ಅಂದು ಆಪಲ್ ಕಂಪೆನಿ ಈತನ ಜೊತೆ ಮಾತನಾಡಲು ನಿರಾಕರಿಸಿತ್ತು ಆದರೆ ಈಗ ಈತ ಜಗತ್ತಿನ ಶ್ರೀಮಂತ ವ್ಯಕ್ತಿ

ನಮ್ಮ ಭೂಮಂಡಲದಲ್ಲಿ ಕೆಲವರು ದಿನನಿತ್ಯದ ಹೊಟ್ಟೆಪಾಡಿಗಾಗಿ ತುಂಡು ಬಟ್ಟೆಗಾಗಿ ಜೀವನ ನಡೆಸಿ್ದರೆ ಇನ್ನು ಕೆಲವರು ವಿಶ್ವದಲ್ಲಿ ತಮ್ಮದೇ ಛಾಪು ಮೂಡಿಸಲು ತಯಾರಾಗಿ ನಿಂತಿರುತ್ತಾರೆ ಮತ್ತು ಅದೇ ದಿಶೆಯಲ್ಲಿ ಸಾಗುತ್ತಾರೆ. ಇಂತಹ ವಿಷಯವನ್ನು ಗಮನಿಸಿದರೆ ಎಲಾನ್ ಮಸ್ಕ್ ಎಂಬ ಹೆಸರು ಸದ್ಯಕ್ಕೆ ಅನೇಕರ ಬಾಯಿಯಲ್ಲಿ ಕೇಳಿ ಬರುತ್ತಿರುವ ಹೆಸರಾಗಿದೆ. ಹೌದು ಕಳೆದ ಎರಡು ಮೂರು ತಿಂಗಳಿಂದ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಾಗ ಒಮ್ಮೆ ಎಲ್ಲರ ಕಣ್ಣು ಎಲಾನ್ ಮಸ್ಕ್ ಎಂಬ ಹೆಸರಿನ ಮೇಲೆ ಬೀಳುತ್ತಿದೆ.

ಅಷ್ಟಕ್ಕೂ ಈ ಎಲಾನ್ ಮಸ್ಕ್ ಯಾರು ಗೊತ್ತೇ, ಇಡೀ ವಿಶ್ವದಲ್ಲಿ ಮೊದಲ ಬಾರಿಗೆ ಖಾಸಗಿ ಸಂಸ್ಥೆ ಒಂದು ಕೃತಕ ಉಪಗ್ರಹ ಒಂದನ್ನು ಆಕಾಶಕ್ಕೆ ಕಳುಹಿಸಿತು, ಅದೆ ಸಂಸ್ಥೆಯ ಸ್ಥಾಪಕ ಈ ಎಲಾನ ಮಸ್ಕ್. ಆದರೆ ಈಗ ಎಲಾನ್ ಮಸ್ಕ್ ಸುದ್ದಿಯಲ್ಲಿರುವವದು ಬೇರೆಯದೇ ವಿಷಯಕ್ಕೆ. ಹೌದು ಇಂತಹ ಎಲಾನ್ ಮಸ್ಕ್ ಕೆಲ ದಿನಗಳ ಹಿಂದೆ ತಾವು ಅನುಭವಿಸಿದ ಕಷ್ಟದ ಕುರಿತು ಹೇಳಿಕೊಂಡಿದ್ದಾರೆ.

ವಿಶ್ವದ ದೈತ್ಯ ಕಂಪನಿಗಳಲ್ಲಿ ಒಂದಾದ ಆ್ಯಪಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದ ಟಿಮ್ ಕುಕ್ ಅವರು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರಾಕರಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಟೆಸ್ಲಾ ಕಂಪನಿಯ ಕರಾಳ ದಿನಗಳಲ್ಲಿ ತಮ್ಮ ಕಂಪೆನಿಯನ್ನು ಈಗಿನ ಅದೆ ಕಂಪೆನಿಯ ಪ್ರಸ್ತುತ ಮೌಲ್ಯದ ಹತ್ತನೆಯ ಒಂದು ಭಾಗಕ್ಕೆ ಎಲಾನ ಮಸ್ಕ್ ಮಾರಾಟ ಮಾಡಲು ನಿರ್ಧರಿಸಿದ್ದರಂತೆ ಆದರೆ ಆ್ಯಪಲ್ ಕಂಪನಿ ಅದನ್ನು ನಿರಾಕರಿಸಿತು. ಆದರೆ ಇದೀಗ ಅದೇ ಟೆಸ್ಲಾ ಕಂಪೆನಿಯ ಮಾಲೀಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ವರ್ಷದಲ್ಲಿಯೆ 35 ನೆ ಸ್ಥಾನದಲ್ಲಿದ್ದ ಎಲಾನ ಮಸ್ಕ್ ಕೇವಲ ಹತ್ತು ತಿಂಗಳಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸದ್ಯ ಅವರ ಆಸ್ತಿಯ ಮೌಲ್ಯ ಬರೋಬ್ಬರಿ 9.45 ಲಕ್ಷ ಕೋಟಿ ರೂಪಾಯಿಗಳು. 2020 ರಲ್ಲಿಯೆ 100 ಬಿಲಿಯನ್ ಡಾಲರ್ ಆಸ್ತಿ ಸಂಪಾದಿಸಿರುವ ಎಲಾನ ಮಸ್ಕ್ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದರು. ಇತ್ತೀಚಿಗೆ ಆ್ಯಪಲ್ ಕಂಪನಿಯು ಕಾರುಗಳ ತಯಾರಿಕೆಗೆ ಮುಂದಾಗಿದ್ದು ಟೆಸ್ಲಾ ಕಂಪನಿಯೊಂದಿಗೆ ಪ್ರತಿಸ್ಪರ್ಧೆಗೆ ಇಳಿದಿದ್ದು ಕೆಲವು ಮಾಜಿ ಟೆಸ್ಲಾ ಕಂಪೆನಿಯ ನುರಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನೋಡಿ ಇಂತಹ ಸಾಧಕರ ಸಾಧನೆಯ ಹಿಂದೆ ಎಂತಹ ಕಾಠಿನ್ಯತೆ ಇಂದ ಕೂಡಿದ ದಿನಗಳಿವೆ ಹಾಗು ಕ್ಷಣಗಳಿವೆ.

%d bloggers like this: