ಅಂದು ನಮ್ಮ ಕನ್ನಡದ ಕೆಜಿಎಫ್ ಚಿತ್ರದ ಬಗ್ಗೆ ಕೇವಲವಾಗಿ ಮಾತನಾಡಿದ್ದ ಟಾಲಿವುಡ್ ನಿರ್ದೇಶಕ ಬುಚ್ಚಿಬಾಬು ಅವರು ಇದೀಗ ಅದೇ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಅಚ್ಚರಿಯ ಮಾತೊಂದನ್ನ ಆಡಿದ್ದಾರೆ. ನಮ್ಮ ತೆಲುಗಿನ ಪುಷ್ಪ ಅಂತಹ ಒಂದು ಚಿತ್ರ ಕನ್ನಡದ ಹತ್ತು ಕೆಜಿಎಫ್ ಅಂತಹ ಚಿತ್ರಗಳಿಗೆ ಸಮ ಎಂದು ಹೇಳಿದ ನಿರ್ದೇಶಕ ಇಂದು ನನಗೆ ಪ್ರಶಾಂತ್ ನೀಲ್ ಅವರು ಸ್ಪೂರ್ತಿ ಎಂದು ಹೇಳಿದ್ದಾರೆ. ತೆಲುಗಿನ ಸ್ಟಾರ್ ನಟ ಅಲ್ಲೂ ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಕಾರ್ಯಕ್ರಮವೊಂದರಲ್ಲಿ ಟಾಲಿವುಡ್ ನಿರ್ದೇಶಕ ಬುಚ್ಚಿಬಾಬು ಅವರು ಪುಷ್ಪ ಚಿತ್ರವನ್ನ ಹೊಗಳುವ ಭರದಲ್ಲಿ ಕೆಜಿಎಫ್ ಅಂತಹ ಹತ್ತು ಚಿತ್ರ ನಮ್ಮ ಒಂದು ಪುಷ್ಪ ಚಿತ್ರಕ್ಕೆ ಸಮ ಎಂದು ಹೇಳಿದ್ರು. ಬುಚ್ಚಿಬಾಬು ಅವರ ಈ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿತ್ತು. ಅದರಂತೆ ಪುಷ್ಪ ಸಿನಿಮಾ ರಿಲೀಸ್ ಆದ ನಂತರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆಗ ಬುಚ್ಚಿ ಬಾಬು ಅವರ ಹೇಳಿಕೆಯನ್ನ ಸ್ವತಃ ತೆಲುಗು ಸಿನಿ ಪ್ರೇಕ್ಷಕರೇ ಒಪ್ಪಲಿಲ್ಲ.
ಪುಷ್ಪ ಚಿತ್ರ ಕೆಜಿಎಫ್ ಚಿತ್ರವನ್ನ ಟಚ್ ಕೂಡ ಮಾಡಕ್ಕಾಡಲ್ಲ ಅಂತ ಹೇಳಿದ್ರು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಬುಚ್ಚಿಬಾಬು ಅವರನ್ನ ಸಖತ್ತಾಗೇ ಟ್ರೋಲ್ ಮಾಡಿದ್ರು. ಕೆಜಿಎಫ್2 ಚಿತ್ರ ರಿಲೀಸ್ ಆದ ನಂತರ ಕನ್ನಡ ಚಿತ್ರದ ತಾಕತ್ತು ಏನು ಎಂಬುದನ್ನು ಟಾಲಿವುಡ್ ನಿರ್ದೇಶಕ ಬುಚ್ಚಿಬಾಬುಗೆ ಅವರಿಗೆ ಮಾತ್ರ ಅಲ್ಲ ಇಡೀ ವಿಶ್ವದ ಸಿನಿಮಾರಂಗಕ್ಕೆ ತೋರಿಸಿಕೊಟ್ರು ಪ್ರಶಾಂತ್ ನೀಲ್. ಇದೀಗ ಅಂದು ಕೆಜಿಎಫ್ ಚಿತ್ರದ ಬಗ್ಗೆ ಲಘುವಾಗಿ ಮಾತನಾಡಿದ್ದ ಬುಚ್ಚಿಬಾಬು ಅವರು ಪ್ರಶಾಂತ್ ನೀಲ್ ಅವರನ್ನ ಹೈದರಾಬಾದ್ ನಲ್ಲಿ ಭೇಟಿ ಆಗಿ ಒಂದಷ್ಟು ಸಮಯ ಕಾಲ ಕಳೆದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಬುಚ್ಚಿಬಾಬು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶಾಂತ್ ನೀಲ್ ಅವರನ್ನ ಆಲಂಗಿಸಿಕೊಂಡಿರುವ ಫೋಟೋವನ್ನ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿದ್ರೇ ಈ ಸುದ್ದಿ ವೈರಲ್ ಆಗ್ತಿರ್ಲಿಲ್ಲ. ಆದ್ರೇ ಪ್ರಶಾಂತ್ ನೀಲ್ ಅವರನ್ನ ಅಪ್ಪಿಕೊಂಡಿರುವ ಫೋಟೋ ಶೇರ್ ಮಾಡುವುದರ ಜೊತೆಗೆ ಮೈ ರೀಸೆಂಟ್ ಇನ್ಸಿಪಿರೇಶನ್ ಅಂತ ಕ್ಯಾಪ್ಶನ್ ಕೊಟ್ಟಿದ್ದಾರೆ. ಇದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗಿದೆ.