ಅಂದುಕೊಂಡ ಕೆಲಸಗಳೇನೂ ಆಗುತ್ತಿಲ್ಲವೇ, ಈ ಸಣ್ಣ ಕೆಲಸ ಮಾಡಿ ಫಲಿತಾಂಶ ಕಾಣುತ್ತೀರಿ

ನಿಮಗಿದು ತಿಳಿದಿರಲಿ ವಿಷ್ಣು ಸಹಸ್ರನಾಮ ನಿಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಕಲ ಸಮಸ್ಯೆಗಳನ್ನು ನಿವಾರಿಸಬಹುದಾದ ಪ್ರಭಾವಶಾಲಿ ಸ್ತೋತ್ರವಾಗಿದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ನಿಗದಿತ ಸಮಯದೊಳಗೆ ಆಗದೇ ವಿಳಂಬವಾಗುತ್ತಿರುವುದರಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕುಗಳು ಉಂಟಾಗಿ ವ್ಯಾಪಾರದಲ್ಲಿ ನಷ್ಟ ಉಂಟಾಗುವುದು, ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡರೆ ಅರ್ಧಕ್ಕೆ ನಿಲ್ಲುವುದು ಇಂತಹ ಅಡೆತಡೆಗಳು ನಿಮ್ಮ ಜೀವನದಲ್ಲಿ ತೊಂದರೆ ಕೊಡುತ್ತಿದೆಯಾದರೆ ಈ ವಿಷ್ಣುಸಹಸ್ರನಾಮದ ಮಹತ್ವ ವಿಚಾರವನ್ನು ತಿಳಿಯಲೇಬೇಕಾಗಿದೆ.

ಕೆಲವು ಜನ್ಮ ನಕ್ಷತ್ರಗಳ ದೋಷದಿಂದ ನಿಮಗೆ ನಿಮ್ಮ ಆಸೆ, ಆಕಾಂಕ್ಷೆಗಳು ನನಸಾಗದೇ ಕನಸಾಗಿಯೇ ಉಳಿದಿರುವುದು. ನಿಮ್ಮ ಮನಸ್ಸಿನ ಕೋರಿಕೆಗಳು ಸದಾ ಮುಂದೂಡಲ್ಪಡುವಂತದ್ದು ಕೆಲಸ ಕಾರ್ಯದಲ್ಲಿ ಸಹೋದ್ಯೊಗಿಗಳ ಅಸಹಕಾರ, ಹೊಂದಾಣಿಕೆಯ ಕೊರತೆ, ಉದ್ಯೋಗದಲ್ಲಿ ಬಯಸಿದ ಬಡ್ತಿ ಹೀಗೆ ವೃತ್ತಿಯ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳು ಮಾತ್ರವಲ್ಲದೆ ಕೌಟಂಬಿಕ ಸಮಸ್ಯೆ, ಕೋರ್ಟ್, ಭೂಮಿ ವ್ಯಾಜ್ಯ ಹೀಗೆ ಪ್ರತಿಯೊಂದು ಕೆಲಸದಲ್ಲಿಯೂ ನಿಮಗೆ ವಿಘ್ನವಾಗುವುದರ ಜೊತೆಗೆ ವಿಳಂಬವಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ಈ ಮಂತ್ರವನ್ನು ಪಠಿಸಿ ಇಂತಹ ಹಲವಾರು ಸಮಸ್ಯೆಗಳು ನಿವಾರಣೆ ಆಗುತ್ತದೆ.

ಪ್ರತಿದಿನ ಬೆಳಿಗ್ಗೆ ಅಥವಾ ಸಂಧ್ಯಾಕಾಲದಲ್ಲಿ ಅಂದರೆ ಸೂರ್ಯ ಉದಯಕ್ಕೂ ಮುಂಚೆ ಸಾಧ್ಯವಾಗದಿದ್ದಲ್ಲಿ ಸೂರ್ಯಾಸ್ತ ಆದ ನಂತರದಲ್ಲಿ ಒಂದು ವಿಷ್ಣುಸಹಸ್ರನಾಮವನ್ನು ಸಂಪೂರ್ಣವಾಗಿ ಪಠಿಸಬೇಕು. ಪಠಿಸಲು ಹೇಳಲು ತೊಂದರೆಯಾದರೆ ಆ ವಿಷ್ಣು ಸಹಸ್ರನಾಮವನ್ನು ಅಲಿಸುತ್ತಾ ದೇವರ ಕೋಣೆಯಲ್ಲಿ ಕುಳಿತು ನಿಮ್ಮ ಕುಲದೇವರನ್ನು ಪ್ರಾರ್ಥಿಸುತ್ತಾ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು.

ಧರ್ಮಶಾಸ್ತ್ರದ ಅನುಸಾರವಾಗಿ ಈ ರೀತಿಯಾಗಿ ವಿಷ್ಣುಸಹಸ್ರ ನಾಮವನ್ನು 108 ದಿನಗಳಿಂದ 180ದಿನಗಳವರೆಗೆ ನಿರಂತರವಾಗಿ ಪಠಿಸಿದರೆ ನಿಮ್ಮ ಇಷ್ಟಾರ್ಥ ಕಾರ್ಯಗಳು ಸಿದ್ದಿಯಾಗಲಿವೆ ಎಂದು ತಿಳಿಸುತ್ತಾರೆ. ಮನೆಯ ಕುಲ ದೇವರನ್ನು ಪೂಜಿಸಿ ನೈವೇದ್ಯಮಾಡಿಟ್ಟು ಅದನ್ನು ಮನೆಯ ಸದಸ್ಯರೆಲ್ಲರಿಗೂ ಹಂಚಿತಿನ್ನುವುದರಿಂದ ಎಲ್ಲರ ಶ್ರೇಯಸ್ಸು,ಆರೋಗ್ಯ ಪ್ರಗತಿ ವೃದ್ದಿಯಾಗುತ್ತದೆ ಹಿರಿಯ ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: