ಮನುಷ್ಯನಿಗೆ ಆಗುವ ಅವಮಾನ ನೋವು ಆತನನ್ನ ಯಾವ ಮಟ್ಟಿಗೆ ಬೇಕಾದರು ಮುಟ್ಟಿಸಬಹುದು. ಈ ಬಡತನ, ಹಸಿವು, ಅವಮಾನ ಎಂಬುದು ಕೆಲವರನ್ನ ಅಂತ್ಯಗೊಳಿಸಿದರೆ, ಇನ್ನೂ ಕೆಲವರಿಗೆ ಅಚ್ಚರಿಯ ಬದುಕನ್ನ ರೂಪಿಸಿಕೊಡುತ್ತದೆ. ಒಂದು ಮಾತಿದೆ ಸಾಧನೆ ಮಾಡಲು ಹೊರಡುವ ವ್ಯಕ್ತಿಯನ್ನ ಮೊದಲು ಅನುಮಾನದಿಂದ ಕಂಡು ಬಳಿಕ ಅವಮಾನ ಮಾಡುತ್ತಾರೆ. ಆದರೆ ಅವರು ಸಾಧಿಸಿದ ಬಳಿಕ ಯಾವ ವ್ಯಕ್ತಿ ಅವಮಾನ ಮಾಡಿದ್ದರೋ ಅವರೇ ಸನ್ಮಾನ ಮಾಡುವ ಸಂಧರ್ಭ ಒದಗಿ ಬರುತ್ತದೆ. ಇದೇ ರೀತಿಯಾಗಿ ಇಂದು ಸಾಧನೆ ಮಾಡಿ ಹೆಸರು ಗಳಿಸಿರುವ ಕ್ರಿಕೆಟ್ ಜಗತ್ತಿನ ವೆಸ್ಟ್ ಇಂಡೀಸ್ ತಂಡದ ಎವಿನ್ ಲೂಯಿಸ್ ಕೂಡ ಈ ರೀತಿಯ ಕಷ್ಟದ ದಿನಗಳನ್ನ ಎದುರಿಸಿ ಬಂದವರಾಗಿದ್ದಾರೆ.

ಹೌದು ವೆಸ್ಟ್ ಇಂಡೀಸ್ ತಂಡದ ಕ್ರಿಕೆಟ್ ಆಟಗಾರ ಎವಿನ್ ಲೂಯಿಸ್ ಅವರು ತಮ್ಮ ಕ್ರಿಕೆಟ್ ಅಭ್ಯಾಸ ದಿನಗಳಲ್ಲಿ ಕಿಟ್ ಬ್ಯಾಗ್ ಹೊತ್ತು ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ಬುಕ್ ಮಾಡಿದರೆ ಅವರ ಈ ದೊಡ್ಡದಾರ ಕ್ರಿಕೆಟ್ ಕಿಟ್ ಬ್ಯಾಗ್ ಅನ್ನು ನೋಡಿ ಎವಿನ್ ಲೂಯಿಸ್ ಅವರನ್ನ ಟ್ಯಾಕ್ಸಿಯಲ್ಲಿ ಕೂರುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ ಅಂತೆ. ಈ ಭಾವನಾತ್ಮಕ ವಿಚಾರವನ್ನು ಸ್ವತಃ ಎವಿನ್ ಲೂಯಿಸ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೆರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಎವಿನ್ ಲೂಯಿಸ್ ಅವರು ತಮ್ಮ ಕಳೆದ ಸೋಮವಾರ ಡಿಸೆಂಬರ್ 27 ರಂದು ಮೂವತ್ತನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಈ ಬರ್ಡೇ ದಿನ ವಿಶೇಷವಾಗಿ ಅವರು ಐಷಾರಾಮಿ ದುಬಾರಿ ಬೆಲೆಯ ಪಾಶ್ ಕಾರನ್ನು ಖರೀದಿ ಮಾಡಿದ್ದಾರೆ. ಕೋಟ್ಯಾಂತರ ರೂ. ಬೆಲೆಯುಳ್ಳ ಈ ಪಾಶ್ ಕಾರು ಎವಿನ್ ಲೂಯಿಸ್ ಅವರ ಡ್ರೀಮ್ ಕಾರಾಗಿತ್ತಂತೆ. ತಮ್ಮ ಕನಸನ್ನು ಈ ಕಾರ್ ಖರೀದಿ ಮಾಡುವ ಮೂಲಕ ಈಡೇರಿಸಿಕೊಂಡಿದ್ದಾರೆ. ಇಂದು ಅನೇಕ ಪ್ರತಿಭಾವಂತ ಕ್ರಿಕೆಟಿಗ ಆಟಗಾರರನ್ನ ಗುರುತಿಸಿ ಅವರಿಗೊಂದು ಉತ್ತಮ ವೇದಿಕೆಯಾಗಿ ನೀಡಿ ಆರ್ಥಿಕವಾಗಿ ಸಧೃಡವಾಗಿಸುವುದಕ್ಕೆ ಕಾರಣ ಅಂದರೆ ಅದು ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್. ಇನ್ನು ವೆಸ್ ಇಂಡೀಸ್ ತಂಡದ ಕ್ರಿಕೆಟಿಗ ಎವಿನ್ ಲೂಯಿಸ್ ಅವರು ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 82 ಸಿಕ್ಸ್ ಬಾರಿಸುವ ಮೂಲಕ ಅತಿ ಹೆಚ್ಚು ಸಿಕ್ಸ್ ಬಾರಿಸಿರುವ ಆಟಗಾರರ ಪೈಕಿ ಮೂರನೇ ಸ್ದಾನವನ್ನು ಪಡೆದಿದ್ದಾರೆ.