ಅಂದು ಬಸ್ ನಿಲ್ದಾಣದಲ್ಲಿ ಮಲಗಿದ್ರು ಯಶ್, ಆದ್ರೆ ಇಂದು ಅವರ ಆಸ್ತಿ ಎಷ್ಟು ಗೊತ್ತೇ

ರಾಕಿಂಗ್ ಸ್ಟಾರ್ ಯಶ್ ಎಂಬ ಹೆಸರು ಕೇಳಿದ ಕೂಡಲೇ ನಮಗೆ ಮೊದಲಿಗೆ ನೆನಪಾಗುವುದು ಅತಿ ವೇಗದ ಅವರ ಬೆಳವಣಿಗೆ. ಹೌದು ಸಿನಿರಂಗಕ್ಕೆ ಬಂದ ಒಂದು ದಶಕದಲ್ಲಿಯೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ನವೀನ್ ಕುಮಾರ್ ಆಗಿ ಕಿರುತೆರೆಗೆ ಬಂದ ಯಶ್ ಅವರು ತಮ್ಮ ಧಾರಾವಾಹಿ ಜೀವನದಲ್ಲಿಯೇ ರಾಧಿಕಾ ಪಂಡಿತ್ ಅವರೊಡನೆ ಒಳ್ಳೆಯ ಸ್ನೇಹಿತರಾದರು. ನಟಿ ರಾಧಿಕಾ ಪಂಡಿತ್ ಅವರು ಕೂಡ ಕಿರುತೆರೆಯ ಹಿನ್ನಲೆಯಲ್ಲಿ ಬಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಸ್ಯಾಂಡಲ್ವುಡ್ ಕ್ವೀನ್ ಎಂದು ನಾಮಾಂಕಿತರದರು. ಈ ಜೋಡಿ ತಮ್ಮ ವೃತ್ತಿ ಜೀವನದ ಬೆಳವಣಿಗೆಯ ಜೊತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಬಂದು ಅದ್ದೂರಿಯಾಗಿ ಮದುವೆ ಕೂಡ ಆಗಿದ್ದು ಈಗ ಇತಿಹಾಸ.

ಈಗ ನಾವು ಹೇಳಹೊರಟಿರುವ ವಿಷಯ ಏನೆಂದರೆ ನಿಮಗೆ ಈ ಸ್ಟಾರ್ ಜೋಡಿಗಳ ಆಸ್ತಿಯ ಮೌಲ್ಯ ಎಷ್ಟು ಎಂದು ಗೊತ್ತೇ, ಹಾಗಿದ್ದರೆ ಇದನ್ನು ಓದಿ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಎಂಬ ಒಂದು ಸಿನಿಮಾದ ಮೂಲಕ ಇಡೀ ದೇಶದಲ್ಲಿ ಕನ್ನಡದ ಬಾವುಟವನ್ನು ಹಾರಿಸಿದರು. ಕೆಜಿಎಫ್ ಚಿತ್ರ ಬೇರೆಲ್ಲಾ ಭಾಷೆಯ ಚಿತ್ರರಂಗದ ಸಿನಿಪ್ರಿಯರು ಕನ್ನಡದತ್ತ ಮುಖ ಮಾಡಿ ನೋಡುವಂತೆ ಮಾಡಿತು. ಘನತೆಯ ಜೊತೆ ಜೊತೆಗೆ ಗಳಿಕೆಯಲ್ಲೂ ಸಹ ಕೆಜಿಎಫ್ ಚಿತ್ರ ಅದ್ಭುತ ದಾಖಲೆಯನ್ನು ಬರೆಯಿತು.

ಚಿತ್ರದಲ್ಲಿ ನಾಯಕನಾಗಿ ನಟಿಸಿದ ಯಶ್ ಅವರಿಗೆ ಸಹ ಉತ್ತಮ ಸಂಭಾವನೆ ದೊರೆಯಿತು. ಈಗ ಯಶ್ ಕೆಜಿಎಫ್ ಎರಡನೇ ಭಾಗದ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡುವ ಹಂತದಲ್ಲಿದ್ದಾರೆ. ಈ ಚಿತ್ರ ಕೂಡ ಬಿಡುಗಡೆಗೆ ಮುನ್ನವೇ ಸಾಕಷ್ಟು ವೇಟಿಂಗ್ ನಲ್ಲಿರುವ ಚಿತ್ರಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಅಲ್ಲದೆ ಯಶ್ ಅವರು ವಿಲನ್ ಎಂಬ ಹೆಸರಿನ ಪರ್ಫ್ಯೂಮ್ ಜಾಹೀರಾತಿನಲ್ಲಿ ಮಿಂಚುತ್ತಿದ್ದು ಅದರಿಂದಲೂ ಕೂಡ ಉತ್ತಮ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ನಟಿ ರಾಧಿಕಾ ಅವರು ಮಕ್ಕಳಾದ ಮೇಲೆ ಕೊಂಚ ಸಿನಿಮಾದಿಂದ ದೂರ ಉಳಿದಿದ್ದಾರೆ.

ಒಟ್ಟಾರೆಯಾಗಿ ಸದ್ಯದ ಮಟ್ಟಿಗೆ ಯಶ್ ಮತ್ತು ರಾಧಿಕಾ ಎಂಬ ಸ್ಟಾರ್ ಜೋಡಿಗಳ ಆಸ್ತಿಯ ಮೌಲ್ಯ 52 ಕೋಟಿ ರೂಪಾಯಿಗಳಷ್ಟು ಇದೆ. ಮಗಳು ಐರಾ ಹುಟ್ಟಿದ ಮೇಲೆ ಯಶ್ ಮತ್ತು ರಾಧಿಕಾ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತ ಮನೆಗೆ ಕಾಲಿರಿಸಿದರು. ಸದ್ಯ ರಾಕಿಂಗ್ ಸ್ಟಾರ್ ಬಳಿ 90 ಲಕ್ಷ ರೂಪಾಯಿ ಮೌಲ್ಯದ ಬೆಂಜ್ ಕಾರ್ ಮತ್ತು 80 ಲಕ್ಷ ರೂಪಾಯಿ ಮೌಲ್ಯದ ಮತ್ತೊಂದು ಬೆಂಜ್ ಕಾರ್ ಇದೆ. ಈಗಾಗಲೇ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ಕಥೆಗಾರರು ಯಶ್ ಅವರಿಗಾಗಿ ಕಥೆಯನ್ನು ಬರೆಯುತ್ತಿದ್ದು, ಇನ್ನು ಕೆಜಿಎಫ್ ಟು ಚಿತ್ರದ ಬಿಡುಗಡೆ ನಂತರ ಯಶ್ ಅವರ ಖ್ಯಾತಿ ಮತ್ತು ಗಳಿಕೆ ಭರ್ಜರಿಯಾಗಿ ಏರುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

%d bloggers like this: