ಅಂದು ಅಪ್ಪು ಅವರಿಂದ 30 ಸಾವಿರ ಪಡೆದವರು ಈಗ ಹೊಸ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ

ಬಲಗೈ ಮಾಡುವ ದಾನ ಎಡಗೈಗೆ ತಿಳಿಯಬಾರದು ಎನ್ನುವ ಹಾಗೆ, ಎಲೆಮರೆಕಾಯಿಯಂತಿದ್ದು ಸಹಾಯ ಮಾಡಿದ ಹಿರಿಮೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದ್ದು. ಅನಾಥ ಮಕ್ಕಳಿಗೆ ತಂದೆಯಾಗಿ, ಎಷ್ಟೋ ವೃದ್ಧರಿಗೆ ಮಗನಾಗಿ ಪುನೀತ್ ಅವರು ಮಾಡಿದ ಸಹಾಯ ಹೇಳತೀರದ್ದು. ಅವರಿಂದ ಸಹಾಯ ಪಡೆದ ಎಷ್ಟೋ ಜನ ಇಂದು ಅವರದೇ ಸ್ವಂತ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಪರಮಾತ್ಮ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಕೆಲಸ ಮಾಡಿದ ಗೌರಿಶ್ರೀ ಎಂಬುವವರು, ಇಂದು ಪುನೀತ್ ಅವರ ಸಹಾಯದಿಂದ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ. ಹೌದು ಪರಮಾತ್ಮ ಸಿನಿಮಾದಲ್ಲಿ ಪುನೀತ್ ಅವರ ಜೊತೆ ಕೆಲಸ ಮಾಡುವ ಅವಕಾಶ ಗೌರಿಶ್ರೀ ಅವರಿಗೆ ಸಿಕ್ಕಿತ್ತು.

ಆ ದಿನಗಳನ್ನು ಮೆಲುಕು ಹಾಕಿಕೊಂಡ ಗೌರಿಶ್ರೀಯವರು, ನಾನು ಒಂದು ಡಾನ್ಸ್ ಸ್ಕೂಲ್ ಶುರುಮಾಡಬೇಕು ಎಂದುಕೊಂಡಾಗ ಪುನೀತ್ ಅವರು ನನ್ನ ಬೆನ್ನು ತಟ್ಟಿ ಸಹಾಯ ಮಾಡಿದರು. ಅಂದು ನನಗೆ ಮೂವತ್ತು ಸಾವಿರ ರೂಪಾಯಿಯ ಕೊರತೆ ಆಗಿತ್ತು. ನಾನು ಅವರಿಗೆ ಸಹಾಯ ಕೇಳಿದಾಗ ನಿಂತ ಜಾಗದಲ್ಲಿಯೇ ಪುನೀತ್ ಅವರು ಮೂವತ್ತು ಸಾವಿರ ರೂಪಾಯಿಗಳನ್ನು ನೀಡಿದ್ದರು. ಇಂದು ಅವರ ಆಶೀರ್ವಾದದಿಂದ ನಾನು ಒಂದು ಡಾನ್ಸ್ ಸ್ಕೂಲ್ ತೆರೆದಿದ್ದೇನೆ ಮತ್ತು ಸ್ಕೂಲ್ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.
ಇಷ್ಟೇ ಅಲ್ಲದೆ ಗೌರೀಶ್ರೀರವರು ಇಂದು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಒಂದು ಸಿನಿಮಾವನ್ನು ತಯಾರಿಸುವಷ್ಟು ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ.

ಹೌದು ಗೌರಿಶ್ರೀಯವರು ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಒಂದು ಸಿನಿಮಾವನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಜನರಕ್ಷಕ ಎಂಬ ಹೆಸರಿಡಲಾಗಿದ್ದು, ನಾ ಭಕ್ಷಕ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಲಾಂಚ್ ಮಾಡಿದ ಚಿತ್ರತಂಡ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡರು. ವಿ 2 ಪ್ರೊಡಕ್ಷನ್ ಮೂಲಕ ಜನರಕ್ಷಕ ಸಿನಿಮಾ ತಯಾರಾಗುತ್ತಿದ್ದು, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸ್ವಲ್ಪ ಬಾಕಿ ಇದ್ದು, ಫೈವ್ ಸ್ಟಾರ್ ಗಣೇಶ್ ಅವರು ಡಾನ್ಸ್ ಕೋರಿಯೋಗ್ರಾಫಿ ಮಾಡಿದ್ದಾರೆ.

ಜನರಕ್ಷಕ ಸಿನಿಮಾದಲ್ಲಿ ಅತೀ ದೊಡ್ಡ ತಾರಗಣವಿದ್ದು, ಈ ಚಿತ್ರಕ್ಕೆ ದೇವದಾಸ್ ಅವರ ಸಂಗೀತ ನಿರ್ದೇಶನ ಸಿಕ್ಕಿದೆ. ಜನರಕ್ಷಕ ಸಿನಿಮಾದಲ್ಲಿ ಸ್ವತಹ ತಾವೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಬಂಡವಾಳ ಹೂಡಿ ನೃತ್ಯ ನಿರ್ದೇಶನವನ್ನು ಮಾಡಿರುವ ಗೌರಿಶ್ರೀ ಅವರು, ಕುಡಿತದ ಚಟದಿಂದ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ವಿವರಿಸಿ ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಪ್ರಯತ್ನಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಗೌರಿಶ್ರೀ ಅವರು ನಟಿಸಿದ್ದಾರೆ. ಇವರ ಪ್ರಯತ್ನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೇಗೌಡ ಅವರು ಬೆನ್ನು ತಟ್ಟಿ ಹಾರೈಸಿದ್ದಾರೆ.

ಪೋಸ್ಟರ್ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೇಗೌಡ ಅವರು ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಗೌರಿ ಶ್ರೀ ಅವರಿಗೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯರ ಸಂಖ್ಯೆ ಕಡಿಮೆ. ಡಾ ಪಾರ್ವತಮ್ಮ ರಾಜಕುಮಾರ್ ಅವರನ್ನು ಬಿಟ್ಟರೆ ಯಶಸ್ವಿ ನಿರ್ಮಾಪಕಿಯರು ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಅವರು ಎಷ್ಟೋ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ಕೊಟ್ಟಿದ್ದರು. ಅದೇ ರೀತಿ ಗೌರಿಶ್ರೀ ಅವರು ಕೂಡ ಬೆಳೆಯಲಿ ಎಂದು ಚಿನ್ನೇಗೌಡ ಅವರು ಪ್ರೋತ್ಸಾಹಿಸಿ ಶುಭಹಾರೈಸಿದ್ದಾರೆ.

%d bloggers like this: