ಅಂದು ಕಾರಣಾಂತರಗಳಿಂದ ಸುದೀಪ್ ಅವರ ಹಾಲಿವುಡ್ ಚಿತ್ರ ನಿಂತುಹೋಗಿತ್ತು ಆದರೆ ಇಂದು

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ತಾಕತ್ತು ಏನು ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ದೇಶದ ಕೆಲವೇ ಕೆಲವು ನೈಜ ನಟನೆ ಮಾಡುವ ಕಲಾವಿದರಲ್ಲಿ ಸುದೀಪ ಕೂಡ ಮುಂಚೂಣಿಯಲ್ಲಿ ಬರುವ ನಾಯಕನಟ. ಅವರ ಅಭಿನಯದ ಆಳವನ್ನು ಅರಿತೇ ಬೇರೆ ಭಾಷೆಯ ನಿರ್ದೇಶಕರು ನಿರ್ಮಾಪಕರು ಅವರತ್ತ ಮುಖ ಮಾಡಿ ಬರುವುದು. ಹೀಗಾಗಿಯೇ ತೆಲುಗಿನ ಖ್ಯಾತ ನಿರ್ದೇಶಕ ಬಾಹುಬಲಿ ಖ್ಯಾತಿಯ ರಾಜಮೌಳಿ, ಭಾರತ ಚಿತ್ರರಂಗದ ದಂತಕಥೆ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಅಂತಹ ಖ್ಯಾತನಾಮರ ಜೊತೆ ಕಿಚ್ಚ ಸುದೀಪ್ ಅವರು ಸರಿ ಸಾಟಿಯಾಗಿ ನಿಂತು ಅಭಿನಯಿಸಿ ಕನ್ನಡದ ಬಾವುಟವನ್ನು ಎಲ್ಲೆಡೆ ಹಾರಾಡಿಸಿದರು.

ಕೆಲವು ವರ್ಷಗಳ ಹಿಂದೆ ಎಲ್ಲಾ ಕಡೆ ಒಂದು ಸುದ್ದಿ ಹರಿದಾಡಿತ್ತು ಅದೇನೆಂದರೆ ಕಿಚ್ಚ ಅವರು ಹಾಲಿವುಡ್ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ ಎಂಬುದು. ಹೌದು ಈ ವಿಷಯ ಆಶ್ಚರ್ಯ ಪಡುವಂಥದ್ದೇನೂ ಅಲ್ಲ ಏಕೆಂದರೆ ಸುದೀಪ್ ಅವರಂತಹ ಅದ್ಭುತ ಕಲಾವಿದನಿಗೆ ಅದು ಸಣ್ಣ ವಿಷಯವೇ ಸರಿ. ಈ ಕುರಿತು ಸುದೀಪ್ ಅವರಿಗೆ ಪ್ರಶ್ನಿಸಿದಾಗ ಅವರು ಸಹ ಈ ಸುದ್ದಿ ನಿಜವೆಂದು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ಶೂಟಿಂಗ್ ನಡೆಯಲಿಲ್ಲ.

ಇದರಿಂದ ಬೇರೆ ದೇಶದಲ್ಲಿ ಕಿಚ್ಚನ ಅಭಿನಯವನ್ನು ನೋಡಲು ಬಯಸಿದ್ದ ಅನೇಕ ಸಿನಿರಸಿಕರಿಗೇ ತುಂಬಾ ನಿರಾಸೆಯಾಗಿತ್ತು. ಹಾಗಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಹೌದು ಈಗ ಕಿಚ್ಚ ಸುದೀಪ್ ಅವರೇ ನಮ್ಮ ಕನ್ನಡ ಚಿತ್ರವನ್ನೇ ಹಾಲಿವುಡ್ ರೀತಿಯಲ್ಲಿ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಹೌದು ಅನುಪ್ ಬಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಏನೇ ರಿಲೀಸ್ ಮಾಡಿದರೂ ಎಲ್ಲರೂ ಅದು ಹಾಲಿವುಡ್ ರೀತಿಯಲ್ಲಿಯೇ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಕ್ರಾಂತ ರೋಣ ಎಂಬ ವಿಭಿನ್ನ ಪಾತ್ರಕ್ಕೆ ಕಿಚ್ಚ ಅದ್ಭುತವಾಗಿ ಜೀವ ತುಂಬಿದ್ದಾರೆ.

ಅಷ್ಟೇ ಅಲ್ಲದೆ ಈ ಚಿತ್ರದ ಟ್ರೈಲರ್ ಅನ್ನು ಯಾವದೋ ಬೆಂಗಳೂರಿನ ಸಿನಿಮಾ ಮಂದಿರದಲ್ಲಿ ಸ್ಟುಡಿಯೋ ದಲ್ಲಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟದವಾದ ಐಷಾರಾಮಿ ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ಹಾಲಿವುಡ್ ಚಿತ್ರಗಳು ಬಿಡುಗಡೆ ಮಾಡುವ ರೀತಿಯಲ್ಲಿಯೇ ನಮ್ಮ ಕನ್ನಡ ಚಿತ್ರ ಒಂದು ಟ್ರೈಲರ್ ಬಿಡುಗಡೆ ಮಾಡುತ್ತಿದೆ ಎಂದರೆ ಅದಕ್ಕೆ ಶಹಬಾಶ್ ಎನ್ನಲೇಬೇಕು. ಹಾಲಿವುಡ್ ಚಿತ್ರದಲ್ಲಿ ಕಿಚ್ಚನನ್ನು ನೋಡಲಾಗಲಿಲ್ಲ ಎಂಬ ಬೆಸರವಿದ್ದರೆ ನಮ್ಮ ಕನ್ನಡ ಚಿತ್ರದಲ್ಲಿಯೇ ಹಾಲಿವುಡ್ ರೀತಿಯನ್ನು ನೋಡಲು ಸಜ್ಜಾಗಿರಿ.

%d bloggers like this: