನಿಯುಂಟಾಗಿರುವ ವಿಚಾರ ಬಹಳ ನೋವುಂಟು ಮಾಡಿದೆ.

ಪ್ರವಾಹದಿಂದ ಉಂಟಾದ ವ್ಯಾಪಕ ವಿನಾಶ ಮತ್ತು ಹಾನಿಯಿಂದ ನನಗೆ ನೋವಾಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಇಪ್ಪತ್ತು ಲಕ್ಷ ರೂ. ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ನಟ ರಾಮ್ ಚರಣ್ ತೇಜಾ ಅವರು ಕೂಡ ಭಯಾನಕ ಪ್ರವಾಹದಿಂದಾಗಿ ಆಂಧ್ರದ ಜನತೆ ಅನುಭವಿಸುತ್ತಿರುವ ಕಷ್ಟವನ್ನು ನೋಡಲು ಹೃದಯ ಭಾರವೆನಿಸುತ್ತಿದೆ. ಜನರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಇಪ್ಪತ್ತೈದು ಲಕ್ಷ ರೂಪಾಯಿಯ ನನ್ನದೊಂದು ಪುಟ್ಟ ಕಾಣಿಕೆ ನೀಡುತ್ತಿದ್ದೇನೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಜನರು ಸಂಕಷ್ಟದ ಸಮಯದಲ್ಲಿರುವ ತೆಲುಗು ಚಿತ್ರರಂಗದ ಅನೇಕ ಸ್ಟಾರ್ ನಟರು ಸರ್ಕಾರದ ಜೊತೆಗೆ ನಿಂತಿರುವುದು ಶ್ಲಾಘನೀಯವಾದದ್ದಾಗಿದೆ.

%d bloggers like this: